ಮೈತ್ರಿ ಸರ್ಕಾರ ತೆಗೆದ ಟೀಂ ಮತ್ತೆ ಕೆಲಸ ಮಾಡುತ್ತಿದೆ, ಶೀಘ್ರದಲ್ಲಿ ವಿಡಿಯೋ ಬಿಡುಗಡೆ ಮಾಡುವೆ: ಕೈ ಶಾಸಕ

ಬಿಎಸ್​ ಯಡಿಯೂರಪ್ಪ ಪಿಎ ಆಗಿದ್ದ ಸಂತೋಷ್ ಗೋಲ್ಡ್ ಫಿಂಚ್ ಹೋಟೆಲ್​ನಲ್ಲಿ ನಮ್ಮ ಶಾಸಕನನ್ನು ಭೇಟಿಯಾಗಿದ್ದಾನೆ. ಯಾರು ಓಡಾಡುತ್ತಿದ್ದಾರೋ ಅವರ ವಿಡಿಯೋ ನಮ್ಮ ಬಳಿ ಇದೆ. ಕೆಲವೇ ದಿನಗಳಲ್ಲಿ ಆ ವಿಡಿಯೋ ಬಿಡುಗಡೆ ಮಾಡುತ್ತೇವೆ ಎಂದು ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಶಾಸಕ ರವಿ ಗಣಿಗ ಹೇಳಿದರು.

ಮೈತ್ರಿ ಸರ್ಕಾರ ತೆಗೆದ ಟೀಂ ಮತ್ತೆ ಕೆಲಸ ಮಾಡುತ್ತಿದೆ, ಶೀಘ್ರದಲ್ಲಿ ವಿಡಿಯೋ ಬಿಡುಗಡೆ ಮಾಡುವೆ: ಕೈ ಶಾಸಕ
ಶಾಸಕ ರವಿ ಗಣಿಗ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ವಿವೇಕ ಬಿರಾದಾರ

Updated on: Oct 27, 2023 | 10:17 AM

ದಾವಣಗೆರೆ ಅ.27: ಕಾಂಗ್ರೆಸ್ (Congress), ಜೆಡಿಎಸ್ (JDS)​ ಮೈತ್ರಿ ಸರ್ಕಾರ ತೆಗೆದ ಟೀಂ ಮತ್ತೆ ಕೆಲಸ ಮಾಡುತ್ತಿದೆ. ಬೆಳಗ್ಗೆ ರೆಡಿಯಾಗಿ ಕಾಂಗ್ರೆಸ್ ಶಾಸಕರ‌‌ ಮನೆಗೆ ಹೋಗುತ್ತಾರೆ. ಸ್ಪೆಷಲ್ ಫೈಟ್ ಮಾಡುತ್ತೇವೆ, ಅಮಿತ್ ಶಾ ಅವರನ್ನು ಮೀಟ್ ಮಾಡಿಸುತ್ತೇವೆ. 50 ಕೋಟಿ ರೂಪಾಯಿ ಕೊಡುತ್ತೇವೆ ಅಂತಾ ಹೇಳಿ ಅಮಿಷ ಒಡ್ಡುತ್ತಾರೆ. ಈ ಗ್ಯಾಂಗ್​ನಲ್ಲಿ ಬಿಎಸ್​ ಯಡಿಯೂರಪ್ಪ (BS Yediyurappa) ಪಿಎ ಆಗಿದ್ದ ಸಂತೋಷ್ ಸಹ ಇದ್ದಾರೆ ಎಂದು ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಶಾಸಕ ರವಿ ಗಣಿಗ (Ravi Ganig) ಆರೋಪ ಮಾಡಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಗೋಲ್ಡ್ ಫಿಂಚ್ ಹೋಟೆಲ್​ನಲ್ಲಿ ನಮ್ಮ ಶಾಸಕನನ್ನು ಭೇಟಿಯಾಗಿದ್ದಾನೆ. ಯಾರು ಓಡಾಡುತ್ತಿದ್ದಾರೋ ಅವರ ವಿಡಿಯೋ ನಮ್ಮ ಬಳಿ ಇದೆ. ಕೆಲವೇ ದಿನಗಳಲ್ಲಿ ಆ ವಿಡಿಯೋ ಬಿಡುಗಡೆ ಮಾಡುತ್ತೇವೆ. ಆದರೆ ನಮ್ಮ ಶಾಸಕರು ಅವರ ಆಮಿಷಗಳಿಗೆ ಬಲಿಯಾಗುವುದಿಲ್ಲ ಎಂದರು.

ಇದನ್ನೂ ಓದಿ: ’ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಸಾಧ್ಯವಾದ ಅಂಶಗಳು’: ಕಾಂಗ್ರೆಸ್​ ವಿರುದ್ಧ ಬಿಜೆಪಿ ಕಿಡಿ

ಹುಲಿ ಉಗುರು ಧರಿಸಿದ ಹಿನ್ನೆಲೆಯಲ್ಲಿ ಬಿಗ್​ ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​ ಬಂಧಿಸಿದ ವಿಚಾರವಾಗಿ ಮಾತನಾಡಿದ ಅವರು ಹುಲಿ ಉಗುರು ಹಾಕಿಕೊಂಡಿದ್ದಾನೆ ಎಂದು ಅಮಾಯಕ ರೈತನನ್ನು ಬಂಧನ ಮಾಡಿದ್ದೀರಿ. ಅದೇ ರೀತಿ ಯಾರು ಯಾರು ಹಾಕಿಕೊಂಡಿದ್ದಾರೋ ಅವರನ್ನು ಕೂಡ ಬಂಧನ ಮಾಡಿ. ಒಬ್ಬರಿಗೆ ಒಂದು ಕಾನೂನು ಇನ್ನೊಬ್ಬರಿಗೆ ಒಂದು ಕಾನೂನಾ? ಎಂದು ಪ್ರಶ್ನಿಸಿದ್ದಾರೆ.

ಅಮಾಯಕ ಪೂಜಾರಿಗಳನ್ನು, ಸಂತೋಷ್​ನನ್ನು ಅರೆಸ್ಟ್‌ ಮಾಡಿದ್ರಿ. ಸಂತೋಷ್ ಶೋಕಿಗಾಗಿ ಹಾಕಿಕೊಳ್ಳುತ್ತಿದ್ದನು. ಆತನನ್ನು ಬಿಗ್ ಬಾಸ್ ಮನೆಯಿಂದಲೇ ಅರೆಸ್ಟ್ ಮಾಡಿದ್ರಿ. ಅದೇ ರೀತಿ ಎಲ್ಲಾರನ್ನು ಅರೆಸ್ಟ್ ಮಾಡಿ ನೋಡೋಣಾ. ನಮ್ಮದೇ ಸರ್ಕಾರ ಇದೆ ಅದಕ್ಕೆ ಹೇಳುತ್ತಿರುವುದು. ಸೆಲೆಬ್ರಿಟಿಗೆ ಒಂದು ಕಾನೂನು ಸಾಮಾನ್ಯನಿಗೆ ಒಂದು ಕಾನೂನಾ. ಎಲ್ಲಾರಿಗೂ ನೋಟೀಸ್ ಕೊಡುವ ಬದಲು ಅರೆಸ್ಟ್ ಮಾಡಿ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