ಪ್ರಧಾನಿ ಮೋದಿ ರಿಮೋಟ್​ ಕಂಟ್ರೋಲ್​ ಹೇಳಿಕೆಗೆ ತಿರುಗೇಟು ನೀಡಿದ ಮಲ್ಲಿಕಾರ್ಜುನ ಖರ್ಗೆ

|

Updated on: Mar 20, 2023 | 3:56 PM

ಹೌದು ನಾನು ರಿಮೋಟ್ ಕಂಟ್ರೋಲ್​ನಲ್ಲಿ ಇದ್ದೇನೆ. ಆದರೆ, ಬಿಜೆಪಿ ಅಧ್ಯಕ್ಷ ನಡ್ಡಾ ಯಾರ ಕಂಟ್ರೋಲ್​ನಲ್ಲಿ ಇದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಪ್ರಧಾನಿ ಮೋದಿ ರಿಮೋಟ್​ ಕಂಟ್ರೋಲ್​ ಹೇಳಿಕೆಗೆ ತಿರುಗೇಟು ನೀಡಿದ ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Image Credit source: ndtv.com
Follow us on

ಬೆಳಗಾವಿ: ಹೌದು ನಾನು ರಿಮೋಟ್ ಕಂಟ್ರೋಲ್​ನಲ್ಲಿ ಇದ್ದೇನೆ. ಆದರೆ, ಬಿಜೆಪಿ ಅಧ್ಯಕ್ಷ ನಡ್ಡಾ ಯಾರ ಕಂಟ್ರೋಲ್​ನಲ್ಲಿ ಇದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಶ್ನಿಸಿದರು. ಜಿಲ್ಲೆಯ ಸಿಪಿಎಡ್​ ಮೈದಾನದಲ್ಲಿ ಯುವ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ರಿಮೋಟ್​ ಕಂಟ್ರೋಲ್​ನಲ್ಲಿ ಇದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದರು.  ಜೋಡೋ ಯಾತ್ರೆ ವೇಳೆ ಜನ ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು. ದೇಶದಲ್ಲಿ ಜಾತಿ ಪದ್ಧತಿ, ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಿದೆ. ಇದನ್ನು ಹೇಳಿದ್ದಕ್ಕೆ ರಾಹುಲ್​ ಗಾಂಧಿಗೆ ಕಿರುಕುಳ ಕೊಡುತ್ತಿದ್ದಾರೆ. ಜೈಲಿಗೆ ಹಾಕಿದರೂ ನಾವು ಸತ್ಯವನ್ನ ಹೇಳುವುದನ್ನ ಬಿಡುವುದಿಲ್ಲ. ಖಾಲಿ ಇರುವ ಉದ್ಯೋಗವನ್ನು ಬಿಜೆಪಿ ಸರ್ಕಾರ ಭರ್ತಿ ಮಾಡುತ್ತಿಲ್ಲ. ನಾವು ಅಧಿಕಾರಕ್ಕೆ ಬಂದರೆ ಒಂದೂವರೆ ವರ್ಷದಲ್ಲಿ ಒಂದೂವರೆ ಲಕ್ಷ ಹುದ್ದೆ ಭರ್ತಿ ಮಾಡುತ್ತೇವೆ ಎಂದು ಹೇಳಿದರು.

ಒಗಟ್ಟಾಗಿ ಈ ಚುನಾವಣೆಯನ್ನ ನಾವೆಲ್ಲರೂ ಎದುರಿಸಬೇಕೆಗಿದೆ

ಈಗ ಚುನಾವಣೆ ಬರುತ್ತಿದೆ. ಕರ್ನಾಟಕ ರಾಜ್ಯಕ್ಕೆ ಬಹಳ ಮಹತ್ವದ ಚುನಾವಣೆ. ಇಡೀ ದೇಶಕ್ಕೂ ಒಂದು ಸಂದೇಶ ಕೊಡುವ ಚುನಾವಣೆ. ಒಗಟ್ಟಾಗಿ ಈ ಚುನಾವಣೆಯನ್ನ ನಾವೆಲ್ಲರೂ ಎದುರಿಸಬೇಕಾಗಿದೆ. ಎಐಸಿಸಿ ಅಧ್ಯಕ್ಷನಾದ ಮೇಲೆ ಮೊದಲ ಬಾರಿಗೆ ನಾನು ಇಲ್ಲಿ ಕಾಲಿಟ್ಟಿದ್ದೇನೆ. ಬೆಳಗಾವಿ ಕಾಂಗ್ರೆಸ್‌ಗೆ ಒಂದು ಪವಿತ್ರವಾದ ಭೂಮಿ.. ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷರಾಗಿ ಮಹಾತ್ಮ ಗಾಂಧೀಜಿ ಬೆಳಗಾವಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗಿಯಾಗಿದ್ದರು. ಇಂದು ಅದೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷನ್ನಾಗಿ ನನ್ನನ್ನು ಕುರಿಸಿದ್ದೀರಿ ಎಂದರು.

