ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಗೈರು: ಹಿಂದೂ ವಿರೋಧಿ ನಿಲುವಿಗೆ ಇದೇ ಉದಾಹರಣೆ ಎಂದ ಯತ್ನಾಳ್

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಗೈರು ಆಗಲು ನಿರ್ಧರಿಸಿರುವ ವಿಚಾರವಾಗಿ ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ಟ್ವೀಟ್ ಮಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹಿಂದೂ ವಿರೋಧಿ ನಿಲುವು ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. ಇವರ ಡೋಂಗಿ ಜಾತ್ಯತೀತವಾದಕ್ಕೆ ಹಿಡಿದ ಕೈಗನ್ನಡಿ ಎಂದರು.

ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಗೈರು: ಹಿಂದೂ ವಿರೋಧಿ ನಿಲುವಿಗೆ ಇದೇ ಉದಾಹರಣೆ ಎಂದ ಯತ್ನಾಳ್
ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಗೈರು: ಹಿಂದೂ ವಿರೋಧಿ ನಿಲುವಿಗೆ ಇದೇ ಉದಾಹರಣೆ ಎಂದ ಬಸನಗೌಡ ಪಾಟೀಲ್ ಯತ್ನಾಳ್
Edited By:

Updated on: Jan 11, 2024 | 9:31 AM

ವಿಜಯಪುರ, ಜ.11: ಅಯೋಧ್ಯೆ ರಾಮ ಮಂದಿರ (Ayodhya Ram Mandir) ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಗೈರು ಆಗಲು ನಿರ್ಧರಿಸಿರುವ ವಿಚಾರವಾಗಿ ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ಹಿಂದೂ ವಿರೋಧಿ ನಿಲುವು ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnla) ಹೇಳಿದ್ದು, ಇವರ ಡೋಂಗಿ ಜಾತ್ಯತೀತವಾದಕ್ಕೆ ಹಿಡಿದ ಕೈಗನ್ನಡಿ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಯತ್ನಾಳ್, ಕಾಂಗ್ರೆಸ್ ಪಕ್ಷದ ನೈಜ ಮನಃಸ್ಥಿತಿ, ಹಿಂದೂ ವಿರೋಧಿ ನಿಲುವು ಏನೆಂದು ತಿಳಿಯುವುದಕ್ಕೆ ಇದಕ್ಕಿಂತ ಉತ್ತಮವಾದ ಉದಾಹರಣೆ ಬೇಕಿಲ್ಲ. ಇಡೀ ದೇಶದಲ್ಲೇ ಹಬ್ಬದ ವಾತಾವರಣವಿರಬೇಕಾದರೆ, ಕ್ಷುಲ್ಲಕ ರಾಜಕಾರಣಕ್ಕೆ ಇವರು ಶ್ರೀ ರಾಮ ದೇವರ ಪ್ರಾಣಪ್ರತಿಷ್ಠಾಪನೆಯ ಆಮಂತ್ರಣವನ್ನು ತಿರಸ್ಕರಿಸುವುದು ಇವರ ಡೋಂಗಿ ಜಾತ್ಯತೀತವಾದಕ್ಕೆ ಹಿಡಿದ ಕೈಗನ್ನಡಿ. ಶ್ರೀ ರಾಮನು ಇವರಿಗೆ ಒಳ್ಳೆಯ ಬುದ್ದಿಯನ್ನು ನೀಡಲಿ ಎಂದರು.

ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್

ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಭಗವಾನ್ ಶ್ರೀರಾಮನ ಪ್ರಾಣಪ್ರತಿಷ್ಠಾಪನಾ ಸಮಾರಂಭವನ್ನು ಬಹಿಷ್ಕರಿಸುವ ಉದ್ದೇಶಪೂರ್ವಕ ನಿರ್ಧಾರದ ಮೂಲಕ ಕಾಂಗ್ರೆಸ್ ಪಕ್ಷದ ಹುಸಿ ಜಾತ್ಯತೀತತೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಲಾಗಿದೆ ಎಂದು ಯತ್ನಾಳ್ ಹೇಳಿದರು.

ಇದನ್ನೂ ಓದಿ: ವಿಜಯಪುರ ಮಹಾನಗರ ಪಾಲಿಕೆ ಕೊನೆಗೂ ಕಾಂಗ್ರೆಸ್​ ತೆಕ್ಕೆಗೆ, ಯತ್ನಾಳ್​ಗೆ ಮುಖಭಂಗ

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ವಿರುದ್ಧ ಹೋರಾಡಲು ದೇಶದ ಉನ್ನತ ಕಾನೂನು ದಿಗ್ಗಜರನ್ನು ತೊಡಗಿಸಿಕೊಂಡಿದ್ದು ಕಾಂಗ್ರೆಸ್ ಎಂಬುದನ್ನು ಹಿಂದೂಗಳು ಮರೆಯಬಾರದು. ಜನವರಿ 22 ರಂದು ಪ್ರಾಣಪ್ರತಿಷ್ಠಾಪನೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುವುದರಲ್ಲಿ ಇಡೀ ರಾಷ್ಟ್ರವೇ ಸಂಭ್ರಮಿಸುತ್ತಿದ್ದರೆ, ಕಾಂಗ್ರೆಸ್ ಪಕ್ಷ ಮತ್ತು ಅದರ ಬೆಂಬಲಿಗರು ಇದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಹೊಂದಿದ್ದಾರೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