ರಾಜ್ಯದಲ್ಲಿ ನಂಬರ್ ಕಡಿಮೆಯಾದರೆ ಆಮೇಲೆ ಪಶ್ಚಾತ್ತಾಪ ಪಡಬೇಡಿ, ಬಿಜೆಪಿಗೆ ಮತ ನೀಡಿ: ತೇಜಸ್ವಿ ಸೂರ್ಯ

Karnataka Election 2023: ಕಳೆದ 7-8 ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಮೂಲಭೂತ ಸೌಕರ್ಯ, ಅಭಿವೃದ್ಧಿ ಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಡಬಲ್ ಎಂಜಿನ್ ಸರ್ಕಾರ ದೇಶ ರಾಜ್ಯಗಳ ಅಭಿವೃದ್ಧಿ ಮಾಡುತ್ತಿದೆ. ಕರ್ನಾಟಕದ ಹಿತರಕ್ಷಣೆ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಕಾರ್ಕಳದಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿದರು.

ರಾಜ್ಯದಲ್ಲಿ ನಂಬರ್ ಕಡಿಮೆಯಾದರೆ ಆಮೇಲೆ ಪಶ್ಚಾತ್ತಾಪ ಪಡಬೇಡಿ, ಬಿಜೆಪಿಗೆ ಮತ ನೀಡಿ: ತೇಜಸ್ವಿ ಸೂರ್ಯ
ಕಾರ್ಕಳದಲ್ಲಿ ಬೈಕ್ ರ್ಯಾಲಿ ಮತ್ತು ವಿಜಯ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ತೇಜಸ್ವಿ ಸೂರ್ಯ ಭಾಷಣ
Follow us
Rakesh Nayak Manchi
|

Updated on:Feb 27, 2023 | 8:46 PM

ಉಡುಪಿ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆ ಕಾರ್ಕಳದಲ್ಲಿ ಸಚಿವ ಸುನಿಲ್ ಕುಮಾರ್ (Sunil Kumar Karkala) ಫುಲ್ ಆ್ಯಕ್ಟಿವ್ ಆಗಲು ಆರಂಭಿಸಿದ್ದು, ತಮ್ಮ ವಿರುದ್ಧ ಸ್ಪರ್ಧಿಸುತ್ತಿರುವ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಹಾಗೂ ಕಾಂಗ್ರೆಸ್​ ಮುಂದೆ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಕಾರ್ಕಳದಲ್ಲಿ ನಡೆದ ವಿಜಯ ಸಂಕಲ್ಪ ರ್ಯಾಲಿಯಲ್ಲಿ (BJP Vijay Sankalp Rally) 10,000ಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾದರು. ಕಾರ್ಕಳದಿಂದ ಅಜೆಕಾರುವರೆಗೂ ಸಾಗಿ ಬಂದ ಬೃಹತ್ ರ್ಯಾಲಿಯಲ್ಲಿ (Karkala BJP Bike Rally) ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai), ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ (Tejasvi Surya), ಸುನಿಲ್ ಕುಮಾರ್ ಇದ್ದರು. ಬಳಿಕ ಅಜೆಕಾರು ಜ್ಯೋತಿ ಹೈಸ್ಕೂಲ್ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ದೇಶದಲ್ಲೇ ಐತಿಹಾಸಿಕ ಬೈಕ್ ರಾಲಿ ಕಾರ್ಕಳದಲ್ಲಿ ನಡೆದಿದೆ. ಕರಾವಳಿಯ ಹಿಂದುತ್ವದ ಹುಲಿ ಸುನೀಲ್ ಕುಮಾರ್ ಅವರನ್ನು ಮತ್ತೆ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಏಳೆಂಟು ವರ್ಷದಲ್ಲಿ ದೇಶದಲ್ಲಿ ಕಂಡು ಕೇಳರಿಯದ ಅಭಿವೃದ್ಧಿಗಾಗಿದೆ. ರಾಷ್ಟ್ರದಲ್ಲೇ 11 ವಿಮಾನ ನಿಲ್ದಾಣ ಇರುವ ಏಕೈಕ ರಾಜ್ಯ ಕರ್ನಾಟಕ. ಮೂಲಭೂತ ಸೌಕರ್ಯ, ಅಭಿವೃದ್ಧಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಡಬಲ್ ಎಂಜಿನ್ ಸರ್ಕಾರ ದೇಶ ರಾಜ್ಯಗಳ ಅಭಿವೃದ್ಧಿ ಮಾಡುತ್ತಿದೆ. ಕರ್ನಾಟಕದ ಹಿತರಕ್ಷಣೆ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ಹಿಂದುತ್ವ ಧಾರ್ಮಿಕ ಪುನರುಜ್ಜೀವನದಕ್ಕೆ ಡಬಲ್ ಎಂಜಿನ್ ಸರ್ಕಾರ ಸಹಕರಿಸಿದೆ ಎಂದರು.

