ಹೇಳಿದ್ದನ್ನು ಮಾಡುವ ತಾಕತ್ತು ಬಿಜೆಪಿ ಜನಪ್ರತಿನಿಧಿಗಳಿಗೆ ಮಾತ್ರ ಇದೆ: ಉಡುಪಿಯಲ್ಲಿ ಜೆ.ಪಿ.ನಡ್ಡಾ ಹೇಳಿಕೆ
ಒಡೆದು ಆಳುವುದು ಕಾಂಗ್ರೆಸ್ನ ಮೂಲ ಸ್ವಭಾವವಾಗಿದೆ. ಪಿಎಫ್ಐನ 1600 ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದರು. ಸಮಾಜದಲ್ಲಿ ಅಶಾಂತಿ ಮೂಡಿಸುವುದು ಮತ್ತು ಸಮಾಜದಲ್ಲಿ ವಿಭಜನೆ ಮಾಡಬೇಕು ಅನ್ನೋದು ಅವರ ಉದ್ದೇಶವಾಗಿತ್ತು ಎಂದು ಜೆ.ಪಿ.ನಡ್ಡಾ ಹೇಳಿದರು.
ಉಡುಪಿ: ಭಾರತದಲ್ಲಿ ಮೊದಲ ಬಾರಿ ಬಿಜೆಪಿ ಬಾವುಟ ಹಾರಿದ್ದು ಉಡುಪಿಯಲ್ಲಿ. ಈ ಜಿಲ್ಲೆಗೆ ಬಿಜೆಪಿಗೆ ವಿಶೇಷ ಸ್ಥಾನವಿದೆ. ಕಾಂಗ್ರೆಸ್ ಕಾರಣಕ್ಕೆ ನಾವು ವಿಚಲಿತರಾಗುವುದು ಬೇಡ. ಬಿಜೆಪಿ ಈ ಭಾಗದಲ್ಲಿ ಮಾಡಿದ ಕೆಲಸವನ್ನು ಜನ ಮರೆಯಲ್ಲ, ಹೇಳಿದ್ದನ್ನು ಮಾಡುವ ತಾಕತ್ತು ಬಿಜೆಪಿ ಜನಪ್ರತಿನಿಧಿಗಳಿಗೆ ಮಾತ್ರ ಇದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (J.P.Nadda) ಹೇಳಿದರು. ಜಿಲ್ಲೆಯ ಬೈಂದೂರಿನಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ (Udupi BJP Convention) ಮಾತನಾಡಿದ ಅವರು, ಅಮೆರಿಕದಲ್ಲಿ ಕೇವಲ ಶೇಕಡಾ 70ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ನಮಗೆಲ್ಲರಿಗೂ ಡಬಲ್ ಡೋಸ್ ಲಸಿಕೆ ನೀಡಿದ್ದಾರೆ. ಕಾಂಗ್ರೆಸ್ಸಿಗರು ನಾವು ಪ್ರಯೋಗ ಪಸುಗಳಲ್ಲ, ಲಸಿಕೆ ಬೇಡ ಎಂದು ಹೇಳುತ್ತಾ ಕದ್ದು ಮುಚ್ಚಿ ಹೋಗಿ ಲಸಿಕೆ ಪಡೆದಿದರು ಎಂದರು.
ಫೆಬ್ರವರಿ 6ರಂದು ಮೋದಿ ಕರ್ನಾಟಕಕ್ಕೆ ಬಂದು ಎಚ್ಎಎಲ್ನಲ್ಲಿ ಹೆಲಿಕಾಪ್ಟರ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ದಾರೆ. ಸ್ಪೇಸ್ ಕ್ರಾಫ್ಟ್ ಶೇ.25 ಕರ್ನಾಟಕಕ್ಕೆ ಲಭಿಸಲಿದೆ ಎಂದು ಹೇಳಿದ ನಡ್ಡಾ, ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ನಂಬರ್ 1 ಆಗಿದೆ. ಏರ್ಕ್ರಾಫ್ಟ್ ವಿಭಾಗದಲ್ಲಿ ಕರ್ನಾಟಕದ ಪಾಲು ಶೇ.70ರಷ್ಟು ಇದೆ ಎಂದರು. ಅಲ್ಲದೆ, ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರದಿಂದ ದಲಿತರು, ಬುಡಕಟ್ಟು, ರೈತರು ಸೇರಿ ಎಲ್ಲ ವರ್ಗಗಳಿಗೆ ಅನುಕೂಲವಾಗುತ್ತಿದೆ ಎಂದರು.
