ಅಶೋಕ್ ಗೆಹ್ಲೋಟ್ ಜತೆಗಿನ ಭಿನ್ನಾಭಿಪ್ರಾಯ ಮರೆತು ರಾಜಸ್ಥಾನ ಚುನಾವಣೆಗೆ ಸಿದ್ಧವಾದ ಸಚಿನ್ ಪೈಲಟ್

|

Updated on: Jul 08, 2023 | 6:35 PM

ಕ್ಷಮಿಸಿ ಬಿಡಿ ಮತ್ತು ಆಗಿ ಹೋದ ವಿಷಯವನ್ನು ಮರೆತುಬಿಡಿ. ಮುಂದಿನ ವಿಷಯಗಳ ಬಗ್ಗೆ ನೋಡಿ. ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಖರ್ಗೆ ಹೇಳಿದ್ದಾರೆ. ನಾನು ಅದನ್ನು ನಂಬುತ್ತೇನೆ, ನಾವು ಈಗ ಮುಂದೆ ಸಾಗಬೇಕು. ಹೊಸ ಸವಾಲುಗಳನ್ನು ಎದುರಿಸಬೇಕಾಗಿದೆ. ಈ ದೇಶಕ್ಕೆ ಕಾಂಗ್ರೆಸ್ ಉತ್ತಮ ಸಾಧನೆ ಮಾಡಬೇಕಾಗಿದೆ.

ಅಶೋಕ್ ಗೆಹ್ಲೋಟ್ ಜತೆಗಿನ ಭಿನ್ನಾಭಿಪ್ರಾಯ ಮರೆತು ರಾಜಸ್ಥಾನ ಚುನಾವಣೆಗೆ ಸಿದ್ಧವಾದ ಸಚಿನ್ ಪೈಲಟ್
ಸಚಿನ್ ಪೈಲಟ್
Follow us on

ದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಸಲಹೆ ಮೇರೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ (Ashok Gehlot) ಅವರೊಂದಿಗಿನ ಭಿನ್ನಾಭಿಪ್ರಾಯವನ್ನು ಮರೆಯುವುದಾಗಿ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ (Sachin Pilot) ಶನಿವಾರ ಹೇಳಿದ್ದು, ಸಾಮೂಹಿಕ ನಾಯಕತ್ವವೇ ವಿಧಾನಸಭೆ ಚುನಾವಣೆಗೆ ಮುಂದಿರುವ ಏಕೈಕ ಮಾರ್ಗ ಎಂದಿದ್ದಾರೆ. ಪಕ್ಷದ ನಿರ್ಣಾಯಕ ರಾಜಸ್ಥಾನ ಚುನಾವಣಾ ಕಾರ್ಯತಂತ್ರದ ಸಭೆಯ ಕೆಲವೇ ದಿನಗಳಲ್ಲಿ ಪಿಟಿಐಗೆ ವಿಶೇಷ ಸಂದರ್ಶನ ನೀಡಿರುವ ಪೈಲಟ್, ಎಲ್ಲವನ್ನು  ಕ್ಷಮಿಸಿ, ಹಳೇದನ್ನು ಮರೆತು ಮುಂದೆ ಸಾಗಿ ಎಂದು ಖರ್ಗೆ ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ. “ಅಶೋಕ್ ಗೆಹ್ಲೋಟ್ ಜಿ ನನಗಿಂತ ಹಿರಿಯರು, ಅವರಿಗೆ ಹೆಚ್ಚು ಅನುಭವವಿದೆ, ಅವರ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿಗಳಿವೆ. ನಾನು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ, ನಾನು ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದೆ. ಇಂದು ಅವರು ಮುಖ್ಯಮಂತ್ರಿ (ಗೆಹ್ಲೋಟ್). ಆದ್ದರಿಂದ ಅವರು ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ ಎಂದು ಭಾವಿಸುತ್ತೇನೆ.

