ಲಕ್ಷ್ಮಣ ಸವದಿ ಡಿಕೆ ಶಿವಕುಮಾರ್ ಸಂಪರ್ಕದಲ್ಲಿದ್ದಾರೆ; ಟಿವಿ9ಗೆ ಎಂಎಲ್​ಸಿ ಲಖನ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

ಸಚಿವ ಉಮೇಶ್ ಕತ್ತಿ ನಿವಾಸದಲ್ಲಿ ಗೌಪ್ಯ ಸಭೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಲಖನ್ ಜಾರಕಿಹೊಳಿ, ಜಾರಕಿಹೊಳಿ ಬ್ರದರ್ಸ್ ಹೊರಗಿಟ್ಟು ಸಭೆ ಮಾಡೋದಲ್ಲ. ಯಾರನ್ನೂ ಹಣಿಯಲು ಆಗಲ್ಲ, ಏನನ್ನೂ ಮಾಡಲಾಗಲ್ಲ.

ಲಕ್ಷ್ಮಣ ಸವದಿ ಡಿಕೆ ಶಿವಕುಮಾರ್ ಸಂಪರ್ಕದಲ್ಲಿದ್ದಾರೆ; ಟಿವಿ9ಗೆ ಎಂಎಲ್​ಸಿ ಲಖನ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಲಕ್ಷ್ಮಣ ಸವದಿ
Follow us
TV9 Web
| Updated By: sandhya thejappa

Updated on: Jan 27, 2022 | 1:05 PM

ಬೆಳಗಾವಿ: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಜೆಡಿಎಸ್ ಮತ್ತು ಬಿಜೆಪಿ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಬೆಳಗಾವಿಯಲ್ಲಿ ಎಂಎಲ್​ಸಿ ಲಖನ್ ಜಾರಕಿಹೊಳಿ (Lakhan Jarkiholi) ಟಿವಿ9ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಲಕ್ಷ್ಮಣ ಸವದಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸಂಪರ್ಕದಲ್ಲಿದ್ದಾರೆ. ಡಿಕೆಶಿ, ಸವದಿ ಮಾತನಾಡಿರುವ ಮೊಬೈಲ್ ನಂಬರ್ ಇದೆ. ಸವದಿ, ಡಿಕೆಶಿ ಮಾತನಾಡಿದ ನಂಬರ್ ನಮ್ಮ ಬಳಿ ಇದೆ. ಲಕ್ಷ್ಮಣ ಸವದಿ ಬೇರೆ ನಂಬ್​ನಿಂದ ಡಿಕೆಶಿ ಜೊತೆ ಮಾತುಕತೆ ನಡೆಸಿದ್ದಾರೆ. ಸೋತ ನಾಯಕರೇ ಡಿಕೆಶಿ ಜತೆ ಸಂಪರ್ಕದಲ್ಲಿರುವವರು ಅಂತ ಲಖನ್ ಜಾರಕಿಹೊಳಿ ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಲಖನ್ ಜಾರಕಿಹೊಳಿ, ಬಿಜೆಪಿ ವರಿಷ್ಠರು ರಮೇಶ್, ಬಾಲಚಂದ್ರರನ್ನ ಬಳಸಿಕೊಳ್ಳಬೇಕು. ರಮೇಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ಕೊಟ್ಟರೆ ಇನ್ನೂ 25 ಸ್ಥಾನ ಹೆಚ್ಚು ಗೆಲ್ಲುತ್ತಾರೆ. 25ಕ್ಕೂ ಹೆಚ್ಚು ಶಾಸಕರು ರಮೇಶ್ ಸಂಪರ್ಕದಲ್ಲಿ ಇದ್ದಾರೆ ಅಂತ ತಿಳಿಸಿದರು.

ಸಚಿವ ಉಮೇಶ್ ಕತ್ತಿ ನಿವಾಸದಲ್ಲಿ ಗೌಪ್ಯ ಸಭೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಲಖನ್ ಜಾರಕಿಹೊಳಿ, ಜಾರಕಿಹೊಳಿ ಬ್ರದರ್ಸ್ ಹೊರಗಿಟ್ಟು ಸಭೆ ಮಾಡೋದಲ್ಲ. ಯಾರನ್ನೂ ಹಣಿಯಲು ಆಗಲ್ಲ, ಏನನ್ನೂ ಮಾಡಲಾಗಲ್ಲ. ಲಕ್ಷ್ಮಣ ಸವದಿ ಡಿಸಿಎಂ ಆದ್ರೂ ಪಕ್ಷ ಸಂಘಟನೆ ಮಾಡಿಲ್ಲ. ಉಮೇಶ್ ಕತ್ತಿ ರಮೇಶ್ ಜಾರಕಿಹೊಳಿ ಶಕ್ತಿ ಕುಂದಿಸಲಾಗಲ್ಲ. ರಮೇಶ್ಗೆ ಸ್ಥಾನ ನೀಡಿದರೆ ಕಾಂಗ್ರೆಸ್ನವರು ಬಿಜೆಪಿ ಸೇರುತ್ತಾರೆ. ಬೆಳಗಾವಿಯ ಎಲ್ಲಾ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ. ಸೋತವರೇ ರಮೇಶ್ಗೆ ಸಚಿವ ಸ್ಥಾನ ಕೊಡಬೇಡಿ ಅಂತಿದ್ದಾರೆ. ಡಿಕೆಶಿ, ಸವದಿ ಕುತಂತ್ರದಿಂದ ಎಮ್ಎಲ್ಸಿ ಎಲೆಕ್ಷನ್ನಲ್ಲಿ ಸೋಲು ಅನುಭವಿಸಿದರು ಅಂತ ಗೋಕಾಕ್ನಲ್ಲಿ ಎಂಎಲ್​ಸಿ ಲಖನ್ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ

ಹಸೆಮಣೆ ಏರಿದ ‘ಕೆಜಿಎಫ್​’ ನಟಿ ಮೌನಿ ರಾಯ್​; ಸೂರಜ್​ ನಂಬಿಯಾರ್​ ಜತೆ ಬೆಂಗಾಲಿ ಬೆಡಗಿ ಸಪ್ತಪದಿ

ಹಿಂದೂ ಆಗಿ ಭಾರತದಲ್ಲಿ ಅಕ್ರಮವಾಗಿ ನೆಲಸಿದ್ದ ಬಾಂಗ್ಲಾ ಮಹಿಳೆ ಬಂಧನ, ಹಿನ್ನೆಲೆ ಏನಿತ್ತು?