ರಾಮನಗರ: ರಾಮನಗರದಲ್ಲಷ್ಟೇ ಅಲ್ಲ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ಗೆ ಅಧಿಕಾರ ಸಿಗಲಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅಧಿಕಾರ ಖಚಿತ ಎಂದು ಟಿವಿ9ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಯುವಕರ ಹುಮ್ಮಸ್ಸಿನಿಂದ ನನಗೂ ಹುಮ್ಮಸ್ಸು ಬಂದಿದೆ. ಹೋರಾಟ ಅಂದರೆ ನಾನು ಯಾವತ್ತೂ ಯುವಕನೇ. ರೇಣುಕಾಚಾರ್ಯ ಕ್ಷಮೆ ಕೇಳಿದ್ರೆ ಮುಗಿದುಹೋಗಿಬಿಡುತ್ತಾ. ನಮ್ಮ ಹೋರಾಟ ತಡೆಗಟ್ಟೋಕೆ ಏನೇ ಷಡ್ಯಂತ್ರ ಮಾಡಲಿ, ಬೆಂಗಳೂರಿನವರೆಗೂ ಪಾದಯಾತ್ರೆ ಯಶಸ್ವಿಯಾಗಿ ತಲುಪುತ್ತೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಚಿವ ಡಾ.ಅಶ್ವತ್ಥ್ ನಾರಾಯಣರಿಂದ ಸವಾಲು ವಿಚಾರವಾಗಿ ರಾಮನಗರದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಯೋಜನೆ ಅನುಷ್ಠಾನ ಮಾಡಿ ಗಂಡಸ್ತನ ತೋರಿಸಲಿ. ಬಿಜೆಪಿಯವರು ಗಂಡಸರು ಎಂಬುದನ್ನು ತೋರಿಸಲಿ. ಪಾದಪೂಜೆ ಮಾಡಿ ಕನಕಪುರಕ್ಕೆ ಸ್ವಾಗತಿಸುವೆ ಎಂದಿದ್ದೇನೆ. ಯೋಜನೆ ಅನುಷ್ಠಾನ ಮಾಡಲಿ ಎಂಬುದೇ ನಮ್ಮ ಒತ್ತಾಯ. ನಮ್ಮದು ನೀರಿಗಾಗಿ ನಡಿಗೆ, ರಾಜಕಾರಣಕ್ಕಾಗಿ ಅಲ್ಲ ಎಂದು ಹೇಳಿದ್ದಾರೆ.
ಗಂಡಸ್ತನದ ಬಗ್ಗೆ ಕೇಳುವವರು ದೆಹಲಿಯಲ್ಲಿ ತೋರಿಸಲಿ. ಪ್ರಧಾನಿ ಬಳಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಚರ್ಚಿಸಲಿ. ನಮ್ಮ ವಿರುದ್ಧ ಇನ್ನೂ ನೂರು ಪ್ರಕರಣ ದಾಖಲಿಸಲಿ. ಅಶ್ವತ್ಥ್ ನಾರಾಯಣ ಮನೆಗೆ ಹೋಗಬೇಕೆಂದರೆ ಹೋಗುವೆ. ಪೊಲೀಸ್ ಸ್ಟೇಷನ್‌ಗೆ ಬರಬೇಕಾ, ಅರೆಸ್ಟ್ ಮಾಡಿಸಲಿ. ಮಂತ್ರಿಗಿರಿ ಉಳಿಸಿಕೊಳ್ಳಲು ಸುದ್ದಿಗೋಷ್ಠಿ ಮಾಡಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಇದನ್ನೂ ಓದಿ: ‘ಸರ್ಕಾರವೇ ಮೇಕೆದಾಟು ಪಾದಯಾತ್ರೆಯಲ್ಲಿ ಕೊರೊನಾ ಹಬ್ಬಿಸುತ್ತಿದೆ; ಡಿಕೆ ಶಿವಕುಮಾರ್ ಬಳಿ ಸೋಂಕಿತನನ್ನು ಕಳಿಸಲಾಗಿದೆ’
Published On - 3:27 pm, Tue, 11 January 22