ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ (DK Shivakumar) ಬಿಗ್ ರಿಲೀಫ್ ಸಿಕ್ಕಿದೆ. ದೆಹಲಿಯ ಡಿಕೆಶಿ ನಿವಾಸದ ಮೇಲೆ ಐಟಿ ದಾಳಿ ಪ್ರಕರಣದ ನಂತರ ವಿದೇಶಕ್ಕೆ ತೆರಳದಂತೆ ಕೋರ್ಟ್ ಸೂಚಿಸಿತ್ತು. ಜತೆಗೆ ತೆರಳಬೇಕಿದ್ದರೆ ಕೋರ್ಟ್ ಅನುಮತಿ ಪಡೆಯುವಂತೆ ಹೇಳಿತ್ತು. ಇದಕ್ಕೆ ಸಂಬಂಧಿಸಿದಂತೆ ಡಿಕೆಶಿ ದುಬೈಗೆ ತೆರಳಲು ಅನುಮತಿ ಕೋರಿದ್ದರು. ದುಬೈನ ಎಕ್ಸ್‌ಪೋನಲ್ಲಿ ಭಾಗಿಯಾಗುವಂತೆ ಕಂಪನಿ ಆಹ್ವಾನಿಸಿದೆ. LPFLEX ಬೇಸ್ ಇಂಡಸ್ಟ್ರಿ ಆಹ್ವಾನದ ಮೇಲೆ ಕಂಪನಿಯ ವಿಶೇಷ ಅತಿಥಿಯಾಗಿ ತೆರಳಬೇಕು ಎಂದು ಮಾ.28ರಿಂದ ಏ.3ರವರೆಗೆ ದುಬೈಗೆ ತೆರಳಲು ಡಿ.ಕೆ.ಶಿವಕುಮಾರ್ ಅನುಮತಿ ಕೋರಿದ್ದರು. ಇದಕ್ಕೆ ಕೋರ್ಟ್ ಸಮ್ಮತಿಸಿದೆ. ಪಾಸ್‌ಪೋರ್ಟ್ ನವೀಕರಣಕ್ಕೂ ಡಿಕೆಶಿ ಅನುಮತಿ ಕೋರಿದ್ದರು. ಸೆ.22, 2021ರಂದೇ ಪಾಸ್‌ಪೋರ್ಟ್ ಅವಧಿ ಮುಕ್ತಾಯವಾಗಿದೆ. ಹೀಗಾಗಿ ಪಾಸ್‌ಪೋರ್ಟ್ ನವೀಕರಿಸಲು ಅನುಮತಿ ಬೇಕೆಂದು ಡಿಕೆಶಿ ಕೋರಿದ್ದರು. ಡಿ.ಕೆ.ಶಿವಕುಮಾರ್ ಅವರು ಸಲ್ಲಿಸಿದ್ದ ಎರಡೂ ಅರ್ಜಿಗೆ ಕೋರ್ಟ್ ಸಮ್ಮತಿ ಸೂಚಿಸಿದೆ.
ಆದರೆ ನ್ಯಾಯಾಲಯವು ಡಿಕೆ ಶಿವಕುಮಾರ್ ಅನುಮತಿ ನೀಡುವಾಗ ಷರತ್ತೊಂದನ್ನು ವಿಧಿಸಿದೆ. ಏ.22ರ ವಿಚಾರಣೆಗೆ ಹಾಜರಾಗುವಂತೆ ಷರತ್ತು ವಿಧಿಸಿ ಪಾಸ್‌ಪೋರ್ಟ್ ನವೀಕರಣ, ದುಬೈಗೆ ತೆರಳಲು ಕೋರ್ಟ್ ಅನುಮತಿ ನೀಡಿದೆ.