ಇದನ್ನೂ ಓದಿ: ಕಾರ್ಕಳದಲ್ಲಿ ಹಿಂದುತ್ವಕ್ಕೆ ಯಾವುದೇ ರೀತಿಯಿಂದಲೂ ಧಕ್ಕೆಯಾಗಿಲ್ಲ: ಮುತಾಲಿಕ್​ಗೆ ಟಕ್ಕರ್ ಕೊಟ್ಟ ಸುನಿಲ್ ಕುಮಾರ್

ನರೇಂದ್ರ ಮೋದಿ ನೇತೃತ್ವದ ಸರಕಾರದಿಂದಲೇ ಭಾಷೆ, ಸಂಸ್ಕೃತಿ, ಭಾರತೀಯ ಸಂಸ್ಕೃತಿ ಉಳಿದಿದೆ. ಚೀನಾ ಪಾಕಿಸ್ತಾನಕ್ಕೆ ಉತ್ತರ ಕೊಡುವ ಶಕ್ತಿಯ ಬಿಜೆಪಿಗಾಗಿ ಬಿಜೆಪಿಗೆ ಮತ ಹಾಕಿ. ಕೇಂದ್ರ ರಾಜ್ಯದ ಯೋಜನೆ ಪ್ರತಿ ಮನೆ ಮುಟ್ಟಲು ಡಬಲ್ ಎಂಜಿನ್ ಸರಕಾರ ಮತ್ತೆ ರಚನೆಯಾಗಬೇಕು. 2024 ಚುನಾವಣೆಯಲ್ಲಿ ಮೋದಿಗೆ ಗೆಲುವು ಎಂದು ಜನ ತೀರ್ಮಾನ ಮಾಡಿದ್ದಾರೆ. ರಾಜ್ಯದಲ್ಲಿ ನಂಬರ್ ಕಡಿಮೆಯಾದರೆ ಆಮೇಲೆ ಪಶ್ಚಾತ್ತಾಪ ಪಡಬೇಡಿ. ರಾಜ್ಯ ಕೇಂದ್ರದಲ್ಲಿ ಡಬಲ್ ಎಂಜಿನ್ ಸರಕಾರ ಅಧಿಕಾರಕ್ಕೆ ಬರಬೇಕು. ನಾಡಿನ ಮಹತ್ವ ಇತಿಹಾಸ ಗೌರವಿಸುವ ಬಿಜೆಪಿಗೆ ಮತ ನೀಡಿ. ಚುನಾವಣೆ ಸಂದರ್ಭದಲ್ಲಿ ಮತ್ತೆ ಬರುತ್ತೇನೆ ವಿಜಯೋತ್ಸವಕ್ಕೂ ಬರುತ್ತೇವೆ ಎಂದರು.

ಕಾರ್ಕಳ ಕ್ಕೆ ಪೊಲೀಸ್ ಅಧಿಕಾರಿ ಆಗಿ ಬಂದಾಗ ಭಯ ಇತ್ತು: ಅಣ್ಣಾಮಲೈ

ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅಣ್ಣಾಮಲೈ, ಇದೇ ಕಾರ್ಕಳಕ್ಕೆ ಪೊಲೀಸ್ ಅಧಿಕಾರಿ ಆಗಿ ಬಂದಾಗ ಭಯ ಇತ್ತು. ಇದು ಪಶ್ಚಿಮ ಘಟ್ಟದ ಮೂಲೆಯ ನಕ್ಸಲ್ ಪೀಡಿತ ಪ್ರದೇಶವಾಗಿತ್ತು. ಎಎಸ್​​ಪಿಯಾಗಿದ್ದಾಗ ಕಾರ್ಕಳದ ಜನರು ನೀಡಿದ ಸಹಕಾರ ಮರೆಯಲ್ಲ. ಕಾರ್ಕಳ ಈ ರಾಜ್ಯಕ್ಕೆ ಮುಖ್ಯಮಂತ್ರಿ ನೀಡಿದರೂ ಪ್ರಯೋಜನ ಆಗಲಿಲ್ಲ. ಕಾರ್ಕಳ ಒಂದು ಅನ್ ಲಕ್ಕೀ ಕ್ಷೇತ್ರವಾಗಿತ್ತು. ಈಗ ಸರ್ಕಾರ ಮತ್ತು ಶಾಸಕ‌ ಒಂದೇ ಪಕ್ಷ ಬಂದಿರುವುದು ಭಾಗ್ಯ, ಮೂರು ವರ್ಷ ಸುನಿಲ್ ಮಂತ್ರಿಯಾದ ಮೇಲೆ ಅಣೆಕಟ್ಟು, ರಸ್ತೆ ಅಭಿವೃದ್ಧಿ ಊಹಿಸಲಾಗದ ರೀತಿ ಅಭಿವೃದ್ಧಿ ಕಂಡಿದೆ. ಈಗ ನಕ್ಸಲ್ ಚಟುವಟಿಕೆ ಝೀರೋ ಆಗಿದೆ. ಮನೆ ಮನೆಗೂ ರಸ್ತೆ ಮಾಡಿರುವುದು ಅಚ್ಚರಿಯಾಗಿದೆ. ಹತ್ತು ವರ್ಷ ಬಿಟ್ಟು ಕಾರ್ಕಳ ನೋಡುವಾಗ ಅಭಿವೃದ್ಧಿ, ಬದಲಾವಣೆ ಆಗಿದೆ. ಇದಕ್ಕೆ ಮೂಲ ಕಾರಣ ಬಿಜೆಪಿ ಎಂದರು.