ಇದನ್ನೂ ಓದಿ: ಉರಿಗೌಡ, ನಂಜೇಗೌಡ ಗೊತ್ತಿಲ್ಲ, ದೇವೇಗೌಡ, ರಂಗೇಗೌಡ ಗೊತ್ತು: ಸಚಿವ ಡಾ ಕೆ ಸುಧಾಕರ್

ಪ್ರಧಾನಿ ಮೋದಿಗೆ ಪ್ರಶ್ನೆ ಮಾಡಿದ ಖರ್ಗೆ  

ಒಂದು ಕಾಲದಲ್ಲಿ ಬೆಳಗಾವಿ ಕಾಂಗ್ರೆಸ್​ನ ಶಕ್ತಿಶಾಲಿ ಜಿಲ್ಲೆಯಾಗಿತ್ತು. ಹದಿನೆಂಟು ಸೀಟ್​ನಲ್ಲಿ 15-16 ಸೀಟ್​ ಗೆಲ್ಲುತ್ತೇವೆ. ಇಂದು ಆ ಪರಿಸ್ಥಿತಿ ಇದೆ. ಖಂಡಿತವಾಗಿ 18 ಸ್ಥಾನವನ್ನ ಬೆಳಗಾವಿಯಲ್ಲಿ ಗೆಲ್ಲುತ್ತೇವೆ. ಇಲ್ಲಿನ ಸರ್ಕಾರ ನಲವತ್ತು ಪರ್ಸಂಟ್ ಸರ್ಕಾರ. ಯಾವ ಕಾಲದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಭ್ರಷ್ಟಾಚಾರ ಇರಲಿಲ್ಲ. ಗುತ್ತಿಗೆದಾರರು ಪರ್ಸಂಟೇಜ್ ಕೊಡುವ ಕುರಿತು ಮೋದಿಯವರಿಗೆ ದೂರು ಕೊಟ್ಟಿದ್ದಾರೆ. ನೀವು ಯಾಕೆ ಅದರ ವಿರುದ್ಧ ಕೇಸ್ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Belagavi: ಕಾಂಗ್ರೆಸ್ ನಾಲ್ಕನೇ ಗ್ಯಾರಂಟಿ 3,000 ರೂ. ನಿರುದ್ಯೋಗ ಭತ್ಯೆ; ರಾಹುಲ್ ಗಾಂಧಿ ಘೋಷಣೆ

ಜಮ್ಮು ಕಾಶ್ಮೀರದಲ್ಲಿ 40 ದಿನದ ಹಿಂದೆ ರಾಹುಲ್ ಗಾಂಧಿ ಹೇಳಿದ ಮಾತನ್ನ, ನಿಮಗೆ ಯಾವ ಹೆಣ್ಣು ಮಗಳು ಹೇಳಿದಲು ಅಂತಾ ಸಾಕ್ಷಿ ಕೊಡಿ ಎಂದು ಅವರ ಮನೆಗೆ ಬಂದು ಕೇಳುತ್ತಿದ್ದಾರೆ. ಕರ್ನಾಟಕದಲ್ಲಿ ನಲವತ್ತು ಪರ್ಸಂಟ್ ಸಾಕ್ಷಿ ಕೊಟ್ಟರೂ ಏನು ಮಾಡಿದಿರಿ ಎಂದು ಹೇಳಿದರು.

ರಾಜ್ಯದಲ್ಲಿರೋದು 40% ಕಮಿಷನ್ ಸರ್ಕಾರ ಎಂದ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿರೋದು 40% ಕಮಿಷನ್ ಸರ್ಕಾರ. ಕಮಿಷನ್​ ಕೊಡದಿದರೆ ಈ ಸರ್ಕಾರದಲ್ಲಿ ಯಾವುದೇ ಕೆಲಸ ಆಗಲ್ಲ. ಶಿಕ್ಷಣ ಕ್ಷೇತ್ರವನ್ನೂ ಬಿಜೆಪಿ ನಾಯಕರು ಹಾಳು ಮಾಡುತ್ತಿದ್ದಾರೆ. ಎನ್​ಇಪಿ ಜಾರಿ ಮೂಲಕ ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ. ಯುವಕರು ರಾಜ್ಯದಲ್ಲಿರುವ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:44 pm, Mon, 20 March 23