ಸ್ವಲ್ಪ ಆಚೆ ಈಚೆ ಆದರೆ ಅದು ದೊಡ್ಡ ಸಮಸ್ಯೆಯಲ್ಲ. ಏಕೆಂದರೆ ಯಾವುದೇ ವ್ಯಕ್ತಿಗಿಂತ ಪಕ್ಷ ಮತ್ತು ಸಾರ್ವಜನಿಕರೇ ಮುಖ್ಯ. ನನಗೂ ಇದು ಅರ್ಥವಾಗಿದೆ ಮತ್ತು ಅವರಿಗೂ ಅರ್ಥವಾಗಿದೆ ಎಂದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಹೇಳಿದ್ದಾರೆ.

ಹಿಂದಿನ ವಸುಂಧರಾ ರಾಜೇ ಸರ್ಕಾರದ ಭ್ರಷ್ಟಾಚಾರದಂತಹ ವಿಷಯಗಳ ಬಗ್ಗೆ ತನಿಖೆ ನಡೆಸದೇ ಇರುವುದಕ್ಕಾಗಿ ಗೆಹ್ಲೋಟ್ ಸರ್ಕಾರವನ್ನು ಟೀಕಿಸಿದ ಬಗ್ಗೆ ಕೇಳಲಾದ ಪ್ರಶ್ನೆಗೆ ಪೈಲಟ್, ಆ ಸಮಯ ಕಳೆದು ಹೋಗಿದೆ, ಅದು ಮತ್ತೆ ಬರುವುದಿಲ್ಲ, ನಾವು ಭವಿಷ್ಯದ ಬಗ್ಗೆ ಚಿಂತಿಸಬೇಕು ಎಂದು ಖರ್ಗೆ ಹೇಳಿದ್ದಾರೆ ಎಂದು ಉತ್ತರಿಸಿದ್ದಾರೆ.

ಕ್ಷಮಿಸಿ  ಬಿಡಿ ಮತ್ತು ಆಗಿ ಹೋದ ವಿಷಯವನ್ನು ಮರೆತುಬಿಡಿ. ಮುಂದಿನ ವಿಷಯಗಳ ಬಗ್ಗೆ ನೋಡಿ. ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಖರ್ಗೆ ಹೇಳಿದ್ದಾರೆ. ನಾನು ಅದನ್ನು ನಂಬುತ್ತೇನೆ, ನಾವು ಈಗ ಮುಂದೆ ಸಾಗಬೇಕು. ಹೊಸ ಸವಾಲುಗಳನ್ನು ಎದುರಿಸಬೇಕಾಗಿದೆ. ಈ ದೇಶಕ್ಕೆ ಕಾಂಗ್ರೆಸ್ ಉತ್ತಮ ಸಾಧನೆ ಮಾಡಬೇಕಾಗಿದೆ. ನಾವು ರಾಜಸ್ಥಾನದ ಜನರ ಆಶೀರ್ವಾದವನ್ನು ಪಡೆಯಬೇಕು. ಅದಕ್ಕಾಗಿ ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಜನರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಸ್ವೀಕಾರಾರ್ಹ ರೀತಿಯಲ್ಲಿ ಮುನ್ನಡೆಯಬೇಕು ಎಂದು ಪೈಲಟ್ ಹೇಳಿದ್ದಾರೆ.

