ಬೆಂಗಳೂರು, ಜನವರಿ 06: ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಜ.22ರಂದು ಶ್ರೀರಾಮ ಮಂದಿರದ ಉದ್ಘಾಟನೆ ಆಗುತ್ತಿದೆ. ಇಡೀ ದೇಶ ಈ ಸಂಭ್ರಮದಲ್ಲಿದೆ. ರಾಮಮಂದಿರ ನಿರ್ಮಾಣದ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ಇದೀಗ ರಾಮಮಂದಿರ ಉದ್ಘಾಟನೆ ಸಂಭ್ರಮವನ್ನು ಕೆಡಿಸಲು ಕುತಂತ್ರಗಳನ್ನ ಹೆಣೆಯುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಆರೋಪ ಮಾಡಿದೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಪ್ರಭು ಶ್ರೀರಾಮ ಮಂದಿರದ ಉದ್ಘಾಟನೆ ಜನವರಿ 22 ರಂದು ಅದ್ಧೂರಿಯಾಗಿ ಆಗುತ್ತಿದೆ. ಇಡೀ ದೇಶವೇ ಸಂಭ್ರಮದಲ್ಲಿರುವಾಗ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಂಭ್ರಮವನ್ನು ಕೆಡಿಸಲು ಹೆಣಿಯುತ್ತಿರುವ ಕುತಂತ್ರಗಳು:
ರಾಮ ಬಂಟ ಹನುಮನ ನಾಡಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ದುರಾಡಳಿತಕ್ಕೆ, ಕುತಂತ್ರಕ್ಕೆ, ರಾಜ್ಯದ ಜನರು ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠಕಲಿಸಲಿರುವುದು ಅಷ್ಟೇ ಸತ್ಯ ಎಂದು ಕಿಡಿಕಾರಿದೆ.
ಪ್ರಭು ಶ್ರೀರಾಮ ಮಂದಿರದ ಉದ್ಘಾಟನೆ ಜನವರಿ 22 ರಂದು ಅದ್ಧೂರಿಯಾಗಿ ಆಗುತ್ತಿದೆ. ಇಡೀ ದೇಶವೇ ಸಂಭ್ರಮದಲ್ಲಿರುವಾಗ, @INCKarnataka ಸರ್ಕಾರ ರಾಜ್ಯದಲ್ಲಿ ಸಂಭ್ರಮವನ್ನು ಕೆಡಿಸಲು ಹೆಣಿಯುತ್ತಿರುವ ಕುತಂತ್ರಗಳು:
▪️ಅಯೋಧ್ಯಗೆ ಹೋಗುವವರಿಗೆ ಗೋಧ್ರಾ ಬೆದರಿಕೆ
▪️ಶುಭ ಘಳಿಗೆ ವೇಳೆ ಸುಳ್ಳು ಸುದ್ಧಿ ಹಬ್ಬಿಸುವುದು
▪️ರಾಮ ಭಕ್ತರು ಸಂಭ್ರಮಿಸದಂತೆ…— BJP Karnataka (@BJP4Karnataka) January 6, 2024
ಅಧಿಕಾರಕ್ಕೆ ಬಂದ ಕಾಂಗ್ರೆಸ್ ರಾಜ್ಯದಲ್ಲಿ ಹಿಂದೂಗಳನ್ನು ಸಂಪೂರ್ಣವಾಗಿ ಹತ್ತಿಕ್ಕುತ್ತಿರುವ ಪರಿ. ಮತಾಂತರ ನಿಷೇಧ ಕಾಯ್ದೆ ವಾಪಸ್, ದೇವಾಲಯಗಳು ಮುಜರಾಯಿ ಸುಪರ್ದಿಗೆ, ದೇವಸ್ಥಾನಗಳ ಹಣ ಮೌಲ್ವಿಗಳ ಆತ್ಮ ತೃಪ್ತಿಗೆ, ಕೋಲಾರ, ಶಿವಮೊಗ್ಗ, ಉಡುಪಿಯಲ್ಲಿ ಕೋಮುಗಲಭೆ, ದತ್ತ ಪೀಠ, ರಾಮ ಮಂದಿರ ಭಕ್ತರ ಕೇಸ್ ಓಪನ್, ಬೀದಿಗೆ ಬಂದ PFI ಗೂಂಡಾಗಳು – ಹಿಂದೂಗಳೇ ಟಾರ್ಗೆಟ್, ಮತ್ತೆ ಜಾತಿಗಳ ನಡುವೆ ಕಂದಕ ಸೃಷ್ಟಿಸಿ ಧರ್ಮ ವಿಭಜನೆ.
ಇದನ್ನೂ ಓದಿ: ‘ನಾನೊಬ್ಬ ಕರಸೇವಕ, ನನ್ನನ್ನೂ ಬಂಧಿಸಿ’ ಅಭಿಯಾನ ಆರಂಭ: ಸುನೀಲ್ ಕುಮಾರ್
ಸಿಎ ಸಿದ್ದರಾಮಯ್ಯ ಅವರ ಸೊಕ್ಕು ಇಳಿಸಲು ಜನರಿಗೆ ಇರುವ ಒಂದೇ ಒಂದು ಅವಕಾಶವೆಂದರೆ 2024 ಲೋಕಸಭಾ ಚುನಾವಣೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.