ಪ್ರಧಾನಿ ಮೋದಿ ಸ್ವಾವಲಂಬಿ ಹೇಳಿಕೆ ಮುಂದಿಟ್ಟುಕೊಂಡು ರಾಹುಲ್ ಗಾಂಧಿಯನ್ನು ಟೀಕಿಸಿದ ತೇಜಸ್ವಿ ಸೂರ್ಯ
ಪ್ರಧಾನಿ ಮೋದಿ ಅವರು ಸ್ವಾವಲಂಬಿ ಯುವಜನತೆಯ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತಿದ್ದರೆ, ಇತ್ತ ರಾಹುಲ್ ಗಾಂಧಿ ಅವರು ರೂ. 3ಸಾವಿರ ಭತ್ಯೆ ಕೊಡುವ ಮಹಾನ್ ಯೋಜನೆಯನ್ನು ಕರ್ನಾಟಕದ ಜನತೆಗೆ ಘೋಷಿಸುತ್ತಿರುವುದು ವಿಪರ್ಯಾಸ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly El3ction 2023) ದಿನಗಳನ್ನು ಲೆಕ್ಕ ಹಾಕಲಾಗುತ್ತಿದ್ದು, ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ವಿರೋಧಿ ಪಕ್ಷಳ ವಿರುದ್ಧ ತಂತ್ರ-ಪ್ರತಿತಂತ್ರಗಳನ್ನು ರೂಪಿಸುವಲ್ಲಿ ತೊಡಗಿದ್ದು, ಪರಸ್ಪರ ಟೀಕಾ ಪ್ರಹಾರಗಳನ್ನು ಆರೋಪ-ಪ್ರತ್ಯಾರೋಪಗಳನ್ನು ನಡೆಸುತ್ತಿವೆ. ಇದರ ಜೊತೆಗೆ ಮತದಾರರನ್ನು ತಮ್ಮತ್ತ ಸೆಳೆಯಲು ಆಮಿಷದ ಭರವಸೆಗಳನ್ನು ನೀಡಲಾಗುತ್ತಿದೆ. ಅದರಂತೆ ರಾಹುಲ್ ಗಾಂಧಿಯವರು (Rahul Gandhi) 3ಸಾವಿರ ರೂ. ಭತ್ಯೆ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನು ಟ್ವಿಟರ್ನಲ್ಲಿ ಟೀಕಿಸಿದ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ (Tejasvi Surya), “ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು, ಸ್ಟಾರ್ಟ್ ಅಪ್, ಡಿಜಿಟಲ್ ಇಂಡಿಯಾ, ಮುದ್ರಾ ಮತ್ತು ಇನ್ನಿತರ ಯೋಜನೆಗಳಿಂದ ಸ್ವಾವಲಂಬಿ ಯುವಜನತೆಯ ನಿರ್ಮಾಣಕ್ಕೆ ಪ್ರಯತ್ನ ಪಡುತ್ತಿದ್ದರೆ, ಇನ್ನೊಂದೆಡೆ ರಾಹುಲ್ ಗಾಂಧಿ ಅವರು ರೂ. 3ಸಾವಿರ ಭತ್ಯೆ ಕೊಡುವ ಮಹಾನ್ ಯೋಜನೆಯನ್ನು ಕರ್ನಾಟಕದ ಜನತೆಗೆ ಘೋಷಿಸುತ್ತಿರುವುದು ವಿಪರ್ಯಾಸ” ಎಂದರು.
ಒಂದೆಡೆ ಪ್ರಧಾನಿ ಶ್ರೀ @narendramodi ರವರು, ಸ್ಟಾರ್ಟ್ ಅಪ್, ಡಿಜಿಟಲ್ ಇಂಡಿಯಾ, ಮುದ್ರಾ & ಇನ್ನಿತರ ಯೋಜನೆಗಳಿಂದ ಸ್ವಾವಲಂಬಿ ಯುವಜನತೆಯ ನಿರ್ಮಾಣಕ್ಕೆ ಪ್ರಯತ್ನ ಪಡುತ್ತಿದ್ದರೆ, ಇನ್ನೊಂದೆಡೆ @RahulGandhi ರವರು ರೂ 3ಸಾವಿರ ಭತ್ಯೆ ಕೊಡುವ ಮಹಾನ್ ಯೋಜನೆಯನ್ನು ಕರ್ನಾಟಕದ ಜನತೆಗೆ ಘೋಷಿಸುತ್ತಿರುವುದು ವಿಪರ್ಯಾಸ.
