Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ ಡಿನ್ನರ್​ಗಾಗಿ ಸಿಎಂ ಸಿದ್ದರಾಮಯ್ಯ ನಿನ್ನೆ ರಾತ್ರಿ ಗೃಹ ಸಚಿವ ಪರಮೇಶ್ವರ್ ನಿವಾಸಕ್ಕೆ ಬಂದಿದ್ದರೆ?

ಕೇವಲ ಡಿನ್ನರ್​ಗಾಗಿ ಸಿಎಂ ಸಿದ್ದರಾಮಯ್ಯ ನಿನ್ನೆ ರಾತ್ರಿ ಗೃಹ ಸಚಿವ ಪರಮೇಶ್ವರ್ ನಿವಾಸಕ್ಕೆ ಬಂದಿದ್ದರೆ?

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 28, 2023 | 10:41 AM

ಮತ್ತೊಂದು ಸಂಗತಿಯೆಂದರೆ, ಸತೀಶ್, ಕೆಲ ‘ಸಮಾನಮನಸ್ಕ’ ಶಾಸಕರೊಂದಿಗೆ ದುಬೈ ಪ್ರವಾಸ ಹೋಗಲಿದ್ದಾರಂತೆ. ಈ ಸಂಗತಿ ಬಗ್ಗೆ ನಿನ್ನೆ ಪರಮೇಶ್ವರ್, ತಮ್ಮ ದುಡ್ಡಿನಲ್ಲಿ ಶಾಪಿಂಗ್ ಗಾಗಿ ಹೋಗುತ್ತಿರುವವರನ್ನು ಬೇಡ ಅಂತ ತಡೆಯಲಾಗುತ್ತಾ ಅಂದಿದ್ದರು. ಇದೆಲ್ಲದರ ನಡುವೆ ನಿನ್ನೆ ರಾತ್ರಿ ಸಿದ್ದರಾಮಯ್ಯ, ಸತೀಶ್ ಮತ್ತು ಹೆಚ್ ಸಿ ಮಹದದೇವಪ್ಪ; ಪರಮೇಶ್ವರ್ ಮನೆಯಲ್ಲಿ ಊಟಕ್ಕೆ ಸೇರಿದ್ದಾರೆ!

ಬೆಂಗಳೂರು: ಏನೋ ನಡೀತಾ ಇದೆ ಮಾರಾಯ್ರೇ, ಅದರೆ ರಾಜ್ಯ ಕಾಂಗ್ರೆಸ್ ನ ಪ್ರಮುಖರ‍್ಯಾರೂ ಸುಳಿವು ನೀಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನಿನ್ನೆ ರಾತ್ರಿ ದಿಢೀರನೆ ಗೃಹಸಚಿವ ಜಿ ಪರಮೇಶ್ವರ್ (G Parameshwar) ಮನೆಗೆ ಬಂದಿದ್ದರು. ಸಿಎಂ ಭೇಟಿಯಲ್ಲಿ ವಿಶೇಷತೆಯೇನೂ ಇಲ್ಲ ಊಟಕ್ಕೆ ಸೇರಿದ್ದು ಅಂತ ಪರಮೇಶ್ವರ್ ಹೇಳುತ್ತಾರೆ. ಪರಮೇಶ್ವರ್ ಮನೇಲಿ ಸತೀಶ್ ಜಾರಕಿಹೊಳಿ (Satish Jarkiholi) ಇಲ್ಲದೆ ಹೋಗಿದ್ದರೆ, ಪರಮೇಶ್ವರ್ ಹೇಳಿದ್ದಕ್ಕೆ ‘ಹೌದಾ ಸರ್?’ ಅನ್ಕೊಂಡು ಸುಮ್ಮನಾಗಬಹುದಿತ್ತು. ನಿಮಗೆ ಗೊತ್ತಿದೆ, ಸತೀಶ್ ಪ್ರಾಯಶಃ ಡಿಕೆ ಶಿವಕುಮಾರ್ ವಿಷಯದಲ್ಲಿ ಅಸಮಾಧಾನ ಹೊಂದಿರುವಂತಿದೆ. ಕೆಲ ದಿನಗಳ ಹಿಂದೆ ಶಿವಕುಮಾರ್ ಬೆಳಗಾವಿಗೆ ಭೇಟಿ ನೀಡಿದಾಗ ಸತೀಶ್ ಮೈಸೂರಲ್ಲಿದ್ದರು. ಅದು ಉದ್ದೇಶಪೂರ್ವಕ ನಡೆ ಅಂತ ಕಾಂಗ್ರೆಸ್ ನಾಯಕರಿಗೆ ಚೆನ್ನಾಗಿ ಗೊತ್ತು. ಮತ್ತೊಂದು ಸಂಗತಿಯೆಂದರೆ, ಸತೀಶ್, ಕೆಲ ‘ಸಮಾನಮನಸ್ಕ’ ಶಾಸಕರೊಂದಿಗೆ ದುಬೈ ಪ್ರವಾಸ ಹೋಗಲಿದ್ದಾರಂತೆ. ಈ ಸಂಗತಿ ಬಗ್ಗೆ ನಿನ್ನೆ ಪರಮೇಶ್ವರ್, ತಮ್ಮ ದುಡ್ಡಿನಲ್ಲಿ ಶಾಪಿಂಗ್ ಗಾಗಿ ಹೋಗುತ್ತಿರುವವರನ್ನು ಬೇಡ ಅಂತ ತಡೆಯಲಾಗುತ್ತಾ ಅಂದಿದ್ದರು. ಇದೆಲ್ಲದರ ನಡುವೆ ನಿನ್ನೆ ರಾತ್ರಿ ಸಿದ್ದರಾಮಯ್ಯ, ಸತೀಶ್ ಮತ್ತು ಹೆಚ್ ಸಿ ಮಹದದೇವಪ್ಪ; ಪರಮೇಶ್ವರ್ ಮನೆಯಲ್ಲಿ ಊಟಕ್ಕೆ ಸೇರಿದ್ದಾರೆ! ಇದನ್ನೆಲ್ಲ ನೋಡುತ್ತಿದ್ದರೆ ಸಂಥಿಂಗ್ ಫಿಶಿ ಅನಿಸದಿರದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