ಬಳ್ಳಾರಿ: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್; ಏನು?

| Updated By: Ganapathi Sharma

Updated on: Sep 08, 2023 | 10:48 PM

ಈಗ ಲೋಕಸಭೆ ಗೆಲ್ಲಬೇಕು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಮೋದಿ ಕೈಯಲ್ಲಿ ದೇಶ ಸುರಕ್ಷಿತವಾಗಿದ್ದು, ರಾಜ್ಯದಲ್ಲಿ 25 ಗೆಲ್ಲಬೇಕು ಅದೊಂದೇ ನಮ್ಮ ಗುರಿಯಾಗಿದೆ. ಲೋಕಸಭೆ ಟಿಕೆಟ್ ಬಗ್ಗೆ ಯಾವುದೇ ಚರ್ಚೆ ಇಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಯಾವುದು ಫೈನಲ್ ಆಗಿಲ್ಲ ಎಂದು ಬಸನಗೌಡ ಪಾಟೀಲ್​ ಸ್ಪಷ್ಟ ಪಡಿಸಿದರು.​

ಬಳ್ಳಾರಿ: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್; ಏನು?
ಬಸನಗೌಡ ಪಾಟೀಲ್​ ಯತ್ನಾಳ್​
Follow us on

ಬಳ್ಳಾರಿ, ಸೆ.08: ಕಾಂಗ್ರೆಸ್​ ಕಾರ್ಯಕರ್ತರು ಮತ್ತು 135 ಶಾಸಕರ ಬಳಿ ಧಮ್ ಇಲ್ಲ. ಹೀಗಾಗಿ ದಿನಕ್ಕೊಬ್ಬ ಬಿಜೆಪಿ (BJP)ಯ ಮಾಜಿ ಹಾಲಿ ಶಾಸಕರನ್ನು ಕರೆದು ಡಿಸಿಎಂ ಡಿಕೆ ಶಿವಕುಮಾರ್​ ಮಾತನಾಡುತ್ತಾರೆ ಎಂದು ಬಸನಗೌಡ ಪಾಟೀಲ್​ ಯತ್ನಾಳ್​ (Basanagouda Patil Yatnal) ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ. ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘135 ಜನ ಶಾಸಕರಿದ್ರೂ ಲೋಕಸಭೆ ಚುನಾವಣೆ ಎದುರಿಸೋಕೆ ನಿಮಗೆ ನಮ್ಮದೇ *** ಬೇಕು ಅಂದರೆ, ಏನು ಮಾಡೋಣ? ಎಂದು ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇನ್ನು ಇದೇ ವೇಳೆ ‘ಐದು ಲಕ್ಷ ಸಿಗುತ್ತದೆ ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ವಿಚಾರ ‘ ನಾನು ಐದು ಕೋಟಿ ಕೊಡುತ್ತೇನೆ ಸಚಿವ ಶಿವಾನಂದ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳತ್ತಾನಾ? ಮಾನ ಮರ್ಯಾದೆ ಇದೆಯಾ ನಿಮಗೆ ಹಣ ಕೊಡ್ತಾರೆ ಅಂದರೆ ಜೀವ ಕಳೆದುಕೊಳ್ಳುತ್ತಾರಾ? ಕಾಮನ್ ಸೆನ್ಸ್ ಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಡಿಸೆಂಬರ್​ ವರೆಗೂ ಸರ್ಕಾರ ಉಳಿಯೋದಿಲ್ಲ

ಕಾಂಗ್ರೆಸ್​ನವರಿಗೆ 135 ಸೀಟು ಗೆದ್ದ ಮೇಲೆ ಎಷ್ಟು ದುರಂಹಕಾರ ಬಂದಿದೆ ಅಂದರೆ, ಸೂರ್ಯ ಚಂದ್ರರನ್ನು ಅಳುವ ಲೆಕ್ಕಕ್ಕೆ ಹೋಗಿದ್ದಾರೆ. ಡಿಸೆಂಬರ್ ವರೆಗೂ ಈ ಸರ್ಕಾರ ಉಳಿಯೋದಿಲ್ಲ. ಇನ್ನೂ ಐದು ವರ್ಷ ಆಳೋದು ದೂರಕ್ಕೆ ಉಳಿತು. ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಹಗುರವಾಗಿ ಮಾತನಾಡುತ್ತಾರೆ. ಈ ಸರ್ಕಾರ ಉಳಿಯೋದಕ್ಕೆ ಸಾಧ್ಯವಿಲ್ಲ. ಪಕ್ಷಕ್ಕೆ ಬೇಸಿಕ್ ಇಲ್ಲ, ಅಸ್ಥಿತ್ವನೇ ಇಲ್ಲ. ಇನ್ನೇನು ಸರ್ಕಾರ ಉಳಿಯುತ್ತದೆ. ಎಂದಿದ್ದಾರೆ.

