Karnataka Breaking Kannada News Live: ಬಿಜೆಪಿ ಮೈತ್ರಿ ವಿಚಾರ ಇನ್ನೂ ಸಮಯ ಇದೆ: ಕುಮಾರಸ್ವಾಮಿ
Breaking News Today Highlights Updates: ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ, ಲೋಕಸಭೆ ಚುನಾವಣೆ ತಯಾರಿ, ಸನಾತನ ಹಿಂದೂ ಧರ್ಮದ ಬಗೆಗಿನ ವಿವಾದಾತ್ಮಕ ಹೇಳಿಕೆ, ಗ್ಯಾರಂಟಿ ಯೋಜನೆಗಳು, ಹವಾಮಾನ ವರದಿ ಇತ್ಯಾದಿ ವಿದ್ಯಮಾನಗಳ ಕ್ಷಣ ಕ್ಷಣದ ಅಪ್ಡೇಟ್ಸ್ಗಾಗಿ ಟಿವಿ9 ಡಿಜಿಟಲ್ ಲೈವ್ ವೀಕ್ಷಿಸಿ.
Karnataka Breaking News: ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಂತೆ ಕರ್ನಾಟಕದಲ್ಲಿ (Karnataka) ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆ ಲೋಕಸಭೆ ಚುನಾವಣೆಗೆ (Loka Sabha Elections) ಸಂಬಂಧಿಸಿದಂತೆ ಬಿಜೆಪಿ (BJP) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಕಾಂಗ್ರೆಸ್ (Congress) ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡುವ ವಿಚಾರ ಭಾರೀ ಕುತೂಹಲ ಮೂಡಿಸಿದೆ. ಇದರ ಜೊತೆಗೆ ಕಾವೇರಿ (Cauvery) ಹೋರಾಟವೂ ಜೋರಾಗಿದ್ದು, ಮೈಸೂರಿನಲ್ಲಿ ದಸರಾ ಮಹೋತ್ಸವದ ಕಲೆ ಹೆಚ್ಚಾಗುತ್ತಿದೆ. ಇವೆಲ್ಲದರ ಜೊತೆಗೆ ರಾಜ್ಯದ ಪ್ರಮುಖ ಸುದ್ದಿಗಳ ಲೈವ್ ಅಪ್ಡೇಟ್ಸ್ ಟಿವಿ9 ಡಿಜಿಟಲ್ನಲ್ಲಿ ವೀಕ್ಷಿಸಿ.
LIVE NEWS & UPDATES
-
Karnataka Breaking News Live: ಅರೇನೂರು ಗ್ರಾಮದಲ್ಲಿ ಕಾಡಾನೆ ದಾಳಿ, ಬೆಳೆ ನಾಶ
ಚಿಕ್ಕಮಗಳೂರು: ತಾಲೂಕಿನ ಅರೇನೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ತೆಂಗಿನ ಮರ, ಕಾಫಿ ಗಿಡ, ಅಡಕೆ, ಬಾಳೆ ಬೆಳೆ ನಾಶಗೊಂಡಿವೆ. ಕಳೆದ 1 ವಾರದಿಂದ ಗ್ರಾಮದಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ಸೆ.3ರಂದು ಕಾಡಾನೆ ದಾಳಿಯಿಂದ ಕಾರ್ಮಿಕ ಕಿನ್ನಿ ಮೃತಪಟ್ಟಿದ್ದರು. ಕಾಡಾನೆ ಹಿಂಡು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
-
Karnataka Breaking News Live: ಬಿಜೆಪಿ ಮೈತ್ರಿ ವಿಚಾರ ಇನ್ನೂ ಸಮಯ ಇದೆ: ಕುಮಾರಸ್ವಾಮಿ
ಬೆಂಗಳೂರಿನ ಜೆ.ಪಿ.ನಗರದ ತಿರುಮಲಗಿರಿ ದೇವಸ್ಥಾನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದರು. ಎರಡು ಗಂಟೆಗಳ ಸುಧೀರ್ಘ ಹೋಮ-ಹವನ ಬಳಿಕ ಮಾತನಾಡಿದ ಅವರು, ಬಿಜೆಪಿ ಮೈತ್ರಿ ವಿಚಾರ ಇನ್ನೂ ಸಮಯ ಇದೆ. ತಂದೆಯವರ ಆರೋಗ್ಯ ವೃದ್ಧಿ ಗಾಗಿ ಪೂಜೆ ಸಲ್ಲಿಸಿದ್ದೇನೆ. ನಮ್ಮ ಕುಟುಂಬದಲ್ಲಿ ಇತ್ತಿಚೇಗಿನ ನಡೆದ ಬೆಳವಣಿಗೆ,ಆರೋಗ್ಯ ವೃದ್ದಿಗೆ ಪೂಜೆ ಮಾಡಿದ್ದೇನೆ. ಹಿಂದೂ ಧರ್ಮದ ಸಂಪ್ರದಾಯದಂತೆ ಧಾರ್ಮಿಕ ಪೂಜೆ ನೆರವೇರಿಸಿದ್ದೇನೆ ಎಂದರು.
-
Published On - Sep 09,2023 8:09 AM