AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೇ ಮೈಸೂರು ಭಾಗದಲ್ಲಿ ಹಾಲಿ ಶಾಸಕರಿಗೆ ಗಾಳ; ಜಿಟಿ ದೇವೇಗೌಡಗೆ ಡಿಕೆ ಶಿವಕುಮಾರ್ ನೀಡಿದ ಆಹ್ವಾನದ ಹಿಂದಿದೆ ರಾಜಕೀಯ ತಂತ್ರಗಾರಿಕೆ

ಬಿಜೆಪಿ-ಜೆಡಿಎಸ್​ನಲ್ಲಿ ಪ್ರಸ್ತುತ ನಡೆಯುತ್ತಿರುವ ಆಂತರಿಕ ಭಿನ್ನಾಭಿಪ್ರಾಯಗಳನ್ನೇ ಬಂಡವಾಳವನ್ನಾಗಿಸಿಕೊಂಡು ವಿಪಕ್ಷಗಳ ಹಾಲಿ ಶಾಸಕರನ್ನು, ಅದರಲ್ಲೂ ಹಳೇ ಮೈಸೂರು ಭಾಗದ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲು ಡಿಸಿಎಂ ಡಿಕೆ ಶಿವಕುಮಾರ್ ಅವರು ಕಸರತ್ತು ನಡೆಸುತ್ತಿದ್ದಾರೆ. ಸದ್ಯ ಶಿವಕುಮಾರ್​ ಅವರ ಆಹ್ವಾನದ ನಡುವೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರು ಕಾದುನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಹಾಲಿ ಶಾಸಕರಿಗೆ ಗಾಳ; ಜಿಟಿ ದೇವೇಗೌಡಗೆ ಡಿಕೆ ಶಿವಕುಮಾರ್ ನೀಡಿದ ಆಹ್ವಾನದ ಹಿಂದಿದೆ ರಾಜಕೀಯ ತಂತ್ರಗಾರಿಕೆ
ಡಿಕೆ ಶಿವಕುಮಾರ್ ಮತ್ತು ಜಿಟಿ ದೇವೇಗೌಡImage Credit source: PTI
ಪ್ರಸನ್ನ ಗಾಂವ್ಕರ್​
| Edited By: |

Updated on: Nov 18, 2023 | 1:04 PM

Share

ಬೆಂಗಳೂರು, ನ.18: ಬಿಜೆಪಿ-ಜೆಡಿಎಸ್​ನಲ್ಲಿ ಪ್ರಸ್ತುತ ನಡೆಯುತ್ತಿರುವ ಆಂತರಿಕ ಭಿನ್ನಾಭಿಪ್ರಾಯಗಳನ್ನೇ ಬಂಡವಾಳವನ್ನಾಗಿಸಿಕೊಂಡು ವಿಪಕ್ಷಗಳ ಹಾಲಿ ಶಾಸಕರನ್ನು, ಅದರಲ್ಲೂ ಹಳೇ ಮೈಸೂರು ಭಾಗದ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಕಸರತ್ತು ನಡೆಸುತ್ತಿದ್ದಾರೆ. ಅದರಂತೆ, ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ (G.T. Devegowda) ಅವರಿಗೆ ಪಕ್ಷಕ್ಕೆ ಆಹ್ವಾನ ನೀಡಿದ್ದು, ಗೌಪ್ಯ ಸಭೆಯನ್ನೂ ನಡೆಸಿದ್ದಾರೆ. ಹೀಗೆ, ಜಿಟಿ ದೇವೇಗೌಡ ಅವರಿಗೆ ಡಿಕೆ ಶಿವಕುಮಾರ್ ನೀಡಿದ ಆಹ್ವಾನದ ಹಿಂದೆ ಬಹುದೊಡ್ಡ ರಾಜಕೀಯ ತಂತ್ರಗಾರಿಕೆ ಇದೆ.

