ಪ್ರಧಾನಿ ನರೇಂದ್ರ ಮೋದಿ ಎದುರು ರಾಹುಲ್ ಗಾಂಧಿ ಬಚ್ಚಾ: ಬಿಎಸ್​ ಯಡಿಯೂರಪ್ಪ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಎದುರು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಬಚ್ಛಾ ಇದ್ದ ಹಾಗೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹರಿಹಾಯ್ದಿದ್ದಾರೆ.

Follow us
ಗಂಗಾಧರ​ ಬ. ಸಾಬೋಜಿ
|

Updated on:Mar 04, 2023 | 9:32 PM

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಎದುರು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಬಚ್ಛಾ ಇದ್ದ ಹಾಗೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಹರಿಹಾಯ್ದಿದ್ದಾರೆ. ರಾಮದುರ್ಗ ಪಟ್ಟಣದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿ, ಇಡೀ ಜಗತ್ತೇ ಮೆಚ್ಚಿರೋ ನಾಯಕ ಅಂದ್ರೆ ಮೋದಿ. ಅಭಿವೃದ್ಧಿ ದಾಪುಗಾಲು ಹಾಕುವ ಶುಭ ಸಂದರ್ಭ ಇದು. ಜನರು ಪ್ರಧಾನಿ ಮೋದಿ ಆಡಳಿತ ಮೆಚ್ಚಿದ್ದಾರೆ. ಮೋದಿ ಒಂದೇ ಒಂದು ದಿನ ವಿಶ್ರಾಂತಿ ತೆಗೆದುಕೊಂಡಿಲ್ಲ. ಅವರ ಕಾರ್ಯಕ್ಕೆ ನಾವು ಬೆಂಬಲ ನೀಡಬೇಕಿದೆ. ನಿತ್ಯ ಪೂಜೆ ಮಾಡುವ ವೇಳೆ ಮೋದಿಗೆ ಒಳ್ಳೆಯದು ಆಗಲಿ, ದೇಶಕ್ಕೆ ಒಳ್ಳೆಯದು ಆಗಲಿ ಅಂತ ಬೇಡಿಕೊಳ್ಳಿ ಎಂದು ಮಹಿಳೆಯರಿಗೆ ಯಡಿಯೂರಪ್ಪ ಮನವಿ ಮಾಡಿಕೊಂಡರು. ಸ್ಪಷ್ಟ ಬಹುಮತ ಮತ್ತೆ ನಮಗೆ ಬರುತ್ತೆ. ನಾನು ಮನೆಯಲ್ಲಿ ಕುಳಿತುಕೊಳ್ಳಲ್ಲ. ಮೂರು ತಿಂಗಳ ಕಾಲ ರಾಜ್ಯದ ಉದ್ದಗಲಕ್ಕೂ ಓಡಾಡುತ್ತೇನೆ ಮತ್ತು ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹೇಳಿದರು.

ಇಲ್ಲಿನ ಶಾಸಕರು ಮೂರು ಸಾವಿರ ಕೋಟಿ ಅನುದಾನ ತಂದಿದ್ದಾರೆ. ಕ್ಷೇತ್ರದ ಅಭಿವೃದ್ಧ ಮಾಡಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯಾದವಾಡ ಬಗ್ಗೆ ಇಷ್ಟೊಂದು ಗೌರವ ಸಲ್ಲಿಸಿದ್ದು ಖುಷಿ ತಂದಿದೆ. ಇಲ್ಲಿಗೆ ನಾವು 500 ರೂ ಕೊಟ್ಟು ಯಾರನ್ನೂ ನಾವು ಕರೆದುಕೊಂಡು ಬಂದಿಲ್ಲ. ಸಿದ್ದರಾಮಯ್ಯ ಆ್ಯಂಡ್ ಕಂಪನಿ ನಿಮಗೆ ಹೇಳುದು ನಾನು. ಹಗಲು ಕನಸು ಕಾಣುತ್ತಿದ್ದೀರಿ ಅದು ಆಗೋದಿಲ್ಲ. ದೇಶದ ಎಲ್ಲ ಕಡೆ ಅಧಿಕಾರ ಕಳೆದುಕೊಂಡು ತಬ್ಬಲಿಯಾಗಿದ್ದೀರಿ ಎಂದು ಕಿಡಿಕಾರಿದರು.

ಇದನ್ನೂ ಓದಿ: ಬೆಂಗಳೂರಿನ ಒಂದು ರಸ್ತೆಗೆ ಪಿಆರ್​ ತಿಪ್ಪೇಸ್ವಾಮಿ ಹೆಸರಿಡಲು ಬೇಡಿಕೆ: ನಾಳೆಯೇ ಚರ್ಚಿಸಿ ಕ್ರಮಕೈಗೊಳ್ಳುವೆ ಎಂದ ಸಿಎಂ ಬೊಮ್ಮಾಯಿ

