ಡಿಕೆ ಶಿವಕುಮಾರ್ ವಿರುದ್ಧ ಮಾತನಾಡಿರುವ ವಿಡಿಯೋ ವಿಚಾರ; ಅಶೋಕ್ ಪಟ್ಟಣಗೆ ಕಾಂಗ್ರೆಸ್ ಪಕ್ಷದಿಂದ ನೋಟಿಸ್ ಜಾರಿ

| Updated By: ganapathi bhat

Updated on: Feb 01, 2022 | 5:18 PM

ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ದ ಅಕ್ಷೇಪಾರ್ಹ ಮಾತುಗಳಾಡಿದ್ದೀರಿ. ಅಧ್ಯಕ್ಷರ ಘನತೆಗೆ ಕುಂದುಂಟು ಮಾಡಿದ್ದೀರಿ. ಕಾಂಗ್ರೆಸ್ ಪಕ್ಷಕ್ಕೆ ಮಾತಿನಿಂದ ಹಾನಿಯಾಗಿದೆ ಎಂದು ಕಾಂಗ್ರೆಸ್ ಶಿಸ್ತು ಸಮಿತಿಯಿಂದ ನೋಟಿಸ್ ನೀಡಲಾಗಿದೆ.

ಡಿಕೆ ಶಿವಕುಮಾರ್ ವಿರುದ್ಧ ಮಾತನಾಡಿರುವ ವಿಡಿಯೋ ವಿಚಾರ; ಅಶೋಕ್ ಪಟ್ಟಣಗೆ ಕಾಂಗ್ರೆಸ್ ಪಕ್ಷದಿಂದ ನೋಟಿಸ್ ಜಾರಿ
ಡಿಕೆ ಶಿವಕುಮಾರ್
Follow us on

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ವಿರುದ್ದ ಮಾತನಾಡಿರುವ ವಿಡಿಯೋ ವಿಚಾರಕ್ಕೆ ಸಂಬಂಧಿಸಿ ಅಶೋಕ್ ಪಟ್ಟಣಗೆ ಕಾಂಗ್ರೆಸ್ ಪಕ್ಷದಿಂದ ನೋಟಿಸ್ ನೀಡಲಾಗಿದೆ. ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ದ ಅಕ್ಷೇಪಾರ್ಹ ಮಾತುಗಳಾಡಿದ್ದೀರಿ. ಅಧ್ಯಕ್ಷರ ಘನತೆಗೆ ಕುಂದುಂಟು ಮಾಡಿದ್ದೀರಿ. ಕಾಂಗ್ರೆಸ್ ಪಕ್ಷಕ್ಕೆ ಮಾತಿನಿಂದ ಹಾನಿಯಾಗಿದೆ ಎಂದು ಕಾಂಗ್ರೆಸ್ ಶಿಸ್ತು ಸಮಿತಿಯಿಂದ ನೋಟಿಸ್ ನೀಡಲಾಗಿದೆ.

ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಇಂದ ನೋಟಿಸ್ ಜಾರಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ 7 ದಿನಗಳ ಒಳಗೆ ಉತ್ತರ ನೀಡುವಂತೆ ಸೂಚನೆ ಕೊಡಲಾಗಿದೆ. ಕೆಲ ದಿನಗಳ ಹಿಂದೆ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದ್ದರು. ಸುದ್ದಿಗೋಷ್ಠಿ ವೇಳೆ ಪುಲಿಕೇಶಿನಗರ ಘಟನೆ ಬಗ್ಗೆ ಚರ್ಚೆ ಮಾಡಲಾಗಿತ್ತು. ಈ ವೇಳೆ ಡಿ.ಕೆ. ಶಿವಕುಮಾರ್ ವಿರುದ್ಧ ಅಶೋಕ್ ಮಾತನಾಡಿದ್ದರು.