ಹೌದು, ಡಿಕೆ ಶಿವಕುಮಾರ್ ಅವರು ಆಪರೇಷನ್ ಕೋ-ಆಪರೇಷನ್​​ಗೆ ಚುರುಕು ನೀಡಿದ್ದಾರೆ. ಹಾಲಿ ಶಾಸಕರನ್ನೇ ಮತ್ತೆ ಕಾಂಗ್ರೆಸ್ ಕಡೆ ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ. ಅದರಲ್ಲೂ ಹಳೇ ಮೈಸೂರು ಭಾಗದ ಹಾಲಿ ಶಾಸಕರಿಗೇ ಗಾಳ ಹಾಕಲು ಯತ್ನಿಸುತ್ತಿದ್ದಾರೆ. ಬಿಜೆಪಿಯ ಇಬ್ಬರು ಶಾಸಕರು ಕಾಂಗ್ರೆಸ್ ಕಡೆ ಬಂದೇ ಬರುವ ವಿಶ್ವಾಸದಲ್ಲಿರುವ ಡಿಕೆ ಶಿವಕುಮಾರ್, ಜಿಟಿ ದೇವೇಗೌಡ ಭೇಟಿ ವೇಳೆಯೂ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ.

ಮಾತ್ರವಲ್ಲದೆ, ಹಳೇ ಮೈಸೂರು ಭಾಗದ ಶಾಸಕರೊಂದಿಗೆ ಕಾಂಗ್ರೆಸ್ ಕಡೆ ಬರುವಂತೆ ಜಿಟಿ ದೇವೇಗೌಡ ಅವರಿಗೂ ಡಿಕೆ ಶಿವಕುಮಾರ್ ಆಹ್ವಾನ ನೀಡಿದ್ದಾರೆ. ಈ ಆಹ್ವಾನದ ಹಿಂದೆ ಬಹುದೊಡ್ಡ ರಾಜಕೀಯ ತಂತ್ರಗಾರಿಕೆ ಇದೆ. ಒಂದೊಮ್ಮೆ ಡಿಕೆ ಶಿವಕುಮಾರ್ ಅವರ ಆಪರೇಷನ್ ಹಸ್ತ ಯಶಸ್ವಿಯಾದರೆ, ಈ ಭಾಗದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಗೆ ತೊಡಕು ಉಂಟಾಗಲಿದೆ.

ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಜಿಟಿ ದೇವೇಗೌಡ ಕಾಂಗ್ರೆಸ್ ಸೇರ್ಪಡೆ: ಸಚಿವ ಮಧು ಬಂಗಾರಪ್ಪ ಶಾಕಿಂಗ್ ಹೇಳಿಕೆ

ಹಳೆ ಮೈಸೂರು ಭಾಗದಲ್ಲಿ ಹಾಲಿ ಶಾಸಕರ ಕೋಆಪರೇಷನ್ ಸಿಕ್ಕಿದರೆ ಜೆಡಿಎಸ್​ಗೆ ಮರ್ಮಾಘಾತ ನೀಡಬಹುದು. ಒಕ್ಕಲಿಗ ಸಮುದಾಯದ ನಾಯಕತ್ವವನ್ನು ಎಚ್​ಡಿ ಕುಮಾರಸ್ವಾಮಿ ಹಿಡಿತದಿಂದ ತಪ್ಪಿಸಿ ತಮ್ಮ ಕೈಗೆ ಪಡೆದುಕೊಳ್ಳಬಹುದು ಎಂಬುದು ಡಿಕೆ ಶಿವಕುಮಾರ್ ಅವರ ಪ್ಲ್ಯಾನ್.

