‘ಸರ್ಕಾರವೇ ಮೇಕೆದಾಟು ಪಾದಯಾತ್ರೆಯಲ್ಲಿ ಕೊರೊನಾ ಹಬ್ಬಿಸುತ್ತಿದೆ; ಡಿಕೆ ಶಿವಕುಮಾರ್ ಬಳಿ ಸೋಂಕಿತನನ್ನು ಕಳಿಸಲಾಗಿದೆ’

‘ಸರ್ಕಾರವೇ ಮೇಕೆದಾಟು ಪಾದಯಾತ್ರೆಯಲ್ಲಿ ಕೊರೊನಾ ಹಬ್ಬಿಸುತ್ತಿದೆ; ಡಿಕೆ ಶಿವಕುಮಾರ್ ಬಳಿ ಸೋಂಕಿತನನ್ನು ಕಳಿಸಲಾಗಿದೆ’
ಡಿಕೆ ಸುರೇಶ್ (ಸಂಗ್ರಹ ಚಿತ್ರ)

ಡಿ.ಕೆ. ಶಿವಕುಮಾರ್ ಗಂಟಲುದ್ರವ ಪರೀಕ್ಷೆಗೆ ಬಂದಿದ್ದ ಅಧಿಕಾರಿ ಸೋಂಕಿತ ಎಂದು ಪರೀಕ್ಷೆಗೆ ಬಂದಿದ್ದ ಅಧಿಕಾರಿಯ ಬಗ್ಗೆ ಸುರೇಶ್​ ಮಾಹಿತಿ ಪಡೆದಿದ್ದಾರೆ. ಕೊರೊನಾ ಪಾಸಿಟಿವ್ ಅಧಿಕಾರಿ ಬಂದಿದ್ದ ಬಗ್ಗೆ ಡಿ.ಕೆ. ಸುರೇಶ್​ ಹೇಳಿಕೆ ನೀಡಿದ್ದಾರೆ.

TV9kannada Web Team

| Edited By: ganapathi bhat

Jan 10, 2022 | 4:01 PM


ರಾಮನಗರ: ಸರ್ಕಾರವೇ ನಮ್ಮ ಪಾದಯಾತ್ರೆಯಲ್ಲಿ ಕೊರೊನಾ ಹಬ್ಬಿಸುತ್ತಿದೆ. ಡಿ.ಕೆ. ಶಿವಕುಮಾರ್​ ಬಳಿಗೆ ಕೊರೊನಾ ಸೋಂಕಿತನನ್ನ ಕಳಿಸಿದ್ರು. ಡಿ.ಕೆ. ಶಿವಕುಮಾರ್​ಗೆ ಸೋಂಕು ಅಂಟಿಸುವ ಕೆಲಸ ಮಾಡ್ತಿದ್ದಾರೆ. ​ಪಾದಯಾತ್ರೆಯಲ್ಲಿರುವವರಿಗೆ ಸೋಂಕು ಅಂಟಿಸುವ ಕೆಲಸ ಆಗುತ್ತಿದೆ. ಜತೆಗೆ ಈ ಭಾಗದಲ್ಲಿ ಕೊರೊನಾ ಸೋಂಕು ಅಂಟಿಸುವ ಹುನ್ನಾರ ಇದೆ ಎಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಾದಪ್ಪನದೊಡ್ಡಿಯಲ್ಲಿ ಟಿವಿ9ಗೆ ಸಂಸದ ಡಿ.ಕೆ. ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.

ಪರೀಕ್ಷೆ ಮಾಡಲು ಕೊರೊನಾ ಸೋಂಕಿತ ವ್ಯಕ್ತಿ ಕಳುಹಿಸಿದ್ದಾರೆ. ಸೋಂಕು ಉಲ್ಬಣವಾದರೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತೆ. ಇದು ರಾಜಕೀಯ ಷಡ್ಯಂತ್ರವೆಂದು ಸರ್ಕಾರದ ವಿರುದ್ಧ ಡಿ.ಕೆ. ಸುರೇಶ್ ಆರೋಪ ಮಾಡಿದ್ದಾರೆ. ನಿನ್ನೆ ಡಿ.ಕೆ. ಶಿವಕುಮಾರ್ ಬಳಿಗೆ ಬಂದಿದ್ದ ಅಧಿಕಾರಿ ಕೊರೊನಾ ಸೋಂಕಿತ ಆಗಿದ್ದಾರೆ. ಡಿಕೆಶಿ ತಂಗಿದ್ದ ಟೆಂಟ್​ಗೆ ಬಂದಿದ್ದ ಹಿರಿಯ ಅಧಿಕಾರಿ ಸೋಂಕಿತರು ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ.

ಡಿಕೆಶಿ ಗಂಟಲುದ್ರವ ಪರೀಕ್ಷೆಗೆ ಬಂದಿದ್ದ ಅಧಿಕಾರಿ ಸೋಂಕಿತ ಎಂದು ಪರೀಕ್ಷೆಗೆ ಬಂದಿದ್ದ ಅಧಿಕಾರಿಯ ಬಗ್ಗೆ ಸುರೇಶ್​ ಮಾಹಿತಿ ಪಡೆದಿದ್ದಾರೆ. ಕೊರೊನಾ ಪಾಸಿಟಿವ್ ಅಧಿಕಾರಿ ಬಂದಿದ್ದ ಬಗ್ಗೆ ಸುರೇಶ್​ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಯಲ್ಲಿ ಶಿವರಾಜ್​ಕುಮಾರ್ ಭಾಗಿಯಾಗುತ್ತಾರೆ: ಉಮಾಶ್ರೀ, ಮಧು ಬಂಗಾರಪ್ಪ ವಿಶ್ವಾಸ

ಇದನ್ನೂ ಓದಿ: ಕೊವಿಡ್ ನಿಯಮ ಉಲ್ಲಂಘಿಸಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾದ ಎಂಪಿ ರೇಣುಕಾಚಾರ್ಯ; ಬಳಿಕ ಕ್ಷಮೆಯಾಚನೆ

Follow us on

Related Stories

Most Read Stories

Click on your DTH Provider to Add TV9 Kannada