ಟಿಕೆಟ್ ಕೊಟ್ಟರೆ ವಿಜಯಪುರ ನಗರದಿಂದಲೂ ಸ್ಪರ್ಧಿಸುವೆ: ಪರೋಕ್ಷವಾಗಿ ಯತ್ನಾಳ್ ವಿರುದ್ಧ ಸ್ಪರ್ಧೆಗೆ ಸಿದ್ಧ ಎಂದ ಶಿವಾನಂದ ಪಾಟೀಲ್

|

Updated on: Feb 26, 2023 | 6:24 PM

ವರಿಷ್ಠರು ವಿಜಯಪುರ ನಗರ ಟಿಕೆಟ್ ಕೊಟ್ಟರೆ ಅಲ್ಲೂ ಸ್ಪರ್ಧಿಸುವೆ ಎಂದು ಪರೋಕ್ಷವಾಗಿ ಯತ್ನಾಳ್ ವಿರುದ್ಧ ಸ್ಪರ್ಧೆಗೆ ಸಿದ್ಧ ಎಂದು ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಸೂಚನೆ ನೀಡಿದರು.

ಟಿಕೆಟ್ ಕೊಟ್ಟರೆ ವಿಜಯಪುರ ನಗರದಿಂದಲೂ ಸ್ಪರ್ಧಿಸುವೆ: ಪರೋಕ್ಷವಾಗಿ ಯತ್ನಾಳ್ ವಿರುದ್ಧ ಸ್ಪರ್ಧೆಗೆ ಸಿದ್ಧ ಎಂದ ಶಿವಾನಂದ ಪಾಟೀಲ್
ಯತ್ನಾಳ್, ಶಿವಾನಂದ ಪಾಟೀಲ್
Follow us on

ವಿಜಯಪುರ: ವರಿಷ್ಠರು ವಿಜಯಪುರ ನಗರ ಟಿಕೆಟ್ ಕೊಟ್ಟರೆ ಅಲ್ಲೂ ಸ್ಪರ್ಧಿಸುವೆ ಎಂದು ಪರೋಕ್ಷವಾಗಿ ಯತ್ನಾಳ್ ವಿರುದ್ಧ ಸ್ಪರ್ಧೆಗೆ ಸಿದ್ಧ ಎಂದು ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ (Sivananda Patil) ಸೂಚನೆ ನೀಡಿದರು. ಬಬಲೇಶ್ವರ, ವಿಜಯಪುರದಿಂದ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದು ನಿಜ. ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೇನೆ. ಕ್ಷೇತ್ರದ ಜನರು ಹಾಗೂ ಬೆಂಬಲಿಗರು ಸಹ ಅದನ್ನೇ ಬಯಸಿದ್ದಾರೆ. ಪಕ್ಷದ ವರಿಷ್ಠರಲ್ಲಿ ನಾನು ಏನಾದರೂ ಹೇಳಿಕೊಳ್ಳಬಹುದು. ಆದರೆ ಬಹಿರಂಗವಾಗಿ ನಾನು ಯಾವುದೂ ಹೇಳಲ್ಲ. ನಾನು ಕಾಂಗ್ರೆಸ್ ಪಕ್ಷ​ ಬಿಟ್ಟು ಹೋಗಲ್ಲ, ಕಾಂಗ್ರೆಸ್​ನಲ್ಲೇ ಇರುವೆ ಎಂದು ಶಿವಾನಂದ ಪಾಟೀಲ್ ಪಕ್ಷಾಂತರಕ್ಕೆ ಫುಲ್ ಸ್ಟಾಪ್ ಇಟ್ಟರು.

ಸ್ವಾಮೀಜಿಗಳಿಗೆ ರಾಜಕೀಯ ಪ್ರವೇಶಕ್ಕೆ ಜೆ.ಪಿ.ನಡ್ಡಾ ಆಫರ್ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಇತ್ತೀಚಿನ ದಿನಗಳಲ್ಲಿ ರಾಜಕಾರಣದಲ್ಲಿ ಧರ್ಮ ಬೆರೆಯುತ್ತಿದೆ. ಬೆರೆಸುವ ಸಂಸ್ಕೃತಿ ಕಾಂಗ್ರೆಸ್​ಗೂ ಸರಿಯಲ್ಲ, ಬಿಜೆಪಿಗೂ ಸರಿಯಲ್ಲ. ದೇಶ ಉಳಿಯಬೇಕಾದರೆ ರಾಜಕಾರಣದಲ್ಲಿ ಧರ್ಮ ಬರಬಾರದು ಎಂದು ಹೇಳುವ ಮೂಲಕ ನಡ್ಡಾ ಹೇಳಿಕೆಗೆ ಶಿವಾನಂದ ಪಾಟೀಲ್ ವಿರೋಧ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅಧಿಕಾರಕ್ಕಾಗಿ ಕಾಂಗ್ರೆಸ್ ಯಾರನ್ನು ಬೇಕಾದ್ರೂ ಹತ್ಯೆ ಮಾಡುತ್ತೆ: ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಅಶ್ವತ್ಥ್ ನಾರಾಯಣ

