ದಿ ಮೋದಿ ಸ್ಟೋರಿ ವೆಬ್ಸೈಟ್ ಉದ್ಘಾಟನೆ; ಈ ಹೊಸ ಪೋರ್ಟಲ್ನಲ್ಲಿ ಇರಲಿವೆ ಪ್ರಧಾನಿ ಮೋದಿ ಬಗೆಗಿನ ಇಂಟರೆಸ್ಟಿಂಗ್ ವಿಷಯಗಳು
ನರೇಂದ್ರ ಮೋದಿಯವರು ಪಕ್ಷದಲ್ಲಿ ಒಬ್ಬ ಪದಾಧಿಕಾರಿಯಾಗಿದ್ದಾನಿಂದಲೂ ಅವರನ್ನು ಬಲ್ಲ ಪಂಜಾಬ್ನ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ, ಮೋದಿಯವರು ಶಿಕ್ಷಣದ ಪಡೆದಿದ್ದ ಗುಜರಾತ್ನ ವಡ್ನಗರ ಶಾಲೆಯ ಪ್ರಿನ್ಸಿಪಾಲ್ ರಸ್ಬಿಹಾರಿ ಮನಿಯಾರ್ ಮತ್ತಿತರರು ಮೋದಿಯವರ ಬಗ್ಗೆ ಈ ವೆಬ್ಸೈಟ್ನಲ್ಲಿ ಮಾತನಾಡಿದ್ದಾರೆ.
ದಿ ಮೋದಿ ಸ್ಟೋರಿ (The Modi Story) ಎಂಬ ವೆಬ್ಸೈಟ್ವೊಂದು ಉದ್ಘಾಟನೆಯಾಗಿದೆ. ಈ ಬಗ್ಗೆ ಬಿಜೆಪಿ ತನ್ನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದರ ಜತೆ ಮಾಹಿತಿ ಹಂಚಿಕೊಂಡಿದೆ. ಅಷ್ಟೇ ಅಲ್ಲ, ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಅನುರಾಗ್ ಠಾಕೂರ್ ಸೇರಿ ಹಲವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ದಿ ಮೋದಿ ಸ್ಟೋರಿ ಬಗ್ಗೆ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಯವರದ್ದು ಖಂಡಿತವಾಗಿಯೂ ಒಂದು ಸ್ಫೂರ್ತಿದಾಯಕ ಜೀವನ. ಅವರ ಈ ಜೀವನದ ಹಾದಿಯಲ್ಲಿ ಅವರೊಂದಿಗೆ ಬೆರೆತವರು, ಮೋದಿಯವರನ್ನು ಹತ್ತಿರದಿಂದ ಬಲ್ಲವರು, ಕೆಲವೇ ಹೊತ್ತುಗಳ ಕಾಲ ಅವರೊಂದಿಗೆ ಕಳೆದವರು, ಸಂದರ್ಶಿಸಿದವರೆಲ್ಲ ಪ್ರಧಾನಿ ಮೋದಿಯವರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳಲು ಇರುವ ಒಂದು ವೇದಿಕೆಯಾಗಿದೆ.
ಹಾಗೇ ದಿ ಮೋದಿ ಸ್ಟೋರಿ ವೆಬ್ಸೈಟ್ನ ಟ್ವಿಟರ್ ಅಕೌಂಟ್ನಿಂದಲೂ ಈ ಬಗ್ಗೆ ಮಾಹಿತಿ ಶೇರ್ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಜೀವನದಲ್ಲಿ ಜತೆಯಾದ ಆಯ್ದ ಹಲವರು ನರೇಂದ್ರ ಮೋದಿಯವರ ಬಗ್ಗೆ ಹೇಳಿದ ಸ್ಫೂರ್ತಿದಾಯಕ ವಿಷಯಗಳನ್ನು ಒಳಗೊಂಡ ವೆಬ್ಸೈಟ್ ಇದಾಗಿದೆ. ಇದನ್ನು ಮಹಾತ್ಮ ಗಾಂಧಿಯವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಉದ್ಘಾಟಿಸಿದ್ದಾರೆ ಎಂದು ತಿಳಿಸಲಾಗಿದೆ. ಇಲ್ಲಿ ಮೋದಿಯವರನ್ನು ಬಾಲ್ಯದಿಂದ ಬಲ್ಲವರೂ ಕೆಲವು ಕುತೂಹಲಕಾರಿ ಮಾಹಿತಿಗಳನ್ನು ತಿಳಿಸಿದ್ದಾರೆ.
ನರೇಂದ್ರ ಮೋದಿಯವರು ಪಕ್ಷದಲ್ಲಿ ಒಬ್ಬ ಪದಾಧಿಕಾರಿಯಾಗಿದ್ದಾನಿಂದಲೂ ಅವರನ್ನು ಬಲ್ಲ ಪಂಜಾಬ್ನ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ, ಮೋದಿಯವರು ಶಿಕ್ಷಣದ ಪಡೆದಿದ್ದ ಗುಜರಾತ್ನ ವಡ್ನಗರ ಶಾಲೆಯ ಪ್ರಿನ್ಸಿಪಾಲ್ ರಸ್ಬಿಹಾರಿ ಮನಿಯಾರ್ ಮತ್ತಿತರರು ಮೋದಿಯವರ ಬಗ್ಗೆ ಈ ವೆಬ್ಸೈಟ್ನಲ್ಲಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಪ್ರಧಾನಿ ಮೋದಿಯವರೊಟ್ಟಿಗೆ ಕಳೆದ ಕ್ಷಣಗಳನ್ನು ಹಂಚಿಕೊಂಡವರಲ್ಲಿ ಒಲಿಂಪಿಕ್ ಗೋಲ್ಡ್ ಮೆಡಲಿಸ್ಟ್ ನೀರಜ್ ಚೋಪ್ರಾ, ಶಟ್ಲರ್ ಪುಲ್ಲೇಲಾ ಗೋಪಿಚಂದ್ ಇತರರೂ ಸೇರಿದ್ದಾರೆ. ಹಾಗೇ, ನರೇಂದ್ರ ಮೋದಿಯವರೊಂದಿಗೆ ಸಮಯ ಕಳೆದ ಯಾರು ಬೇಕಾದರೂ ಸ್ವಯಂ ಪ್ರೇರಿತವಾಗಿ ಈ ವೆಬ್ಸೈಟ್ಗೆ ತಮ್ಮ ಅನುಭವ ಹಂಚಿಕೊಳ್ಳಬಹುದಾಗಿದೆ. ಲಿಖಿತವಾಗಿ ಸ್ಟೋರಿ ಬರೆದು ಕಳಿಸಬಹುದು ಅಥವಾ ವಿಡಿಯೋ, ಆಡಿಯೋ ಮೂಲಕವೂ ಹೇಳಬಹುದಾಗಿದೆ.
MODI STORY, a volunteer driven initiative brings together inspiring moments from PM @narendramodi‘s life, as narrated by his co-travellers.
Officially launched by Smt Sumitra Gandhi Kulkarni, granddaughter of Mahatma Gandhi.
Visit: https://t.co/2HrqAGQ9HI Follow: @themodistory pic.twitter.com/v1GZrMg5Yz
— BJP (@BJP4India) March 26, 2022
ಇದನ್ನೂ ಓದಿ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಘೋಷಣೆಗೆ ಏಪ್ರಿಲ್ 14ರವರೆಗೆ ಗಡುವು ನೀಡಿದ ಜಯಮೃತ್ಯುಂಜಯ ಸ್ವಾಮೀಜಿ
Published On - 12:55 pm, Sat, 26 March 22