ಚಿತ್ರದುರ್ಗ: ಕಲ್ಲು, ದೊಣ್ಣೆಗಳಿಂದ ಹೊಡೆದಾಡಿಕೊಂಡ ಹೊಳಲ್ಕೆರೆ ಪುರಸಭೆ ಸದಸ್ಯರು, ಬೆಂಬಲಿಗರು

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪುರಸಭೆ ಸದಸ್ಯರು ಹಾಗೂ ಬೆಂಬಲಿಗರ ನಡುವೆ ಸಿನಿಮಾ ಶೈಲಿಯಲ್ಲಿ ಹೊಡೆದಾಟ ನಡೆದ ಘಟನೆ ನಡೆದಿದೆ. ನೀರಿನ ಟ್ಯಾಂಕ್ ವಿಚಾರವಾಗಿ ಪುರಸಭೆ ಸದಸ್ಯರಾದ ಕೆ.ಸಿ ರಮೇಶ್ ಹಾಗೂ ಸುಧಾ ಬಸವರಾಜ್ ಗುಂಪಿನ ನಡುವೆ ಹೊಡೆದಾಟ ನಡೆದಿದೆ. ಕೆಲ ದಿನಗಳ ಹಿಂದೆ ನಡೆದ ಘರ್ಷಣೆಯ ವಿಡಿಯೋ ವೈರಲ್ ಆಗುತ್ತಿದೆ.

ಚಿತ್ರದುರ್ಗ: ಕಲ್ಲು, ದೊಣ್ಣೆಗಳಿಂದ ಹೊಡೆದಾಡಿಕೊಂಡ ಹೊಳಲ್ಕೆರೆ ಪುರಸಭೆ ಸದಸ್ಯರು, ಬೆಂಬಲಿಗರು
ಕಲ್ಲು, ದೊಣ್ಣೆಗಳಿಂದ ಹೊಡೆದಾಡಿಕೊಂಡ ಹೊಳಲ್ಕೆರೆ ಪುರಸಭೆ ಸದಸ್ಯರು, ಬೆಂಬಲಿಗರು
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: Rakesh Nayak Manchi

Updated on: Jan 11, 2024 | 8:32 AM

ಚಿತ್ರದುರ್ಗ, ಜ,11: ಜಿಲ್ಲೆಯ (Chitradurga) ಹೊಳಲ್ಕೆರೆ ಪುರಸಭೆ (Holalkere municipal) ಸದಸ್ಯರು ಹಾಗೂ ಬೆಂಬಲಿಗರ ನಡುವೆ ಸಿನಿಮಾ ಶೈಲಿಯಲ್ಲಿ ಹೊಡೆದಾಟ ನಡೆದ ಘಟನೆ ನಡೆದಿದೆ. ನೀರಿನ ಟ್ಯಾಂಕ್ ವಿಚಾರವಾಗಿ ಪುರಸಭೆ ಸದಸ್ಯರಾದ ಕೆ.ಸಿ ರಮೇಶ್ ಹಾಗೂ ಸುಧಾ ಬಸವರಾಜ್ ಬೆಂಬಲಿಗರು ಪರಪಸ್ಪರ ಕಲ್ಲು ಹಾಗೂ ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ.

ಹೊಳಲ್ಕೆರೆ ಪಟ್ಟಣದಲ್ಲಿ ಎರಡು ಗುಂಪುಗಳ ಮಧ್ಯೆ ಕೆಲ ದಿನಗಳ ಹಿಂದೆ ಘರ್ಷಣೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗೃಹಮಂಡಳಿ ಲೇಔಟ್​ನಲ್ಲಿರುವ ನೀರಿನ ಟ್ಯಾಂಕ್ ನೆಲಸಮ ಮಾಡುವ ವಿಚಾರವಾಗಿ ಭಿನ್ನಾಭಿಪ್ರಾಯ ಉಂಟಾಗಿ ಎರಡು ತಂಡಗಳ ನಡುವೆ ಗಲಾಟೆ ನಡೆದಿದೆ.

ಇದನ್ನೂ ಓದಿ: ಭಗವಂತ ಖೂಬಾಗೆ ಟಿಕೆಟ್ ವಿರೋಧಸಿದ ಪ್ರಭುಚೌಹಾಣ್; ಗದ್ದಲದ ನಡುವೆ ಬಿಜೆಪಿ ಸಭೆಯಿಂದ ಹೊರನಡೆದ ಖೂಬಾ

ಕೆ.ಸಿ.ರಮೇಶ ಅವರು ಹೊಳಲ್ಕೆರೆ ಮಾಜಿ ಶಾಸಕ ಹೆಚ್.ಆಂಜನೇಯ ಬೆಂಬಲಿಗರಾಗಿದ್ದು, ಬಿಜೆಪಿಯಿಂದ ಗೆದ್ದು ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಬೆಂಬಲಿಸಿದ್ದರು. ಸುಧಾ ಬಸವರಾಜ್ ಅವರು ಬಿಜೆಪಿ ಶಾಸಕ‌ ಎಂ.ಚಂದ್ರಪ್ಪ ಬೆಂಬಲಿತರಾಗಿದ್ದಾರೆ. ಸದ್ಯ ಹಾಲಿ, ಮಾಜಿ ಶಾಸಕರ‌ ಬೆಂಬಲಿಗರ ಮುಸುಕಿನ ಗುದ್ದಾಟ ತಾರಕಕ್ಕೇರಿದೆ.

ಹೊಳಲ್ಕೆರೆ ತಹಶೀಲ್ದಾರ್ ಹಾಗೂ ಪುರಸಭೆ ಅಧಿಕಾರಿಗಳ ಎದುರಲ್ಲೇ ಎರಡು ಗುಂಪಿನ ಸದಸ್ಯರು ಹಾಗೂ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು, ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ‌ ದೂರು, ಪ್ರತಿದೂರು ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