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ರನ್ನು ಯಡಬಿಡಂಗಿ ಎಂದ ಮುಖ್ಯಮಂತ್ರಿ ಚಂದ್ರು  

ಸ್ವಾಮೀಜಿಗಳ ಬಗ್ಗೆ ನನಗೆ ಅಪಾರ ಗೌರವ ಇದೆ. ಆದ್ರೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ರಂತೆ ಯಡಬಿಡಂಗಿ ಥರ ಆಗಬಾರದು ಎಂದು ಹಿರಿಯ ನಟ, ಆಪ್ ಮುಖಂಡ ಮುಖ್ಯಮಂತ್ರಿ ಚಂದ್ರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿ ಮಾತನಾಡಿ, ಮಠಾಧೀಶರು ರಾಜಕೀಯ ಪ್ರವೇಶ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಲಾಯರ್ ಕೋರ್ಟ್​ನಲ್ಲಿ ಮಾತ್ರ ಲಾಯರ್. ಹೊರಗೆ ಬಂದ್ರೆ ಏನು ಬೇಕಾದ್ರೂ ಮಾಡಬಹುದು. ಆ ಸ್ವಾತಂತ್ರ್ಯ ಭಾರತ ದೇಶದಲ್ಲಿದೆ ಎಂದರು.

ಹಾಗೆಯೇ ಸ್ವಾಮೀಜಿಗಳು ಕೂಡ ಕಾವಿ ಬಟ್ಟೆ ಹಾಕದೇ ರಾಜಕೀಯಕ್ಕೆ ಬಂದ್ರೆ ಒಳ್ಳೆಯದು. ಕಾವಿ ಬಟ್ಟೆ ಹಾಕಿಕೊಂಡು ಬಂದ್ರೆ ಗೌರವ ಇರಲ್ಲ. ಎಲ್ಲವನ್ನೂ ಬಿಟ್ಟು ಬಂದ್ರೆ ಓಕೆ. ಇಲ್ಲವಾದರೆ ಉತ್ತರ ಪ್ರದೇಶದ ಸಿಎಂ ಯೋಗಿಯಂತೆ ಯಡಬಿಡಂಗಿ ಥರ ಆಗಬಾರದು ಎಂದು ಕಿಡಿಕಾರಿದರು.

ಇದನ್ನೂ ಓದಿ: ಬಿಜೆಪಿಯಲ್ಲಿ ಹಿರಿಯರಿಗೆ ಟಿಕೆಟ್ ಇಲ್ಲ ಅನ್ನೋದು ಊಹಾಪೋಹ, ಈ ಬಾರಿ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡ್ತೇನೆ: ಜಗದೀಶ್ ಶೆಟ್ಟರ್

ಸ್ವಾಮೀಜಿಗಳು ಬಿಜೆಪಿ ಸೇರ್ಪಡೆಗೆ ಮುಕ್ತ ಆಹ್ವಾನ ನೀಡಿದ ಸಚಿವ

ಭಾರತೀಯ ಜನತಾ ಪಾರ್ಟಿಯಲ್ಲಿ ಎಲ್ಲರಿಗೂ ಮುಕ್ತ ಆಹ್ವಾನ ಇದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಹೇಳಿದರು. ಯೋಗಿಯವರು ಸನ್ಯಾಸಿಯಾಗಿದ್ದುಕೊಂಡೇ ರಾಜಕೀಯದಲ್ಲಿದ್ದಾರೆ. ಶಾಸಕರಾಗಿ, ಮಂತ್ರಿಯಾಗಿ, ಲೋಕಸಭೆ ಚುನಾವಣೆಯಲ್ಲಿ ಗೆದ್ದು, ಸದ್ಯ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್​ ಅಂತಹ ಆಲೋಚನೆ, ವಿಚಾರವುಳ್ಳ ಸ್ವಾಮೀಜಿಗಳು ಬಿಜೆಪಿ ಸೇರಬಹುದು. ಬಿಜೆಪಿಯಲ್ಲಿ ಎಲ್ಲರೂ ಇದ್ದಾರೆ, ಹೀಗಾಗಿ ಎಲ್ಲರಿಗೂ ಮುಕ್ತ ಆಹ್ವಾನವಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:21 pm, Sun, 26 February 23