ಇದನ್ನೂ ಓದಿ:ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಮನವಿ; ಎರಡನೇ ಬಾರಿ ಕೇಂದ್ರಕ್ಕೆ ಪತ್ರ

ಇನ್ನು ಜೆಡಿಎಸ್ ಜೊತೆಗೆ ಹೊಂದಾಣಿಕೆ ವಿಚಾರ ‘ಅದು ಕೇಂದ್ರದ ನಾಯಕರು ತೆಗೆದುಕೊಂಡ ನಿರ್ಣಯ, ನಮ್ಮ ವ್ಯಾಪ್ತಿಯಲ್ಲಿ ಬರುವ ವಿಚಾರವಲ್ಲ. ಕೇಂದ್ರ ವ್ಯಾಪ್ತಿಯಲ್ಲಿದೆ. ಅದಕ್ಕೆ ಹೆಚ್ಚು ಮಾತನಾಡಲ್ಲ. ಕೆಲ ನಿರ್ಣಯ ದೇಶದ ಹಿತದೃಷ್ಟಿ ಮತ್ತು ಲೋಕಸಭೆ ಚುನಾವಣೆ ಹಿನ್ನಲೆ ತೆಗೆದುಕೊಳ್ಳುತ್ತಾರೆ. ನಮಗೆ ಕೊಟ್ಟ ಜವಾಬ್ದಾರಿಯಲ್ಲಿ ಮಾತ್ರ ಕೆಲಸ ಮಾಡುತ್ತೇನೆ. ನನ್ನ ವೈಯಕ್ತಿಕ ಅಭಿಪ್ರಾಯ ಪಕ್ಷದ ಮೇಲೆ ಹೇರೋದಿಲ್ಲ. ಪಕ್ಷದ ಅಭಿಪ್ರಾಯವೇ ನನ್ನ ಅಭಿಪ್ರಾಯವಾಗಿದೆ ಎಂದಿದ್ದಾರೆ.

ಮೋದಿ ಕೈಯಲ್ಲಿ ದೇಶ ಸುರಕ್ಷಿತವಾಗಿದೆ

ಈಗ ಲೋಕಸಭೆ ಗೆಲ್ಲಬೇಕು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಮೋದಿ ಕೈಯಲ್ಲಿ ದೇಶ ಸುರಕ್ಷಿತವಾಗಿದೆ. ರಾಜ್ಯದಲ್ಲಿ 25 ಗೆಲ್ಲಬೇಕು ಅದೊಂದೇ ನಮ್ಮ ಗುರಿಯಾಗಿದೆ. ಇನ್ನು ವಿಪಕ್ಷ ನಾಯಕ ವಿಚಾರದಲ್ಲಿ ನನ್ನ ಪರ ವಿರೋಧ ಇದ್ದವರು ಪಕ್ಷದಲ್ಲಿ ಇದ್ದಾರೆ. ಪ್ಲಸ್ ಮೈನಸ್ಸು ಇದ್ದಂತೆ ಯಾರು ಪರಿಪೂರ್ಣ ಇದ್ದಾರೆ. ಪ್ರತಿ ಮನೆಯಲ್ಲಿ ದೋಷ ಇದ್ದಂತೆ ಇಲ್ಲಿಯೂ ಇದೆ. ಲೋಕಸಭೆ ಟಿಕೆಟ್ ಬಗ್ಗೆ ಯಾವುದೇ ಚರ್ಚೆ ಇಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಯಾವುದು ಪೈನಲ್ ಆಗಿಲ್ಲ ಎಂದು ಬಸನಗೌಡ ಪಾಟೀಲ್​ ಸ್ಪಷ್ಟ ಪಡಿಸಿದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:18 pm, Fri, 8 September 23