1/2
— Tejasvi Surya (@Tejasvi_Surya) March 20, 2023
ಅಲ್ಲದೆ, “ಇಂದಿನ ಆಶಾದಾಯಿ ಯುವ ಪೀಳಿಗೆಯಿಂದ ಕಾಂಗ್ರೆಸ್ ಪಕ್ಷ ಎಷ್ಟು ದೂರ ಸರಿದಿದೆ ಎಂಬುದಕ್ಕೆ ಇದು ನಿದರ್ಶನ. ದೇಶದ ಆಶಾದಾಯಕ, ಭರವಸೆಯ ಯುವಜನತೆಗೆ ನಿರುದ್ಯೋಗಿ ಕಾಂಗ್ರೆಸ್ ಪಕ್ಷವು ಮಾಡುತ್ತಿರುವ ದ್ರೋಹ ಅಕ್ಷಮ್ಯ” ಎಂದು ತೇಜಸ್ವಿ ಸೂರ್ಯ ಅವರು ಟೀಕಿಸಿದರು.
ಇದನ್ನೂ ಓದಿ: Belagavi: ಕಾಂಗ್ರೆಸ್ ನಾಲ್ಕನೇ ಗ್ಯಾರಂಟಿ 3,000 ರೂ. ನಿರುದ್ಯೋಗ ಭತ್ಯೆ; ರಾಹುಲ್ ಗಾಂಧಿ ಘೋಷಣೆ
ಮೋದಿ ಸ್ವಾವಲಂಬಿ ಹೇಳಿಕೆ ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಟೀಕಿಸಿದ ತೇಜಸ್ವಿ ಸೂರ್ಯ, “ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಆಗ್ರೋ ಸ್ಟಾರ್ಟ್ ಅಪ್ಗಳು, ಉತ್ತಮ ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ವಿಶ್ವವಿದ್ಯಾಲಯಗಳನ್ನು ನಿಮಗೆ ನೀಡುತ್ತೇವೆ. ನಿಮ್ಮ ಭವಿಷ್ಯವನ್ನು ನಿರ್ಮಿಸಿ” ಎಂಬ ಪ್ರಧಾನಿ ಮೋದಿ ಹೇಳಿಕೆ ಮತ್ತು “ನಾನು ನಿಮಗೆ ತಿಂಗಳಿಗೆ 3000 ರೂ.ಗಳನ್ನು ನೀಡುತ್ತೇನೆ” ಎಂದು ರಾಹುಲ್ ಗಾಂಧಿ ಕರ್ನಾಟಕದಲ್ಲಿ ನೀಡಿದ ಹೇಳಿಕೆಯನ್ನು ಟ್ವೀಟರ್ನಲ್ಲಿ ಬರೆದು ಮಹತ್ವಾಕಾಂಕ್ಷೆಯ ಯುವಕರಿಂದ ಕಾಂಗ್ರೆಸ್ ಎಷ್ಟು ಸಂಪರ್ಕ ಕಡಿದುಕೊಂಡಿದೆ ಎಂಬುದರ ಸ್ಪಷ್ಟ ಸೂಚನೆ ಎಂದು ಹೇಳಿದ್ದಾರೆ.