ಹಿಜಾಬ್ ಬಗ್ಗೆ ಗುರುಗಳು, ಪೋಷಕರು ಮಕ್ಕಳ ಮನವೊಲಿಸಬೇಕು: ಡಿಕೆಶಿ
ಹಿಜಾಬ್ ವಿಚಾರದಲ್ಲಿ ಮಕ್ಕಳು ಹಠ ಹಿಡಿದಿರುವ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ‘‘ವಿದ್ಯಾಭ್ಯಾಸ ಬಹಳ ಮುಖ್ಯ. ಹಿಜಾಬ್ ವಿಚಾರದಲ್ಲಿ ಮಕ್ಕಳನ್ನು ಕನ್ವಿನ್ಸ್ ಮಾಡಬೇಕು. ತಂದೆತಾಯಿಗಳು, ಗುರುಗಳು ಮಕ್ಕಳ ಮನವೊಲಿಸಬೇಕು. ಗುರುಗಳು ಹೇಳಿದರೆ ಮಕ್ಕಳು ಕೇಳ್ತಾರೆ. ಕಾಂಗ್ರೆಸ್ ಪಕ್ಷ ಸಂವಿಧಾನದಲ್ಲಿ ಇರುವ ವಿಚಾರಗಳಿಗೆ ಬೆಲೆ ಕೊಡುತ್ತದೆ. ಸಂವಿಧಾನದಲ್ಲಿ ಇರುವ ವಿಚಾರಗಳೇ ನಮ್ಮ ಬೈಬಲ್, ನಮ್ಮ ಕುರಾನ್, ನಮ್ಮ ಭಗವದ್ಗೀತೆ. ಈಗ ನ್ಯಾಯಾಲಯ ಒಂದು ತೀರ್ಮಾನ ಕೊಟ್ಟಿದೆ. ಕೆಲವರು ಅದನ್ನು ಒಪ್ತಾರೆ,ಕೆಲವರು ಒಪ್ಪಲ್ಲ. ‘‘ಈ ಕೋರ್ಟ್ ತೀರ್ಪಿನ ಮೇಲೆ ಸುಪ್ರೀಂ ಕೋರ್ಟ್ಗೂ ಹೋಗಲು ಅವಕಾಶವಿದೆ. ನ್ಯಾಯಾಲಯದ ತೀರ್ಪನ್ನು ಸರಿಯಲ್ಲ ಅಂತಾ ಹೇಳುವುದಿಲ್ಲ’’ ಎಂದಿದ್ದಾರೆ ಡಿಕೆ ಶಿವಕುಮಾರ್.
ಸಿದ್ದರಾಮಯ್ಯ ಸ್ವಾಮೀಜಿಗಳ ಸಂಬಂಧ ಹೇಳಿಕೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ‘‘ಆ ವಿಷಯದ ಬಗ್ಗೆ ಅವರೇ ಉತ್ತರ ಕೊಡುತ್ತಾರೆ. ಈಗಾಗಲೇ ಅವರು ಟ್ವೀಟ್ ಮಾಡಿದ್ದಾರೆ. ಅವರಿಗೆ ಎಲ್ಲ ಧರ್ಮ, ಸ್ವಾಮೀಜಿಗಳ ಮೇಲೆ ಗೌರವ ಇದೆ. ಅವರು ಸಿಎಂ ಆಗಿದ್ದಾಗ ಎಲ್ಲ ಧರ್ಮಗಳಿಗೂ ಬೇಕಾದಷ್ಟು ಸಹಾಯ ಮಾಡಿದ್ದಾರೆ. ಅವರು ಏನು ಮಾತಾಡಿದ್ದಾರೋ ಅದಕ್ಕೆ ಅವರೇ ಉತ್ತರ ಕೊಡ್ತಾರೆ’’ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಸೂಕ್ಷ್ಮ ನೀರಾವರಿ ಯೋಜನೆಯಡಿ ಕೇಂದ್ರದಿಂದ ರಾಜ್ಯಕ್ಕೆ 2ನೇ ಕಂತಿನ ಹಣ ಬಿಡುಗಡೆ
Published On - 1:11 pm, Sat, 26 March 22