ಎಲೆ ಚುಕ್ಕಿ, ಹಳದಿ ರೋಗಕ್ಕೆ ಲ್ಯಾಬ್ ಓಪನ್ ಮಾಡುವ‌ ಪ್ರಕ್ರಿಯೆ ಚಾಲ್ತಿಯಲ್ಲಿದೆ: ಜೆ.ಪಿ.ನಡ್ಡಾ

|

Updated on: Feb 20, 2023 | 7:16 PM

Karnataka Election 2023: 1982 ರಲ್ಲೇ 62 ಕಿ.ಮೀ. ಪದಾಯಾತ್ರೆ ಮಾಡಿದ್ದು ಯಡಿಯೂರಪ್ಪ. ಅಡಕೆ ಬೆಳೆಗಾರರ ಬಗ್ಗೆ ಪಾದಯಾತ್ರೆ ಮಾಡಿದ ಏಕೈಕ ನಾಯಕ ಎಂದರೆ ಅದು ಯಡಿಯೂರಪ್ಪ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ಎಲೆ ಚುಕ್ಕಿ, ಹಳದಿ ರೋಗಕ್ಕೆ ಲ್ಯಾಬ್ ಓಪನ್ ಮಾಡುವ‌ ಪ್ರಕ್ರಿಯೆ ಚಾಲ್ತಿಯಲ್ಲಿದೆ: ಜೆ.ಪಿ.ನಡ್ಡಾ
ಜೆ.ಪಿ.ನಡ್ಡಾ
Image Credit source: IANS Photo
Follow us on

ಚಿಕ್ಕಮಗಳೂರು: ಅಡಕೆ (Arecanut) ಕೃಷಿಗೆ ಭಾದಿಸಿದ ಎಲೆ ಚುಕ್ಕಿ, ಹಳದಿ ರೋಗಕ್ಕೆ (Arecanut diseases) ಲ್ಯಾಬ್ ಓಪನ್ ಮಾಡುವ‌ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (J.P.Nadda) ಹೇಳಿದರು. ಜಿಲ್ಲೆಯ ಕೊಪ್ಪದಲ್ಲಿ ನಡೆದ ಅಡಕೆ ಬೆಳೆಗಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಎಲೆಚುಕ್ಕಿ ರೋಗದ ನಿಯಂತ್ರಣಕ್ಕೆ ಕರ್ನಾಟಕ ಬಜೆಟ್​ನಲ್ಲಿ 25 ಕೋಟಿ ಅನುದಾನ ಮೀಸಲಿಟ್ಟು, ಸಂಶೋಧನೆ ಆರಂಭಿಸದ್ದೇವೆ. ತೀರ್ಥಹಳ್ಳಿ-ಶೃಂಗೇರಿಗೆ 10 ಕೋಟಿ ಹಣ ನೀಡಿ ರೋಗದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿದ್ದೇವೆ. ಅಡಕೆ ಹಾಗೂ ನಿಮ್ಮ ರಕ್ಷಣೆಗೆ ಎಲ್ಲಾ‌ ಸಮಯದಲ್ಲೂ ನಿಮ್ಮ ಜೊತೆ ಇರುತ್ತವೆ ಎಂದು ಭರವಸೆ ನೀಡಿದರು. ಅಲ್ಲದೆ, ನಮ್ಮ ದೇಶದಲ್ಲಿ ಕಳ್ಳ ಅಡಕೆ ಮಾರಾಟಕ್ಕೆ ಅವಕಾಶ ಇಲ್ಲ ಎಂದರು.