ಆಗ ಯಾರು ಏನು ಹೇಳಿದರು, ಆ ಸಮಯದಲ್ಲಿ ಏನಾಯ್ತು, ಅದರ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ, ಏಕೆಂದರೆ ಅದರಲ್ಲಿ ಏನೂ ಅರ್ಥವಿಲ್ಲ. ನನಗೆ ಅಹಿತಕರ ಅಥವಾ ನಾನು ಕೇಳಲು ಇಷ್ಟಪಡದ  ಯಾವುದೇ ಪದ ಅಥವಾ ಭಾಷೆಯನ್ನು ಬಳಸುವುದಿಲ್ಲ. ನಾನೇ, ಸಾರ್ವಜನಿಕ ಜೀವನದಲ್ಲಿ ಮತ್ತು ರಾಜಕೀಯದಲ್ಲಿ ಮಾತಾನಾಡುವಾಗ ಕೆಲವು ಘನತೆಯನ್ನು ಕಾಪಾಡಿಕೊಳ್ಳುವುದು ಯಾವಾಗಲೂ ಒಳ್ಳೆಯದು. ಚುನಾವಣೆಯಲ್ಲಿ ಗೆಲ್ಲುವುದು ನಮಗೆ ಮುಂದಿನ ಸವಾಲು, ವ್ಯಕ್ತಿಗಳು ಅಥವಾ ಹೇಳಿಕೆಗಳು ಮುಖ್ಯವಲ್ಲ, ಅದೆಲ್ಲವೂ ಹಳೇದು ಎಂದು ಪೈಲಟ್ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ, ರಾಜಸ್ಥಾನದ ಎಐಸಿಸಿ ಉಸ್ತುವಾರಿ ಸುಖಜೀಂದರ್ ರಾಂಧವಾ, ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ್ ದೋತಸ್ರಾ, ಅವರು ಮತ್ತು ರಾಜ್ಯದ ಹಲವಾರು ಶಾಸಕರು ಮತ್ತು ಸಚಿವರು ಇಲ್ಲಿನ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಚುನಾವಣಾ ಕಾರ್ಯತಂತ್ರದ ಸಭೆಯಲ್ಲಿ ಭಾಗವಹಿಸಿದ ನಂತರ ಸಚಿನ್ ಪೈಲಟ್ ಹೇಳಿಕೆ ನೀಡಿದ್ದಾರೆ.
ಕಾಲ್ಬೆರಳುಗಳ ಗಾಯಗಳಿಂದ ಚೇತರಿಸಿಕೊಳ್ಳುತ್ತಿರುವ ಗೆಹ್ಲೋಟ್, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು.

ಇದನ್ನೂ ಓದಿ: ತೆಲಂಗಾಣದ ಜನರ ಶಕ್ತಿ ಯಾವಾಗಲೂ ಭಾರತದ ಶಕ್ತಿಯನ್ನು ಹೆಚ್ಚಿಸಿದೆ: ಪ್ರಧಾನಿ ಮೋದಿ

ಸಭೆಯ ನಂತರ, ಒಗ್ಗಟ್ಟಿನಿದ್ದರೆ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬಹುದು ಎಂದು ಕಾಂಗ್ರೆಸ್ ಗುರುವಾರ ಪ್ರತಿಪಾದಿಸಿತು. ಅದೇ ವೇಳೆ ಶಿಸ್ತು ಕಾಪಾಡದ ಮತ್ತು ಪಕ್ಷದ ವೇದಿಕೆಯ ಹೊರಗೆ ಮಾತನಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಘೋಷಿಸುವುದಿಲ್ಲ.

ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಎಂದಿಗೂ ಘೋಷಿಸುವುದಿಲ್ಲ ಎಂಬ ಕಾಂಗ್ರೆಸ್ ಸಂಘಟನೆಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರ ಹೇಳಿಕೆ ಬಗ್ಗೆ ಪೈಲಟ್ ಅವರಲ್ಲಿ ಕೇಳಿದಾಗ “ವೇಣುಗೋಪಾಲ್ ಜಿ ಅವರು ಹೇಳಿದ್ದು ತಪ್ಪಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಪ್ರತಿ ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ಅದು ವೈಯಕ್ತಿಕವಾಗಿರುವು ಸ್ಪರ್ಧೆಯಲ್ಲ. 2018ರಲ್ಲಿ ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದೆ. ನಾವು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದಾಗ ಎಕ್ಸ್, ವೈ, ಝಡ್ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಹೇಳಿರಲಿಲ್ಲ. ಅದು ಚುನಾವಣೆಯ ನಂತರದ ನಿರ್ಧಾರ ಎಂದಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