ಈವರೆಗೆ ಮ್ಯಾಜಿಕ್ ನಂಬರ್ 113 ಕೊಟ್ಟಿಲ್ಲ. ಜನ ಪರೀಕ್ಷಿಸಿ ಪರೀಕ್ಷಿಸಿ ಅಧಿಕಾರ ನೀಡುತ್ತಾ ಬಂದಿದ್ದಾರೆ. ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಮೂರು ವರ್ಷಗಳಲ್ಲಿ ಮುಖ್ಯಮಂತ್ರಿಗಳಾಗಿ ನಿಜವಾದ ಅಭಿವೃದ್ಧಿ ತೋರಿಸಿದ್ದಾರೆ. ಈ ಬಾರಿ ಸುನೀಲ್ ಪಡೆಯುವ ಮತ ಒಂದು ಲಕ್ಷ ಮತದಾಟುತ್ತದೆ. ಮೂರು ವರ್ಷ ಶಾಸಕರ ಕೆಲಸ ತೋರಿಸಿದ್ದಾರೆ, ಗೆಲ್ಲಿಸುವುದು ಕಾರ್ಯಕರ್ತರ ಜವಾಬ್ದಾರಿಯಾಗಿದೆ. ಡಬ್ಬಲ್ ಇಂಜಿನ್ ಸರ್ಕಾರ ಅಂದರೆ ಏನು ಅಂತ ಜನರಿಗೆ ತಿಳಿಸಿ ಎಂದರು.

ಮುಂದಿನ ಐವತ್ತು ದಿನದಲ್ಲಿ ಪ್ರತಿ ಮನೆಗೂ ಹತ್ತು ಬಾರಿ ಹೋಗಬೇಕು. ಕೇಂದ್ರದ ಯೋಜನೆಗಳ ಫಲಾನುಭವಿಗಳನ್ನು ತಲುಪಿ, ಮನವರಿಕೆ ಮಾಡಿ. ಡಬಲ್ ಇಂಜಿನ್ ಸರ್ಕಾರದ ಪವರ್ ಏನು ಅಂತ ತೋರಿಸಬೇಕು. ತಮಿಳುನಾಡಿಗೆ ಅಭಿವೃದ್ಧಿ ಕಾಣುವ ಅವಕಾಶ ಸಿಕ್ಕಿಲ್ಲ. ಕಳೆದ ಮೂರು ವರ್ಷ ಒಂದು ಟ್ರೈಲರ್ ನೋಡುವಾಗಲೇ ಒಳ್ಳೆಯ ಸಿನಿಮಾ ಸಿದ್ಧವಾಗಿದೆ ಅಂತ ಗೊತ್ತಾಗುತ್ತದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಮೂಲಕ ನಿಜವಾದ ಸಿನಿಮಾ ತೋರಿಸುತ್ತದೆ. ನಮ್ಮ ಪಕ್ಷದಲ್ಲಿ ಕಾರ್ಯಕರ್ತನೆ ಮುಖ್ಯ. ಕಾರ್ಕಳ ಕ್ಷೇತ್ರದಲ್ಲಿ ನಾನೇ ಮೋದಿ ಎಂದು ಕಾರ್ಯಕರ್ತರು ಕೆಲಸ ಮಾಡಬೇಕು. 2029 ರಲ್ಲಿ ಎಲ್ಲಾ ಹಂತದಲ್ಲೂ ಬಿಜೆಪಿ ಮಾತ್ರ ಇರುತ್ತದೆ. ದೇಶದ ನಿಜವಾದ ಪವರ್ ಏನು ಅಂತ ಆಗ ಗೊತ್ತಾಗುತ್ತದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:46 pm, Mon, 27 February 23