1982 ರಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಡಕೆ ಬೆಳೆಗಾರರ ಬಗ್ಗೆ 62 ಕಿ.ಮೀ. ಪದಾಯಾತ್ರೆ ನಡೆಸಿದ್ದರು. ಹೀಗೆ ಅಡಕೆ ಬೆಳೆಗಾರರ ಬಗ್ಗೆ ಪಾದಯಾತ್ರೆ ಮಾಡಿದ ಏಕೈಕ ನಾಯಕನೆಂದರೆ ಅದು ಯಡಿಯೂರಪ್ಪ ಮಾತ್ರ ಎಂದು ಹಾಡಿಹೊಗಳಿದ ನಡ್ಡಾ, 2014ರಲ್ಲಿ ನಾವು ಕೇವಲ 2 ಮೆಗಾ ಪಾರ್ಕ್‌ ಹೊಂದಿದ್ದೆವು. ಇಂದು 22 ಮೆಗಾ ಪಾರ್ಕ್ ಗಳಿವೆ. ಕರ್ನಾಟಕದಲ್ಲಿ 2017ರಲ್ಲಿ 2 ಲಕ್ಷದ 79 ಸಾವಿರ ಎಕರೆ ಅಡಕೆ ಇತ್ತು. ಇಂದು 5 ಲಕ್ಷ 41 ಸಾವಿರ ಎಕರೆಯಲ್ಲಿ ಅಡಕೆ ಬೆಳೆಯುತ್ತಿದ್ದಾರೆ. ಅದರಂತೆ ಶೇಕಡ 78 ರಷ್ಟು ಅಡಿಕೆ ಬೆಳೆಗಾರರ ಸಂಖ್ಯೆ ಹೆಚ್ಚಾಗಿದೆ ಎಂದರು.

ಇದನ್ನೂ ಓದಿ: ಹೇಳಿದ್ದನ್ನು ಮಾಡುವ ತಾಕತ್ತು ಬಿಜೆಪಿ ಜನಪ್ರತಿನಿಧಿಗಳಿಗೆ ಮಾತ್ರ ಇದೆ: ಉಡುಪಿಯಲ್ಲಿ ಜೆ.ಪಿ.ನಡ್ಡಾ ಹೇಳಿಕೆ

ನಾವು ಏನೇ ಮಾತನಾಡಿದರು ಅಂಕಿ ಅಂಶಗಳ ಆಧಾರದ ಮೇಲೆ ಮಾತನಾಡುತ್ತೇವೆ. ಮಾಧ್ಯಮದವರು ಇದ್ದಾರೆ ನಾವು ಅಂಕಿಅಂಶಗಳ ಆಧಾರದ ಮೇಲೆ ಮಾತನಾಡಬೇಕು ಎಂದು ಹೇಳಿದ ನಡ್ಡಾ, ಅಡಕೆ ಬೆಳೆಗಾರರ ಬೆನ್ನಿಗೆ ನಿಂತಿರುವುದು ಕೇವಲ ಬಿಜೆಪಿ ಮಾತ್ರ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಡಕೆ ಬೆಳೆಗಾರರ ಪರ ಇದೆ. ಕೆಲವರು ನಾವು ರೈತರು, ಕಿಸಾನ್ ಮುಖಂಡರು ಎಂದು ಹೇಳುತ್ತಾರೆ. ಕೊಟ್ಟ ಮಾತಿನಂತೆ ನಡೆದುಕೊಂಡ ಪ್ರಧಾನಿ ನರೇಂದ್ರ ಮೋದಿ ನಿಜವಾದ ರೈತ ಮುಖಂಡ ಎಂದರು. ಕೊಪ್ಪಕ್ಕೆ ಬಂದಿರುವುದು ನನ್ನ ಸೌಭಾಗ್ಯ. ಇಲ್ಲಿನ ವಾತಾವರಣ ತುಂಬಾ ಚೆನ್ನಾಗಿದೆ. ಈ ಪವಿತ್ರ ಸ್ಥಳಕ್ಕೆ ಬಂದಿರುವುದು ನನ್ನ ಪುಣ್ಯ. ಶೃಂಗೇರಿ ಶಾರದಾಂಭೆ ಪಾದಗಳಿಗೂ ನಮಿಸುತ್ತೇನೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:14 pm, Mon, 20 February 23