ಬೆಂಗಳೂರು ಅ.28: ಕಾಂಗ್ರೆಸ್ (Congress), ಜೆಡಿಎಸ್ (JDS) ಮೈತ್ರಿ ಸರ್ಕಾರ ತೆಗೆದ ಟೀಂ ಮತ್ತೆ ಕೆಲಸ ಮಾಡುತ್ತಿದೆ. ಬೆಳಗ್ಗೆ ರೆಡಿಯಾಗಿ ಕಾಂಗ್ರೆಸ್ ಶಾಸಕರ ಮನೆಗೆ ಹೋಗುತ್ತಾರೆ. ಸ್ಪೆಷಲ್ ಫೈಟ್ ಮಾಡುತ್ತೇವೆ, ಅಮಿತ್ ಶಾ ಅವರನ್ನು ಮೀಟ್ ಮಾಡಿಸುತ್ತೇವೆ. 50 ಕೋಟಿ ರೂಪಾಯಿ ಕೊಡುತ್ತೇವೆ ಅಂತಾ ಹೇಳಿ ಅಮಿಷ ಒಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರವಿ ಗಣಿಗ ಆರೋಪ ಮಾಡಿದ್ದರು. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಾತನಾಡಿ ಆಪರೇಷನ್ ಕಮಲ ಬಗ್ಗೆ ನನಗೆ ಗೊತ್ತಿಲ್ಲ, ರವಿ ಗಣಿಗ ಜತೆ ಮಾತನಾಡಿಲ್ಲ. ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ಆಗ್ತಿದೆ ಅಂತಾ ಮಾಹಿತಿ ಇತ್ತು. ಆದರೆ ಬಿಜೆಪಿಯವರಿಗೆ ಅದು ಸಾಧ್ಯವಿಲ್ಲ ಎಂದು ಹೇಳಿದರು.
ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ ಹಣದ ಆಫರ್ ನೀಡಿದ್ದಾರೆಂಬ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ ಇದರ ಹಿಂದೆ ಭಾರಿ ಷಡ್ಯಂತ್ರ ನಡೆದಿದೆ, ಇದ್ಯಾವುದೂ ಫಲ ನೀಡಲ್ಲ. ಪ್ರತಿಯೊಬ್ಬರ ನಡೆ ಕೂಡ ನಮಗೆ ಗೊತ್ತಿದೆ. ಷಡ್ಯಂತ್ರ ನಡೆಸಲು ಕೆಲ ದೊಡ್ಡವರು ಕೂಡ ಪ್ರಯತ್ನ ಮಾಡುತ್ತಿದ್ದಾರೆ. ಅವರ ಯಾವ ಪ್ರಯತ್ನಗಳು ಫಲ ನೀಡಲ್ಲ ಎಂದರು.
ಇದನ್ನೂ ಓದಿ: ಮೈತ್ರಿ ಸರ್ಕಾರ ತೆಗೆದ ಟೀಂ ಮತ್ತೆ ಕೆಲಸ ಮಾಡುತ್ತಿದೆ, ಶೀಘ್ರದಲ್ಲಿ ವಿಡಿಯೋ ಬಿಡುಗಡೆ ಮಾಡುವೆ: ಕೈ ಶಾಸಕ
2018ರ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಮೆಜಾರಿಟಿ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮಿಶ್ರ ಸರ್ಕಾರ ರಚನೆಯಾಗಿತ್ತು. ಒಂದು ವರ್ಷದ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ನ 17 ಶಾಸಕರು ಬಂಡಾಯವೆದ್ದು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇವರ ಈ ಬಂಡಾಯದ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ. ಬಿಜೆಪಿ ಆಪರೇಷನ್ ಕಮಲ ಮಾಡಿದೆ ಎಂದು ಆರೋಪ ಕೇಳಿಬಂದಿತ್ತು. ಸರ್ಕಾರವನ್ನು ಕೆಡವಲು ಬಿಜೆಪಿ ಮಾಡಿದ ಹುನ್ನಾರ ಇದು ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿತ್ತು. ಬಹುಮತ ಇಲ್ಲದ ಕಾರಣ ಸಮಿಶ್ರ ಸರ್ಕಾರ ಬಿತ್ತು, ಬಿಜೆಪಿ ಅಧಿಕಾರದ ಗದ್ದುಗೆ ಏರಿತ್ತು. ಇದೀಗ ಚುನಾವಣೆ ನಡೆದು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:00 pm, Sat, 28 October 23