ದೆಹಲಿ: ಜನವರಿ 30ರಂದು ಶ್ರೀನಗರದಲ್ಲಿ (Srinagar) ನಡೆಯಲಿರುವ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ (Bharat Jodo Yatra) ಸಮಾರೋಪಕ್ಕೆ 24 ಪಕ್ಷಗಳಿಗೆ ಆಹ್ವಾನಿಸಲು ಪತ್ರ ಬರೆದಿದೆ. ಯಾತ್ರೆಯ ಸಂದೇಶವನ್ನು ಈ ದೇಶಕ್ಕೆ ಸಾರುವ ಸಾಲುವಾಗಿ ಈ ಕಾರ್ಯಕ್ರಮದಲ್ಲಿ ದೇಶ ಬೇರೆ ಬೇರೆ ಪಕ್ಷಗಳಿಗೆ ಆಹ್ವಾನ ನೀಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷಗಳಿಗೆ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 24 ಪಕ್ಷಗಳ ಅಧ್ಯಕ್ಷರಿಗೆ ಪತ್ರ ಬರೆದು ಜನವರಿ 30 ರಂದು ನಡೆಯಲಿರುವ ಭಾರತ್ ಜೋಡೋ ಯಾತ್ರೆ ಸಮಾರೋಪ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಈ ಪತ್ರಕ್ಕೆ ನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆಗಾಗಿ ಮತ್ತು ಶ್ರೀನಗರದಲ್ಲಿ ನಿಮ್ಮನ್ನು ಭೇಟಿಯಾಗಲು ನಾನು ಎದುರು ನೋಡುತ್ತಿದ್ದೇನೆ ಎಂದು ಖರ್ಗೆ ಈ ಪತ್ರದಲ್ಲಿ ಬರೆದಿದ್ದಾರೆ.
Published On - 6:22 pm, Wed, 11 January 23