ಅಷ್ಟು ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್​ಗೆ ಹಳೇ ಮೈಸೂರು ಭಾಗದಲ್ಲಿ ಯಾವುದೇ ಪ್ರತಿಸ್ಪರ್ಧಿಯೇ ಇಲ್ಲದಂತೆ ಪೂರ್ಣ ವಿರಾಮ ಇಡಬಹುದು. ಈ ಎಲ್ಲ ಲೆಕ್ಕಾಚಾರಗಳನ್ನಿಟ್ಟುಕೊಂಡೇ ಡಿಕೆ ಶಿವಕುಮಾರ್ ಅವರು ಜಿಟಿ ದೇವೇಗೌಡ ಅವರ ಬೆನ್ನು ಬಿದ್ದಿದ್ದಾರೆ. ಆದರೆ, ಸದ್ಯಕ್ಕೆ ಯಾವುದೇ ನಿರ್ಧಾರವನ್ನು ಕೈಗೊಳ್ಳದ ಜಿಟಿ ದೇವೇಗೌಡ ಅವರು, ಕಾದು ನೋಡುವ ತಂತ್ರಗಾರಿಕೆಯನ್ನು ಅನುಸರಿಸಿದ್ದಾರೆ.

ಜಿಟಿ ದೇವೇಗೌಡ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಜಿ.ಟಿ.ದೇವಣೆಗೌಡರನ್ನ ಭೇಟಿ ಮಾಡಿದ ವಿಚಾರವಾಗಿ ಮಾತನಾಡಿದ ಡಿಕೆ ಶಿವಕುಮಾರ್, ಎಲ್ಲಾ ಶಾಸಕರು ನನ್ನ ಹತ್ತಿರ ಬರುತ್ತಿರುತ್ತಾರೆ. ನಾನು ಅವರ ಬಳಿ ಹೋಗುತ್ತಿರುತ್ತೇನೆ. ಸ್ನೇಹಿತರು ಇದ್ದಾರೆ ಕುಳಿತುಕೊಳ್ಳುತ್ತೇವೆ. ಊಟ ಮಾಡುತ್ತೇವೆ, ಚರ್ಚೆ ಮಾಡುತ್ತೇವೆ. ಅದು ಎಲ್ಲಾ ಪಾರ್ಟಿಯಲ್ಲೂ ಇರುತ್ತದೆ ಎಂದರು.

ಇತ್ತೀಚೆಗೆ, 40 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇವರು ಬಿಜೆಪಿ ಸ್ಪೋಕ್​ಮನ್​ ಆ? ಇಂದು ಅಶೋಕ್ ಕೂಡ ಹೇಳಿದ್ದಾರೆ ಅಂತೆ. ಅಶೋಕ್ ಅಣ್ಣನಿಗೆ ಇವತ್ತು ಫಸ್ಟ್ ದಿನ. ಅಶೋಕ್‌ ಅಣ್ಣ ವಿರೋಧ ಪಕ್ಷ ನಾಯಕ ಆಗಿರುವುದಕ್ಕೆ ನನಗೆ ಸಂತೋಷ ಇದೆ ಎಂದರು.

ರಾಜಕೀಯದಲ್ಲಿ ಗೆಲುವು ಸೋಲು ಎರಡು ಸ್ವೀಕಾರ ಮಾಡಬೇಕು. ಎಂಥವರೆಲ್ಲಾ ಸೋತಿದ್ದಾರೆ ಗೆದ್ದಿದ್ದಾರೆ. ದೇವೇಗೌಡ್ರು ಕುಮಾರಸ್ವಾಮಿ ಸೋಲಿಲ್ವಾ? ನಾನು ದೇವೇಗೌಡರ ವಿರುದ್ಧ ಸೋತಿಲ್ವಾ? ಚುನಾವಣೆ ನಿಂತವರೆಲ್ಲರೂ ಗೆಲ್ಲಲು ಆಗುತ್ತಾ? ನಾವೆಲ್ಲಾ ಅಡ್ಜೆಸ್ ಮಾಡಿಕೊಳ್ಳಬೇಕು. ಸೋಲನ್ನ ಸ್ವೀಕಾರ ಮಾಡಕೊಳ್ಳಬೇಕು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