ಪಶ್ಚಿಮ ಬಂಗಾಳದಲ್ಲಿ ಸಿಎಎ ಜಾರಿಯಾಗಲಿದೆ, ಧೈರ್ಯವಿದ್ದರೆ ನಿಲ್ಲಿಸಿ: ಮಮತಾ ಬ್ಯಾನರ್ಜಿಗೆ ಬಿಜೆಪಿ ಸವಾಲು

| Updated By: ರಶ್ಮಿ ಕಲ್ಲಕಟ್ಟ

Updated on: Nov 27, 2022 | 6:17 PM

ನಾವು ಸಿಎಎ ಬಗ್ಗೆ ಹಲವಾರು ಬಾರಿ ಚರ್ಚಿಸಿದ್ದೇವೆ. ಅದನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದು. ನಿಮಗೆ ಧೈರ್ಯವಿದ್ದರೆ, ಅದನ್ನು ಜಾರಿಗೊಳಿಸುವುದನ್ನು ನಿಲ್ಲಿಸಿ ಎಂದು ನಂದಿಗ್ರಾಮ್ ಶಾಸಕರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಸವಾಲೆಸೆದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸಿಎಎ ಜಾರಿಯಾಗಲಿದೆ, ಧೈರ್ಯವಿದ್ದರೆ ನಿಲ್ಲಿಸಿ: ಮಮತಾ ಬ್ಯಾನರ್ಜಿಗೆ ಬಿಜೆಪಿ ಸವಾಲು
ಸುವೇಂದು ಅಧಿಕಾರಿ
Follow us on

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಯಾಗಲಿದೆ ಎಂದು ಪಶ್ಚಿಮ ಬಂಗಾಳ (West Bengal ) ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ (Suvendu Adhikari) ಹೇಳಿದ್ದು ಧೈರ್ಯವಿದ್ದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು (Mamata Banerjee) ಅದನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದ್ದಾರೆ. ಬಾಂಗ್ಲಾದೇಶದಲ್ಲಿ ಬೇರುಗಳನ್ನು ಹೊಂದಿರುವ ಮಾಟುವಾಗಳ ಪ್ರಾಬಲ್ಯವಿರುವ ಪ್ರದೇಶವಾದ ಉತ್ತರ 24 ಪರಗಣ ಜಿಲ್ಲೆಯ ಠಾಕೂರ್‌ನಗರದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಅಧಿಕಾರಿ, ಕಾನೂನು ದಾಖಲೆಗಳೊಂದಿಗೆ ವಿಶ್ವಾಸಾರ್ಹ ನಿವಾಸಿಯಾಗಿದ್ದರೆ ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳಲಾಗುವುದಿಲ್ಲ ಎಂದಿದ್ದಾರೆ.”ನಾವು ಸಿಎಎ ಬಗ್ಗೆ ಹಲವಾರು ಬಾರಿ ಚರ್ಚಿಸಿದ್ದೇವೆ. ಅದನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದು. ನಿಮಗೆ ಧೈರ್ಯವಿದ್ದರೆ, ಅದನ್ನು ಜಾರಿಗೊಳಿಸುವುದನ್ನು ನಿಲ್ಲಿಸಿ ಎಂದು ನಂದಿಗ್ರಾಮ್ ಶಾಸಕರು ಮುಖ್ಯಮಂತ್ರಿಗೆ ಸವಾಲೆಸೆದಿದ್ದಾರೆ.
ಸಿಎಎ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ವಲಸಿಗರಿಗೆ ಪೌರತ್ವವನ್ನು ನೀಡಲು ಅನುಕೂಲ ಮಾಡಿಕೊಡುತ್ತದೆ. ಆದರೆ ಕಾಯ್ದೆಯಡಿ ನಿಯಮಗಳನ್ನು ಸರ್ಕಾರವು ಇನ್ನೂ ರೂಪಿಸದ ಕಾರಣ, ಇದುವರೆಗೆ ಯಾರಿಗೂ ಅದರ ಅಡಿಯಲ್ಲಿ ಪೌರತ್ವ ನೀಡಲು ಸಾಧ್ಯವಾಗಲಿಲ್ಲ.

“ಮಾಟುವಾ ಸಮುದಾಯದ ಸದಸ್ಯರಿಗೂ ಪೌರತ್ವ ನೀಡಲಾಗುವುದು” ಎಂದು ಸುವೇಂದು ಅಧಿಕಾರಿ ಶನಿವಾರ ಸಾರ್ವಜನಿಕ ಸಭೆಯಲ್ಲಿ ಹೇಳಿದರು.

ರಾಜಕೀಯವಾಗಿ ಮಹತ್ವದ ಸಮುದಾಯವಾದ ಮಟುವಾ ಬಿಜೆಪಿ ಮತ್ತು ತೃಣಮೂಲ ಪಾಳಯಗಳಾಗಿ ವಿಭಜಿಸಲ್ಪಟ್ಟಿವೆ. ರಾಜ್ಯದಲ್ಲಿ ಅಂದಾಜು 30-ಲಕ್ಷ ಮಾಟುವಾರನ್ನು ಹೊಂದಿರುವ ಸಮುದಾಯವು ನಾಡಿಯಾ, ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಕನಿಷ್ಠ ಐದು ಲೋಕಸಭಾ ಸ್ಥಾನಗಳು ಮತ್ತು ಸುಮಾರು 50 ವಿಧಾನಸಭಾ ಸ್ಥಾನಗಳಲ್ಲಿ ಪ್ರಭಾವ ಹೊಂದಿದೆ.

ಕೇಂದ್ರ ಸಚಿವ ಮತ್ತು ಬೊಂಗಾವ್‌ನ ಬಿಜೆಪಿ ಸಂಸದ ಶಾಂತನು ಠಾಕೂರ್ ಕೂಡ ಸಿಎಎ ಪಶ್ಚಿಮ ಬಂಗಾಳದಲ್ಲಿ ವಾಸ್ತವವಾಗಲಿದೆ. ನರೇಂದ್ರ ಮೋದಿ ಸರ್ಕಾರವು ಗುರಿಯನ್ನು ಸಾಧಿಸಲು ಬದ್ಧವಾಗಿದೆ ಎಂದು ಹೇಳಿದರು. ಏತನ್ಮಧ್ಯೆ, ತೃಣಮೂಲ ನಾಯಕ ಮತ್ತು ಪಶ್ಚಿಮ ಬಂಗಾಳದ ಹಿರಿಯ ಸಚಿವ ಫಿರ್ಹಾದ್ ಹಕೀಮ್ ಅವರು 2023 ರ ಪಂಚಾಯತ್ ಚುನಾವಣೆ ಮತ್ತು 2024 ರ ಲೋಕಸಭಾ ಚುನಾವಣೆಯ ಮೊದಲು ವೋಟ್ ಬ್ಯಾಂಕ್ ರಾಜಕೀಯದ ಮೇಲೆ ಕಣ್ಣಿಟ್ಟು ಸಿಎಎ ಕಾರ್ಡ್‌ನೊಂದಿಗೆ ಬಿಜೆಪಿ ಆಡುತ್ತಿದೆ. ಆದರೆ, ನಾವು ಅದನ್ನು ಎಂದಿಗೂ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.