ಒಡೆದು ಆಳುವುದು ಕಾಂಗ್ರೆಸ್ನವರ ಮೂಲ ಸ್ವಭಾವ
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ನಡ್ಡಾ, ಒಡೆದು ಆಳುವುದು ಕಾಂಗ್ರೆಸ್ನವರ ಮೂಲ ಸ್ವಭಾವವಾಗಿದೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವವರನ್ನು ಬಿಡುಗಡೆ ಮಾಡಿದ್ದಾರೆ. ಪಿಎಫ್ಐನ 1,600 ಕಾರ್ಯಕರ್ತರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದರು. ಆ ಮೂಲಕ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಶಾಂತಿ ಮೂಡಿಸುವ, ಸಮಾಜ ಒಡೆಯುವ ಹಾಗೂ ರಾಜ್ಯವನ್ನು ದುರ್ಬಲಗೊಳಿಸಲು ಉದ್ದೇಶ ಹೊಂದಿತ್ತು ಎಂದರು.
ಇದನ್ನೂ ಓದಿ: ಇಂದು ಕೃಷ್ಣ ಮಠಕ್ಕೆ ಭೇಟಿ ನೀಡಿ ನನ್ನ ಜೀವನ ಪಾವನವಾಗಿದೆ ಎಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ
ಲೋಕಾಯುಕ್ತ ಸಂಸ್ಥೆಯನ್ನು ಯಾಕೆ ಮುಚ್ಚಿದರು ಅಂತಾ ಉತ್ತರ ನೀಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ ನಡ್ಡಾ, ತಮ್ಮ ಭ್ರಷ್ಟಾಚಾರ ಮುಚ್ಚಿಹಾಕಲು ಲೋಕಾಯುಕ್ತ ಮುಚ್ಚಿದರು. ಇಂಥವರ ಸರಕಾರ ನಮಗೆ ಬೇಕಾ? ಎಂದು ನೆರೆದಿದ್ದ ಜನರನ್ನು ಪ್ರಶ್ನಿಸಿ, ಕೇಂದ್ರ ಸರ್ಕಾರದ ಆಶೀರ್ವಾದ, ಯಡಿಯೂರಪ್ಪ ಹಾಗೂ ಬೊಮ್ಮಾಯಿ ಕೆಲಸ ಮುಂದುವರೆಯಲು ಬಿಜೆಪಿ ಆಡಳಿತಕ್ಕೆ ಮತ್ತೊಮ್ಮೆ ಬರಬೇಕು ಎಂದರು.
ಡಾಕ್ಟರ್ ವಿ ಎಸ್ ಆಚಾರ್ಯರನ್ನು ನೆನೆದ ನಡ್ಡಾ
ಸಮಾವೇಶದಲ್ಲಿ ಮಾತನಾಡುತ್ತಾ ನಡ್ಡಾ ಅವರು ಡಾ.ವಿ.ಎಸ್ ಆಚಾರ್ಯ ಅವರನ್ನು ನೆನೆದರು. ನನಗೂ ಅವಿರಿಗೂ 30 ವರ್ಷ ಅಂತರವಿತ್ತು, ಆದರೂ ಗೆಳೆಯನಂತೆ ನೋಡಿದ್ದರು. ಐಡಿಯಲ್ ಪಾಲಿಟಿಕ್ಸ್ಗೆ ಆಚಾರ್ಯ ಮಾದರಿಯಾಗಿದ್ದಾರೆ ಎಂದರು. ಮುಂದುವರೆದ ಮಾತನಾಡಿದ ಅವರು, ನಮ್ಮ ದೇಶ ಅಮೃತ ಮಹೋತ್ಸವ ಆಚರಿಸುತ್ತಿದೆ. ಈ ವೇಳೆ ದೇಶದಲ್ಲಿ ಮೋದಿ ಸರ್ಕಾರವಿದೆ, ನಾವು ಅವರ ಜೊತೆಗಿದ್ದೇವೆ ಅನ್ನೋದು ಹೆಮ್ಮೆ. 2047 ಬಂದಾಗ ನಮ್ಮ ದೇಶ ಶಿಖರದಲ್ಲಿರಿತ್ತದೆ. ನೀವೆಲ್ಲಾ ದೊಡ್ಡ ಕೊಡುಗೆ ನೀಡಲಿದ್ದೀರಿ. ಇದೇ ಕಾರಣಕ್ಕೆ ನಾವೆಲ್ಲ ಸೌಭಾಗ್ಯವಂತರು ಎಂದರು.
