ಸಿ.ಎಂ ಇಬ್ರಾಹಿಂ ನನ್ನ ಸ್ನೇಹಿತ; ಅವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಲ್ಲ: ಸಿದ್ದರಾಮಯ್ಯ ಹೇಳಿಕೆ

ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ಸಿ.ಎಂ. ಇಬ್ರಾಹಿಂ ಜೊತೆ ಮಾತನಾಡಿದ್ದಾರೆ. ನಾನು ಕೂಡ ಅವರಿಗೆ ಕೋಪ ಕಡಿಮೆಯಾದ ಬಳಿಕ ಹೋಗಿ ಮಾತನಾಡುತ್ತೇನೆ. ನಾನು ಸಿಎಲ್‌ಪಿ ನಾಯಕ ಅನ್ನೋ ಕಾರಣಕ್ಕೆ ನನ್ನ ಮೇಲೆ ಅವರಿಗೆ ಕೋಪವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸಿ.ಎಂ ಇಬ್ರಾಹಿಂ ನನ್ನ ಸ್ನೇಹಿತ; ಅವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಲ್ಲ: ಸಿದ್ದರಾಮಯ್ಯ ಹೇಳಿಕೆ
ವಿಪಕ್ಷ ನಾಯಕ ಸಿದ್ದರಾಮಯ್ಯ
Edited By:

Updated on: Feb 06, 2022 | 2:38 PM

ಬೆಂಗಳೂರು: ನಾನು ಹಿಜಾಬ್ ಬಗ್ಗೆ ಮಾತನಾಡಿರುವುದು ನಿಜ. ಆದರೆ ಹೆಚ್.ಡಿ. ಕುಮಾರಸ್ವಾಮಿ ಬಗ್ಗೆ ಮಾತನಾಡಿಲ್ಲ. ಈಗ ನನ್ನ ಬಗ್ಗೆ ಮಾತನಾಡುವುದಕ್ಕೆ ಕುಮಾರಸ್ವಾಮಿ ಯಾರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗುವ ಕನಸು ಇದೆ ಎಂದು ಕುಮಾರಸ್ವಾಮಿ ಹೇಳಿದ್ದರು ಎಂಬ ಮಾತಿಗೆ ಯಾರು ಕುಮಾರಸ್ವಾಮಿ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಹೆಚ್.ಡಿ ಕುಮಾರಸ್ವಾಮಿ ಸಾರ್ ಎಂದು ಮಾದ್ಯಮದವರು ಹೇಳಿದಾಗ ಆ ಕುಮಾರಸ್ವಾಮಿ ಬಗ್ಗೆ ನಾನು ಮಾತನಾಡಲ್ಲ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಹಿಜಾಬ್ ಬಗ್ಗೆ ಮಾತನಾಡಿದ್ದು ನಿಜ, ಆದ್ರೆ ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ, ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ನನ್ನ ಸ್ನೇಹಿತ. ಅವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಪಕ್ಷದಲ್ಲಿ ಕೆಲವರು ಸಿ.ಎಂ. ಇಬ್ರಾಹಿಂ ಜೊತೆ ಮಾತನಾಡಿದ್ದಾರೆ. ನಾನು ಕೂಡ ಅವರಿಗೆ ಕೋಪ ಕಡಿಮೆಯಾದ ಬಳಿಕ ಹೋಗಿ ಮಾತನಾಡುತ್ತೇನೆ. ನಾನು ಸಿಎಲ್‌ಪಿ ನಾಯಕ ಅನ್ನೋ ಕಾರಣಕ್ಕೆ ನನ್ನ ಮೇಲೆ ಅವರಿಗೆ ಕೋಪವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

1995 ರಲ್ಲಿ ನಾನು ಕಾಂಗ್ರೆಸ್ ನಲ್ಲಿ ಇರಲಿಲ್ಲ. ಆಗಿನ ಕಾಂಗ್ರೆಸ್ ಬಗ್ಗೆ ನನಗೆ ಗೊತ್ತಿಲ್ಲ. ವೀರೇಂದ್ರ ಪಾಟೀಲ್ ಜೊತೆ ಇಬ್ರಾಹಿಂ ಒಂದ್ಸಲ ಕಾಂಗ್ರೆಸ್​ಗೆ ಹೋಗಿದ್ದ. ಆಮೇಲೆ ಜನತಾದಳಕ್ಕೆ ಬರ್ತಾನೆ. ನನಗೆ ಜನತಾದಳದ ನಂತರದಿಂದ ಅಷ್ಟೆ ಐಡಿಯಾ ಇದೆ. ಅದಕ್ಕೂ ಮುನ್ನ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ನನ್ನ ಭಾಷಣ ಕೇಳಲು ಸಿದ್ದರಾಮಯ್ಯ ಮೋಟಾರ್ ಬೈಕ್​ನಲ್ಲಿ ಬರ್ತಾ ಇದ್ದರು ಎಂಬ ಇಬ್ರಾಹಿಂ ಹೇಳಿಕೆ ವಿಚಾರವಾಗಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ನಾನೇ ಒಂದ್ಸಲ ಹೇಳಿದ್ದೆ ಅವನಿಗೆ. ನೀನು ಟೌನ್ ಹಾಲ್​ನಲ್ಲಿ ಭಾಷಣ ಮಾಡುವಾಗ ಬಂದಿದ್ದೆ ಅಂತ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

YouTube video player

ಇದನ್ನೂ ಓದಿ: ಸಿ.ಎಂ ಇಬ್ರಾಹಿಂ ಸ್ವಾಗತಿಸಿದ್ದ ತನ್ವೀರ್ ಸೇಠ್ ಆಪ್ತ ಅಬ್ದುಲ್ ಖಾದರ್ ಶಾಹೀದ್ ಕಾಂಗ್ರೆಸ್‌ನಿಂದ ಉಚ್ಚಾಟನೆ

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಮುಸ್ಲಿಮರಿಗೆ ಯಾವುದೇ ಅನ್ಯಾಯವಾಗಿಲ್ಲ; ಸಿ.ಎಂ ಇಬ್ರಾಹಿಂ ಕಾಂಗ್ರೆಸ್​ನಲ್ಲೇ ಇರುವ ವಿಶ್ವಾಸವಿದೆ: ಸಲೀಂ ಅಹ್ಮದ್

Published On - 2:34 pm, Sun, 6 February 22

Follow Us