ಕಾಂಗ್ರೆಸ್​ನಿಂದ ನೋಟಿಸ್ ನೀಡಿರುವ ಬಗ್ಗೆ ಅಶೋಕ್ ಪಟ್ಟಣ್ ಪ್ರತಿಕ್ರಿಯೆ

ನೋಟಿಸ್ ನೀಡಿದ ವಿಚಾರ ನನಗೆ ಮಾಧ್ಯಮಗಳ ಮೂಲಕವೇ ಗೊತ್ತಾಗಿದೆ. ನೊಟೀಸ್ ನೀಡಿದ್ದಾರೆ ಎನ್ನೋದು ಮಾಧ್ಯಮಗಳಿಂದ ಗೊತ್ತಾಯ್ತು. ನಾನು ತಪ್ಪೇ ಮಾಡಿಲ್ಲ. ಡಿ.ಕೆ. ಶಿವಕುಮಾರ್, ನಾನು ಸ್ನೇಹಿತರೇ. ಯುವ ಕಾಂಗ್ರೆಸ್ ಕಾಲದಿಂದಲೂ ನಾವು ಸ್ನೇಹಿತರೇ ಎಂದು ಮಾಜಿ ಶಾಸಕ ಅಶೋಕ್ ಪಟ್ಟಣ್ ಹೇಳಿಕೆ ನೀಡಿದ್ದಾರೆ. ನಾನು ಸಿದ್ದರಾಮಯ್ಯ ಬಳಿ ಅವತ್ತು ಪುಲಿಕೇಶಿ ನಗರದಿಂದ ಜನ ಬಂದಿರುವ ಬಗ್ಗೆ ಮಾತಾಡಿದ್ದಷ್ಟೇ. ಅದರ ಹೊರತಾಗಿ ನಾನು ಬೇರೆನೂ ಮಾತಾಡಿಲ್ಲ. ನಾನು ಎಲ್ಲದಕ್ಕೂ ಉತ್ತರ ಕೊಡ್ತೇನೆ. ನನಗೆ ನೋಟೀಸ್ ಇನ್ನೂ ಬಂದಿಲ್ಲ ಎಂದು ಹೇಳಿದ್ದಾರೆ.

ನಾನೇನು ಅಂತ ತಪ್ಪೇನು ಮಾಡಿಲ್ಲ. ಅಖಂಡ ಶ್ರೀನಿವಾಸ್ ಮೂರ್ತಿ ಹಾಗೂ ಅವರ ಹಿಂಬಾಲಕರು ಬಂದಿದ್ದರು. ಅವರು ಮಾತಾಡಿದ್ದನ್ನು ನಾನು ಹೇಳಿದೆ ಅಷ್ಟೆ. ಅದಕ್ಕೂ ನಾನಗೂ ಸಂಬಂಧ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಧಕ್ಕೆ ಮಾಡುವ ಕೆಲಸ ಮಾಡಿಲ್ಲ. ನಾನು ಈ ಪಾರ್ಟಿಯಲ್ಲಿ 40 ವರ್ಷ ಇದ್ದೀನಿ. ನೋಟೀಸ್ ಕೊಡುವ ಮುನ್ನ ನನ್ನನ್ನು ಕೇಳಿ ಕೊಡಬಹುದಿತ್ತು. ಎರಡ್ಮೂರು ದಿನದಲ್ಲೇ ಉತ್ತರ ನೀಡ್ತೀನಿ. ನೋಟೀಸ್ ನನ್ನ ಕೈಗೆ ಬಂದ ತಕ್ಷಣ ಈ ಬಗ್ಗೆ ಉತ್ತರ ಕೊಡ್ತೀನಿ ಎಂದು ಹೇಳಿದ್ದಾರೆ.

ಮಾಧ್ಯಮಗಳೇ ಬೇಧ ಬಾವ ಮಾಡ್ತಾ ಇದಾವೆ. ಅವರಿಗೊಂದು ನನಗೊಂದು ಅಂತ ಏನಿಲ್ಲ. ನನಗಷ್ಟೆ ನೋಟೀಸ್ ಕೊಟ್ಟಿದಾರೆ ಅನ್ನೋದು ಏನಿಲ್ಲ. ಎಲ್ಲರೂ ನಮಗೆ ಒಂದೇ. ಅದರಲ್ಲಿ ಬೇದ ಭಾವ ಏನಿದೆ. ತಪ್ಪು ಗ್ರಹಿಕೆಯಿಂದ ನೋಟೀಸ್ ಕೊಟ್ಟಿರಬೇಕು ಅಷ್ಟೆ. ನಾನು ದೊಡ್ಡ ಲೀಡರ್ ಅಲ್ಲವೇ ಅಲ್ಲ. ನನ್ನದು ಬೆಳಗಾವಿ ಜಿಲ್ಲೆ ರಾಮದುರ್ಗಾ ತಾಲೂಕಿಗೆ ಮಾತ್ರ ಸೀಮಿತ ಅಷ್ಟೇ. ನಾನು ಬೆಳಗಾವಿಯ ದೊಡ್ಡ ಲೀಡರ್ರೂ ಅಲ್ಲ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಎಣ್ಣೆ, ನೀರು ಇದ್ದಂತೆ ಅವರಿಬ್ಬರು ಎಂದಿಗೂ ಸೇರುವುದಿಲ್ಲ: ಸಚಿವ ಕಾರಜೋಳ

ಇದನ್ನೂ ಓದಿ: ಲಕ್ಷ್ಮಣ ಸವದಿ ಡಿಕೆ ಶಿವಕುಮಾರ್ ಸಂಪರ್ಕದಲ್ಲಿದ್ದಾರೆ; ಟಿವಿ9ಗೆ ಎಂಎಲ್​ಸಿ ಲಖನ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

Published On - 3:55 pm, Tue, 1 February 22