ಮಹದೇಶ್ವರ ಬೆಟ್ಟದ ದೊಡ್ಡಾಣೆ ಗ್ರಾಮದಲ್ಲಿ ಜನರಿಗೆ ಜ್ವರ, ಕಾಡಿನಲ್ಲಿ ನಡೆಯಲಾಗದೆ ನರಳಾಟ, ವೈದ್ಯರನ್ನು ಕಳುಹಿಸಲು ಗ್ರಾಮಸ್ಥರ ಮೊರೆ
ಸುಳ್ವಾಡಿಗೆ ಚಿಕಿತ್ಸೆಗೆಂದು ಕಾಡಿನಲ್ಲಿ ಬರುವಾಗ ಸುಸ್ತಾಗಿ ದಾರಿಯಲ್ಲೇ ಮಹಿಳೆ ಮಲಗಿದ ಘಟನೆ ಸಹ ನಡೆದಿದೆ. ಗ್ರಾಮದ ಬಹುತೇಕ ಮಂದಿಗೆ ಎರಡನೇ ಡೋಸ್ ವ್ಯಾಕ್ಸಿನೇಷನ್ ಸಹ ಇನ್ನೂ ಆಗಿಲ್ಲ. ಹೀಗಾಗಿ ಜೀಪ್ ಮೂಲಕ ವೈದ್ಯರನ್ನು ಕಳಿಸಿ ಚಿಕಿತ್ಸೆ ಕೊಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಚಾಮರಾಜನಗರ: ಜಿಲ್ಲೆಯ ಮಹದೇಶ್ವರ ಬೆಟ್ಟದ ದೊಡ್ಡಾಣೆ ಗ್ರಾಮದ 70ಕ್ಕೂ ಹೆಚ್ಚು ಜನರಿಗೆ ನೆಗಡಿ, ಜ್ವರ, ತಲೆನೋವು, ಮೈಕೈ ನೋವು ಕಾಣಿಸಿಕೊಂಡಿದೆ. ಚಿಕಿತ್ಸೆ ಪಡೆಯಲು 11 ಕಿ.ಮೀ. ಕಾಡಿನಲ್ಲಿ ಡೋಲಿಕಟ್ಟಿಕೊಂಡು ಹೋಗಬೇಕಾದ ಸ್ಥಿತಿ ಇದ್ದು ಚಿಕಿತ್ಸೆ ಇಲ್ಲದೆ ಗ್ರಾಮಸ್ಥರು ನರಳುತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ದೊಡ್ಡಾಣೆ ಗ್ರಾಮದ ಜನರು ಕಾಡಂಚಿನಲ್ಲಿ ವಾಸಿಸುವುದರಿಂದ ಅವರಿಗೆ ಯಾವುದೇ ರೀತಿಯ ಮೂಲ ಸೌಕರ್ಯಗಳಿಲ್ಲ. ಆರೋಗ್ಯ ಕೆಟ್ಟರೆ ಆಸ್ಪತ್ರೆಗೆ ಹೋಗಲು 11 ಕಿ.ಮೀ. ಕಾಡಿನಲ್ಲಿ ಡೋಲಿಕಟ್ಟಿಕೊಂಡು ಹೋಗಬೇಕು. ಗರ್ಭಿಣಿ, ವೃದ್ಧರಿಗಂತೋ ನರಕದ ವಾತಾವರಣ. ಆದರೂ ಹುಟ್ಟಿದಾಗಿಂದ ಇಲ್ಲೇ ಇದ್ದವೇ. ಇಲ್ಲೇ ಸಾಯುತ್ತೇವೆ ಎಂದು ಕಷ್ಟನೋ ಸುಖನೋ ಜೀವನ ಸಾಗಿಸುತ್ತಿದ್ದಾರೆ. ಸದ್ಯ ಈ ಗ್ರಾಮದ 70ಕ್ಕೂ ಹೆಚ್ಚು ಜನರಿಗೆ ನೆಗಡಿ, ಜ್ವರ, ತಲೆನೋವು, ಮೈಕೈ ನೋವು ಕಾಣಿಸಿಕೊಂಡಿದೆ. ಅಲ್ಲದೆ ಡೋಲಿ ಕಟ್ಟುವವರಿಗೂ ಜ್ವರ ಹಿನ್ನೆಲೆ ಗ್ರಾಮಸ್ಥರು ಆಸ್ಪತ್ರೆಗೆ ಹೋಗಲು ಆಗದೆ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ.
ಸುಳ್ವಾಡಿಗೆ ಚಿಕಿತ್ಸೆಗೆಂದು ಕಾಡಿನಲ್ಲಿ ಬರುವಾಗ ಸುಸ್ತಾಗಿ ದಾರಿಯಲ್ಲೇ ಮಹಿಳೆ ಮಲಗಿದ ಘಟನೆ ಸಹ ನಡೆದಿದೆ. ಗ್ರಾಮದ ಬಹುತೇಕ ಮಂದಿಗೆ ಎರಡನೇ ಡೋಸ್ ವ್ಯಾಕ್ಸಿನೇಷನ್ ಸಹ ಇನ್ನೂ ಆಗಿಲ್ಲ. ಹೀಗಾಗಿ ಜೀಪ್ ಮೂಲಕ ವೈದ್ಯರನ್ನು ಕಳಿಸಿ ಚಿಕಿತ್ಸೆ ಕೊಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸಿದ್ಧಾರ್ಥ್ ಮಲ್ಹೋತ್ರಾ ಅವರ ಮುಂದಿನ ಚಿತ್ರವನ್ನು ಶಾರುಖ್ ಖಾನ್ ನಿರ್ಮಿಸಲಿದ್ದಾರೆಯೇ..?
ಕಾಡಂಚಿನ ಗ್ರಾಮಗಳ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ; ಕಾಡು ಪ್ರಾಣಿಗಳಿಂದ ಮುಕ್ತಿ ಪಡೆಯಲು ಜಿರೋ ಕಾಸ್ಟ್ ಯೋಜನೆ