ಯುದ್ಧ ನಿಲ್ಲಿಸಿ ದೇಶವಾಸಿಗಳನ್ನು ಕರೆತಂದ ಪ್ರಧಾನಿ ಮೋದಿ ಹೊರತುಪಡಿಸಿ ಬೇರೆ ಯಾವ ಪ್ರಧಾನಿ ಇದ್ದಾರೆ? ರಷ್ಯಾ ಮತ್ತು ಉಕ್ರೇನ್ ಎರಡು ದೇಶಗಳ ಜೊತೆ ಮಾತನಾಡಿ ಯುದ್ಧ ನಿಲ್ಲಿಸಿ ಸಾವಿರಾರು ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತಂದ ಶ್ರೇಯಸ್ಸು ಮೋದಿಗೆ ಸಲ್ಲಬೇಕು. ಕರ್ನಾಟಕದ 600 ಮಂದಿ ವಿದ್ಯಾರ್ಥಿಗಳು ಸುರಕ್ಷಿತವಾಗಿ ಬಂದಿದ್ದಾರೆ ಎಂದು ನಡ್ಡಾ ಹೇಳಿದರು.
ಈಗ ರಾಜ್ಯದಲ್ಲಿ ಕಾಂಗ್ರೆಸ್ ಪವರ್ ಕಟ್ಟಾಗಿದೆ ಎಂದ ನಡ್ಡಾ
ಸಿದ್ದರಾಮಯ್ಯ ಕಾಲದಲ್ಲಿ ರಾಜ್ಯದಲ್ಲಿ ವಿದ್ಯುತ್ ಕೊರತೆ, ಪವರ್ ಕಟ್ ಸಮಸ್ಯೆ ಇತ್ತು. ಈಗ ಕಾಂಗ್ರೆಸ್ ಪವರ್ ಕಟ್ಟಾಗಿದೆ ಎಂದು ಹೇಳಿದ ನಡ್ಡಾ, ಭಾರತ ಎನರ್ಜಿ ಕನ್ಸಪಂಶನ್ ಮೇಲೆ ಮೂರನೇ ಸ್ಥಾನದಲ್ಲಿದೆ. ಮರುಬಳಕೆ ಮಾಡಬಹುದಾದ ಇಂಧನ ವಿಭಾಗದಲ್ಲಿ ನಾಲ್ಕನೇ ಸ್ಥಾನದಲ್ಲಿದೆ, ನಮ್ಮ ದೇಶದಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ಕೇವಲ ಶೇಕಡಾ 3 ಇತ್ತು. ಈಗ ಪ್ರಪಂಚದ ಶೇಕಡಾ 40 ಟ್ರಾನ್ಸಾಕ್ಷನ್ ನಮ್ಮ ದೇಶದಲ್ಲಿ ಆಗುತ್ತಿದೆ. 25 ಲಕ್ಷ ಕೋಟಿ ರೂಪಾಯಿ ನೇರವಾಗಿ ಫಲಾನುಗಳಿಗೆ ತಲುಪುತ್ತಿದೆ, 300ಕ್ಕೂ ಅಧಿಕ ಯೋಜನೆಗಳ ಫಲಾನುಭವಿಗಳಿಗೆ ಮಧ್ಯವರ್ತಿಗಳಿಲ್ಲದೆ ತಲುಪುತ್ತಿದೆ, ಮೋದಿ ಒಂದು ಬಟನ್ ಒತ್ತಿದ ತಕ್ಷಣ ರೈತರ ಅಕೌಂಟಿಗೆ 2,000 ಹಣ ಬೀಳುತ್ತದೆ. ಭಾರತ ವಿಶ್ವದ ಫಾರ್ಮಸಿ ಆಗಿ ಮಾರ್ಪಟ್ಟಿದೆ, 200 ದೇಶಗಳಿಗೆ ಔಷದ ಸರಬರಾಜು ಮಾಡುತ್ತಿದೆ. 39 ಶೇಕಡ ಮನೆಗಳಲ್ಲಿ ಮಾತ್ರ ಶೌಚಾಲಯ ಇತ್ತು, ಈಗ ಶೇಕಡ 98 ಮನೆಗಳಲ್ಲಿ ಶೌಚಾಲಯ ಬಂದಿದೆ. ನಳ್ಳಿ ನೀರು ಶೇಕಡ 58 ರಷ್ಟು ಮನೆಗಳಿಗೆ ತಲುಪಿದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:30 pm, Mon, 20 February 23