ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ: ಸಿಟಿ ರವಿಗೆ ಹೈಕಮಾಂಡ್​ ಬುಲಾವ್, ಕೇಸರಿ ಪಾಳಯದಲ್ಲಿ ಸಂಚಲನ

| Updated By: ರಮೇಶ್ ಬಿ. ಜವಳಗೇರಾ

Updated on: Aug 01, 2023 | 10:57 AM

ರಾಷ್ಟ್ರ ಬಿಜೆಪಿಯಲ್ಲಿ ನಡೆದಿರುವ ಮಹತ್ವದ ಬದಲಾವಣೆಯ ಬೆಳವಣಿಗೆ ಇದೀಗ ಕರ್ನಾಟಕ ಬಿಜೆಪಿಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ: ಸಿಟಿ ರವಿಗೆ ಹೈಕಮಾಂಡ್​ ಬುಲಾವ್, ಕೇಸರಿ ಪಾಳಯದಲ್ಲಿ ಸಂಚಲನ
ಸಿಟಿ ರವಿ
Follow us on

ಚಿಕ್ಕಮಗಳೂರು/ಬೆಂಗಳೂರು, (ಆಗಸ್ಟ್ 01): ಕರ್ನಾಟಕ ಬಿಜೆಪಿಗೆ(Karnataka BJP) ಯಾರು ರಾಜ್ಯಾಧ್ಯಕ್ಷರಾಗುತ್ತಾರೆ? ಬಿಜೆಪಿಯಲ್ಲಿ ಯಾರು ವಿಪಕ್ಷ ನಾಯಕರಾಗುತ್ತಾರೆ? ಎನ್ನುವುದಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈ ಬಾರಿಯ ವಿಧಾನಮಂಡಲ ಅಧಿವೇಶನವೂ ವಿಪಕ್ಷನಾಯಕರಿಲ್ಲದೇಯೇ ಮುಗಿದು ಹೋಗಿದೆ. ಮತ್ತೊಂದೆಡೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ.ರವಿ (CT Rav) ಅವರನ್ನ ಬಿಡುಗಡೆ ಮಾಡಿರುವುದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇದರ ಮಧ್ಯೆ ಬಿಜೆಪಿಯಲ್ಲಿ ದೊಡ್ಡ ಬೆಳವಣಿಗೆ ನಡೆದಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೊಕ್ ಕೊಟ್ಟಿರುವ ಹೈಕಮಾಂಡ್, ಇದೀಗ ಸಿಟಿ ರವಿ ಅವರಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ.

ಇದನ್ನೂ ಓದಿ: CT Ravi: ಕರ್ನಾಟಕ ಬಿಜೆಪಿ ಅಧ್ಯಕ್ಷ ಹುದ್ದೆ ಬಗ್ಗೆ ಸಿಟಿ ರವಿ ಅಚ್ಚರಿ ಹೇಳಿಕೆ

ಇಂದು(ಆಗಸ್ಟ್ 01) ನವದೆಹಲಿಗ ಬರುವಂತೆ ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಗೆ ಹೈಕಮಾಂಡ್ ದಿಢೀರ್ ಬುಲಾವ್ ನೀಡಿದೆ. ಈ ಹಿನ್ನೆಲೆಯಲ್ಲಿ ನಿನ್ನೆ(ಜುಲೈ 31) ರಾತ್ರಿ ಅಷ್ಟೇ ಚಿಕ್ಕಮಗಳೂರಿಗೆ ಆಗಮಿಸಿದ್ದ ಸಿ.ಟಿ ರವಿ ಇಂದು ಬೆಳಗ್ಗೆ ಬೆಂಗಳೂರಿಗೆ ತೆರಳಿದ್ದಾರೆ. ಬಳಿಕ ಅಲ್ಲಿಂದ ಮಧ್ಯಾಹ್ನ 3 ಗಂಟೆಗೆ ನವದೆಹಲಿಗೆ ತೆರಳಲಿದ್ದು, ಇಂದು ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಸಿಟಿ.ರವಿಗೆ ಕೊಕ್ ನೀಡಿದ ಬಳಿಕ ರಾಷ್ಟ್ರೀಯ ಪದಾಧಿಕಾರಿ ಪಟ್ಟಿಯಲ್ಲಿ ಕರ್ನಾಟಕದಿಂದ ಬಿ.ಎಲ್.ಸಂತೋಷ್ ಹೊರತು ಪಡಿಸಿದರೆ ಇನ್ನೊಬ್ಬರ ಹೆಸರಿಲ್ಲ, ಕರ್ನಾಟಕಕ್ಕೆ ಮಾನ್ಯತೆಯೂ ಇಲ್ಲ. ಈ ಚರ್ಚೆ ಜೊತೆಗೆ ಸಿ.ಟಿ.ರವಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡುತ್ತಾರೆ ಎನ್ನುವ ಕುತೂಹಲವೂ ಹುಟ್ಟಿದೆ. ಇದೇ ಕಾರಣಕ್ಕೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೊಕ್ ನೀಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಇತ್ತೀಚೆಗಷ್ಟೇ ಸಿ.ಟಿ.ರವಿ. ಬಿಎಸ್​ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು. ಅಲ್ಲದೇ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ಅವರು ಸಹ ಸಿಟಿ ರವಿ ಅವರಿಗೆ ಅಧ್ಯಕ್ಷ ಸ್ಥಾನ ಎಂದು ಬಹಿರಂಗವಾಗಿಯೇ ಹೇಳಿದ್ದರು. ಇದೆಲ್ಲರ ಮಧ್ಯೆ ಇದೀಗ ಹೈಕಮಾಂಡ್​ನಿಮದ ಬುಲಾವ್ ಬಂದಿದ್ದು, ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

ಒಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಗೇಟ್​ ಪಾಸ್ ಕೊಟ್ಟ ಬಳಿಕ ಇದೇ ಮೊದಲ ಬಾರಿಗೆ ಸಿಟಿ ರವಿ ಅವರು ಹೈಕಮಾಂಡ್​ ನಾಯಕರನ್ನು ಭೇಟಿ ಮಾಡುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