ನಾನು ಸಿಎಂ ಆಗಿದ್ದಾಗ ಉಚಿತ ವಿದ್ಯುತ್ ಕೊಟ್ಟಿದ್ದೇನೆ, ನೀವೇನು ಕೊಟ್ಟಿದ್ದೀರಿ? ಭಾಗ್ಯಲಕ್ಷ್ಮೀ ಯೋಜನೆ, ಹಾಲು ಉತ್ಪಾದಕರಿಗೆ ಸಹಾಯ ಮಾಡಿದ್ದೇನೆ, ನೀವೇನು ಮಾಡಿದ್ರಿ. ಭಾರತ ಕಾಂಗ್ರೆಸ್ ಮುಕ್ತ ಭಾರತ ಆಗಬೇಕು. 50 ವರ್ಷದಲ್ಲಿ ಏನು ಮಾಡಿದ್ದೀರಿ ನೀವು. ಜಿಲ್ಲೆಯ ಎಲ್ಲ ಕ್ಷೇತ್ರದಲ್ಲಿ ನಾವು ಗೆಲ್ಲಬೇಕಿದೆ ಎಂದು ಹೇಳಿದರು.

ನಾವೀಗ ವಿಶ್ವದ 5ನೇ ಶಕ್ತಿಯಾಗಿ ಬೆಳೆದು ನಿಂತಿದ್ದೇವೆ: ಪ್ರಲ್ಹಾದ್​​ ಜೋಶಿ

ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್​​ ಜೋಶಿ ಮಾತನಾಡಿ, 300 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ದೇವಸ್ಥಾನ ಒಡೆದು ಹಾಕಿದ್ದರು. ಬಾಬರ್​ ದೇವಸ್ಥಾನ ಒಡೆದು ಹಾಕಿದ್ದ ಸ್ಥಳದಲ್ಲೇ ದೇಗುಲ ನಿರ್ಮಿಸಿದ್ದೇವೆ. 2024ರ ಜನವರಿಯಲ್ಲಿ ಅದೇ ಸ್ಥಳದಲ್ಲಿ ದೇವಸ್ಥಾನ ಉದ್ಘಾಟಿಸುತ್ತಿದ್ದೇವೆ. ದೇಶದ ಅಸ್ಮಿತೆಗಾಗಿ ನಾವು ಹೊಡೆದಾಡುತ್ತಿರುವುದು ನಮ್ಮ ಕಣ್ಣ ಮುಂದಿದೆ. 200 ವರ್ಷಗಳ ಹಿಂದೆ ಹಾವಾಡಿಸುವವರು, ಗಿಡ ಪೂಜಿಸುವವರು ಅಂತಿದ್ರು. ಆದರೆ ನಾವೀಗ ವಿಶ್ವದ 5ನೇ ಶಕ್ತಿಯಾಗಿ ಬೆಳೆದು ನಿಂತಿದ್ದೇವೆ. ಬ್ರಿಟನ್​ ಹಿಂದಿಕ್ಕಿ ನಾವು ಮುಂದೆ ಹೋಗಿದ್ದೇವೆ. ಮುಂದಿನ ದಿನಗಳಲ್ಲಿ ಅಮೆರಿಕ, ಚೀನಾಗೆ ಫೈಟ್ ಕೊಟ್ಟು ಮುಂದೋಗುತ್ತೇವೆ ಎಂದರು.

ಇದನ್ನೂ ಓದಿ: ಹೆಚ್​ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ ಕಳ್ಳಮಳ್ಳ ಇದ್ದಹಾಗೆ: ಸಚಿವ ಆರ್‌.ಅಶೋಕ್‌ ವಾಗ್ದಾಳಿ

ಕಾಂಗ್ರೆಸ್​ನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು

ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಆತಂಕವಿದೆ ಎಂದು ರಾಹುಲ್​ ಹೇಳಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್​ನವರು 200 ಯೂನಿಟ್ ಉಚಿತ ವಿದ್ಯುತ್​ ಘೋಷಿಸಿದ್ದಾರೆ. ಮನೆಯ ಮುಖ್ಯಸ್ಥೆ ಖಾತೆಗೆ 2 ಸಾವಿರ ಹಣ ಹಾಕುವುದಾಗಿ ಹೇಳಿದ್ದಾರೆ. ಕಾಂಗ್ರೆಸ್​ನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ವಿಪಕ್ಷ ನಾಯಕ ಸಿದ್ದರಾಮಯ್ಯ ಹಣೆಗೆ ತಿಲಕವಿಟ್ಟರೆ ಒರೆಸಿಕೊಳ್ಳುತ್ತಾರೆ. 75 ವರ್ಷದ ನಿಮ್ಮ ಆಡಳಿತದಲ್ಲಿ 24 ಗಂಟೆ ಕರೆಂಟ್ ಕೊಡಲು ಆಗಲಿಲ್ಲ. ಮೋದಿ ಅಧಿಕಾರಕ್ಕೆ ಬಂದ ಬಳಿಕ ಒನ್ ನೇಷನ್ ಒನ್ ಕರೆಂಟ್​ ಮಾಡಿದ್ವಿ. ನಾವೀಗ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೇವೆ. ಕಾಶ್ಮೀರಕ್ಕೆ ಹೋಗಿ ಐಸ್ ಆಟ ಆಡಿರುವುದಕ್ಕೆ ಮೋದಿ, ಶಾ ಕಾರಣ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:32 pm, Sat, 4 March 23

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