ಬೆಂಗಳೂರು: ಸಿಟಿ ರವಿ (CT Ravi) ಈ ರಾಜ್ಯದ ದೊಡ್ಡ ಮಾಸ್ಟರ್ ಮೈಂಡ್ ಉಗ್ರ( Terrorist) . ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಉಗ್ರ (Mangaluru Cooker Bomb Blast ) ಶಾರೀಕ್‌ಗಿಂತಲೂ ಸಿಟಿ ರವಿ ಒಂದು ಕೈ ಮೇಲೆ ಎಂದು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮಿಗಾ (Sachin Miga) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ರಾತ್ರೋರಾತ್ರಿ ದತ್ತಪೀಠದ ಗೋರಿಗಳನ್ನು ನಾಶಮಾಡಿರುವ ಉದಾಹರಣೆಗಳು ಇನ್ನೂ ನಮ್ಮ ಕಣ್ಣಮುಂದಿವೆ. ಇವರ ರಾಜಕೀಯದಿಂದ ಆರಂಭಿಸಿ ರಾಜ್ಯಾದ್ಯಂತ ಶಾಂತಿ ಕದಡಿ, ಭಯದ ವಾತಾವರಣ ನಿರ್ಮಾಣ ಮಾಡಿರುವ ಸಿಟಿ ರವಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ ಎಂದು ಕಿಡಿ ಕಾರಿದರು.
ಸಿಟಿ ರವಿ ಅವರು ಬಿಜೆಪಿ ಸಮಾವೇಶದಲ್ಲಿ ಹಿಂದೂ ಕೊಲೆ ಆಗುತ್ತೆ ಎಂದು ಬಹಿರಂಗವಾಗಿ ಹೇಳಿದ್ದರು. ಈ ಭಾಷಣದ ಮೂಲಕ ಹಿಂದೂಗಳು ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಲು ಆಗಲ್ಲ ಎಂಬ ರೀತಿಯಲ್ಲಿ ಹೇಳಿದ್ದಾರೆ. ಇದು ಅವರು ಹಿಂದೂ ಧರ್ಮಕ್ಕೆ ಮಾಡಿರುವ ಅಪಮಾನ. ಅವರ ನಿಜ ಹಿಂದುತ್ವದ ಬಣ್ಣ ಇಲ್ಲಿ ಬಯಲಾಗುತ್ತದೆ. ಸಿಟಿ ರವಿ ಎಚ್ಚರಿಕೆಯಿಂದ ಪದಗಳನ್ನು ಬಳಕೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ನಾವೂ ಹಿಂದೂಗಳು, ನಾವು ಹೇಡಿಗಳಲ್ಲ. ಕೈಗೆ ಬಳೆ ತೊಟ್ಟುಕೊಂಡಿಲ್ಲ. ಹಿಂದೂವಾಗಿ ಹುಟ್ಟಿದ ಮೇಲೆ ಸ್ವಾರ್ಥಕ್ಕೆ ಧರ್ಮ ಬಳಸುವ ನೀಚ ರಕ್ಷಣೆ ನೈಜ ಹಿಂದೂಗಳಿಗೆ ಬೇಕಾಗಿಲ್ಲ ಎಂದು ಬಿಜೆಪಿ ನಾಯಕರಿಗೆ ಸಚಿನ್ ಮಿಗಾ ಟಾಂಗ್ ಕೊಟ್ಟರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