ದಕ್ಷಿಣ ಭಾರತದಲ್ಲೇ ಅತ್ಯಂತ ಕಡಿಮೆ ನಿರುದ್ಯೋಗ ಪ್ರಮಾಣ ಹೊಂದಿರುವ ರಾಜ್ಯ ಕರ್ನಾಟಕ
ನಿರುದ್ಯೋಗದ ಬಗ್ಗೆ ಟ್ವೀಟ್ ಮಾಡಿದ ತೇಜಸ್ವಿ ಸೂರ್ಯ, ಗೌರವಾನ್ವಿತ ಖರ್ಗೆ ಸರ್, ಇಡೀ ದಕ್ಷಿಣ ಭಾರತದಲ್ಲೇ ಅತ್ಯಂತ ಕಡಿಮೆ ನಿರುದ್ಯೋಗ ಪ್ರಮಾಣವನ್ನು ಹೊಂದಿರುವ ರಾಜ್ಯ ನಮ್ಮ ಕರ್ನಾಟಕ, ಬಿಜೆಪಿ ಡಬಲ್ ಇಂಜಿನ್ ಸರ್ಕಾರಗಳು ತಂದ ಅಭಿವೃದ್ಧಿಗೆ ಧನ್ಯವಾದಗಳು. ಇನ್ನೂ ಒಂದು ಅವಧಿಯ ಸ್ಥಿರ ಬಿಜೆಪಿ ಸರ್ಕಾರದೊಂದಿಗೆ, ರಾಜ್ಯವು ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಸಾಕ್ಷಿಯಾಗಲಿದೆ ಎಂದು ಬರೆದು ಪೋಸ್ಟರ್ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷ ಗೃಹಲಕ್ಷಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆ ಘೋಷಿಸಿದೆ. 2 ಕೋಟಿ ಉದ್ಯೋಗದ ಮಾತು ಬಿಡಿ, ದೇಶದಲ್ಲಿ 50 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದರೂ ಅದನ್ನೂ ತುಂಬುತ್ತಿಲ್ಲ. ರಾಜ್ಯದಲ್ಲಿ 2.50 ಲಕ್ಷ ಉದ್ಯೋಗ ಖಾಲಿ ಇದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಹುದ್ದೆ ತುಂಬುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿರುವುದಾಗಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿತ್ತು.
Respected Kharge Sir,
The state with the lowest unemployment rate in all of southern India is our Karnataka, thanks to the development brought by the BJP double engine Govts.
With one more term of a stable BJP Govt, state will witness even more development. https://t.co/8HZBLsQuRA pic.twitter.com/bLd0FnhdSn
— Tejasvi Surya (@Tejasvi_Surya) March 20, 2023
ತೇಜಸ್ವಿ ಸೂರ್ಯ ಅವರು ಹಂಚಿಕೊಂಡ ಪೋಸ್ಟರ್ನಲ್ಲಿ ರಾಜ್ಯವಾರು ನಿರುದ್ಯೋಗ ಪ್ರಮಾಣವನ್ನು ತಿಳಿಸಲಾಗಿದೆ. ಗುಜರಾತ್ ಗ್ರಾಮೀಣ ಪ್ರದೇಶದಲ್ಲಿ 0.8 ಮತ್ತು ನಗರ ಪ್ರದೇಶದಲ್ಲಿ 4.6 ರಷ್ಟು ನಿರುದ್ಯೋಗ ಇದ್ದು, ರಾಜ್ಯದಲ್ಲಿ ಒಟ್ಟು ಶೇ. 2.2ರಷ್ಟು ನಿರುದ್ಯೋಗ ಇದೆ. ಕರ್ನಾಟಕ ರಾಜ್ಯ ಗ್ರಾಮೀಣ ಪ್ರದೇಶದಲ್ಲಿ 2.1, ನಗರ ಪ್ರದೇಶದಲ್ಲಿ 3.8ರಷ್ಟು ನಿರುದ್ಯೋಗ ಇದ್ದು, ಒಟ್ಟಾರೆಯಾಗಿ ರಾಜ್ಯದಲ್ಲಿ 2.7ರಷ್ಟು ನಿರುದ್ಯೋಗ ಇದೆ. ಇನ್ನುಳಿದಂತೆ ಮಹರಾಷ್ಟ್ರದಲ್ಲಿ ಶೇ. 3.7ರಷ್ಟು, ಆಂಧ್ರಪ್ರದೇಶದಲ್ಲಿ ಶೇ 4.1ರಷ್ಟು, ತೆಲಂಗಾಣದಲ್ಲಿ ಶೇ 4.9ರಷ್ಟು, ತಮಿಳುನಾಡಿನಲ್ಲಿ ಶೇ.5.2ರಷ್ಟು ಹಾಗೂ ಕೇರಳದಲ್ಲಿ 10.1ರಷ್ಟು ನಿರುದ್ಯೋಗ ಇದೆ ಎಂದು ಪೋಸ್ಟರ್ನಲ್ಲಿ ತಿಳಿಸಲಾಗಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Mon, 20 March 23