Tejasvi Surya: ತೇಜಸ್ವಿ ಸೂರ್ಯಗೆ ಒಲಿದ ‘ಅತ್ಯುತ್ತಮ ಸಂಸದ’ ಪ್ರಶಸ್ತಿ

Best Debutant Parliamentarian: ಪ್ರಥಮ ಬಾರಿಗೆ ಸಂಸದರಾಗಿ ಗಣನೀಯ ಸೇವೆ ಸಲ್ಲಿಸುವ ಅತ್ಯುತ್ತಮ ಸಂಸದರಿಗೆ ನೀಡಲಾಗುವ 'ಅತ್ಯುತ್ತಮ ಸಂಸದ' ಪ್ರಶಸ್ತಿಗೆ ತೇಜಸ್ವೀ ಸೂರ್ಯ ಅವರು ಭಾಜನರಾಗಿದ್ದು, ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

Tejasvi Surya: ತೇಜಸ್ವಿ ಸೂರ್ಯಗೆ ಒಲಿದ 'ಅತ್ಯುತ್ತಮ ಸಂಸದ' ಪ್ರಶಸ್ತಿ
ಸಂಸದ ತೇಜಸ್ವಿ ಸೂರ್ಯ
Follow us
Rakesh Nayak Manchi
|

Updated on: Mar 14, 2023 | 9:02 PM

ಬೆಂಗಳೂರು: ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಚೊಚ್ಚಲ ಬಾರಿಗೆ ಆಯ್ಕೆಯಾಗಿ ಉತ್ತಮ ಸೇವೆ ಸಲ್ಲಿಸಿರುವ ಸಂಸದರಿಗೆ ನೀಡಲಾಗುವ ಲೋಕಮತ್ ಸಂಸದೀಯ ಪ್ರಶಸ್ತಿ – 2022 (4ನೆ ಆವೃತ್ತಿ)ಯಲ್ಲಿ ಅತ್ಯುತ್ತಮ ಸಂಸದ (Best Debutant Parliamentarian) ಪ್ರಶಸ್ತಿಗೆ ಭಾಜನರಾಗಿದ್ದು, ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪಡೆದಿದ್ದು ಗಮನಾರ್ಹ ಎಂದು ಬೆಂಗಳೂರು ದಕ್ಷಿಣ ಸಂಸದರ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ. 17ನೇ ಲೋಕಸಭಾ ಅವಧಿಯ ಎರಡನೇ ಅತೀ ಕಿರಿಯ ಸಂಸದರಾಗಿ 28ರ ವಯಸ್ಸಿನಲ್ಲಿ ಸಂಸದರಾಗಿ ಆಯ್ಕೆಯಾಗಿರುವ ತೇಜಸ್ವೀ ಸೂರ್ಯ ಅವರು, ಪ್ರಾದೇಶಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಅನೇಕ ವಿಷಯಗಳನ್ನು ಸಂಸತ್ತಿನಲ್ಲಿ ಹಾಗೂ ಮಾಹಿತಿ ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರಾಗಿ ದತ್ತಾಂಶ ಸುರಕ್ಷತೆ ಬಗ್ಗೆ, ವೈಯುಕ್ತಿಕ ದತ್ತಾಂಶ ಸುರಕ್ಷತೆ ಮಸೂದೆಯ ಜಂಟಿ ಸ್ಥಾಯಿ ಸಮಿತಿ ಸದಸ್ಯರಾಗಿ ನೀತಿ ನಿಯಮಾವಳಿಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ ಎಂದು ತಿಳಿಸಿದೆ.

2019ರ ಜೂನ್ 17 ರಂದು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ರಾಷ್ಟ್ರೀಯ, ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಸಂಸತ್ತಿನ 26 ಚರ್ಚೆಗಳಲ್ಲಿ ಧ್ವನಿ ಎತ್ತಿದ್ದು, ಎಲ್ಲ ಅಧಿವೇಶನಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡು ಸಂಸತ್ತಿನಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ. 17ನೇ ಲೋಕಸಭೆಯಲ್ಲಿ ಎಲ್ಲ ವಲಯಗಳ ಮೇಲಿನ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹಿತಾಸಕ್ತಿಯ 308 ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಕೇಳಿದ್ದು ( ಕೃಷಿ, ಶಿಕ್ಷಣ,ವಿಮಾನಯಾನ, ರೇಲ್ವೆ, ಐಟಿ, ಬಿಟಿ, ಅಂತರಿಕ್ಷ ಕ್ಷೇತ್ರಗಳಿಗೆ ಸಂಬಂಧಿಸಿದಂತೆ) ಈ ಕುರಿತು ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುತ್ತಾರೆ ಎಂದು ಸಂಸದರ ಕಚೇರಿ ತಿಳಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ ನಂಬರ್ ಕಡಿಮೆಯಾದರೆ ಆಮೇಲೆ ಪಶ್ಚಾತ್ತಾಪ ಪಡಬೇಡಿ, ಬಿಜೆಪಿಗೆ ಮತ ನೀಡಿ: ತೇಜಸ್ವಿ ಸೂರ್ಯ

ಈ ಹಿಂದಿನ ಆವೃತ್ತಿಗಳಲ್ಲಿ ಪ್ರಶಸ್ತಿ ಸ್ವೀಕರಿಸಿದವರಲ್ಲಿ ಡಾ. ಭಾರತಿ ಪ್ರವೀಣ್ ಪವಾರ್, ಮೀನಾಕ್ಷಿ ಲೇಖಿ (ಉದಯೋನ್ಮುಖ ಮಹಿಳಾ ಸಂಸದೆ) ಹಾಗೂ ನಿಶಿಕಾಂತ್ ದುಬೇ ಪ್ರಮುಖರು. ಡೆರೆಕ್ ಓ ಬ್ರಿಯಾನ್ ಉತ್ತಮ ಸಂಸದ, ಭಾರ್ತ್ರು ಹರಿ ಮಹ್ತಾಬ್ ಜೀವಮಾನ ಸಾಧನೆ ಪ್ರಶಸ್ತಿ ಪಡೆದಿದ್ದು ವಿಶೇಷ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