ದೆಹಲಿ ಅಬಕಾರಿ ನೀತಿ ಹಗರಣದ ಕಿಂಗ್​​ಪಿನ್ ಅರವಿಂದ ಕೇಜ್ರಿವಾಲ್: ಬಿಜೆಪಿ

| Updated By: ರಶ್ಮಿ ಕಲ್ಲಕಟ್ಟ

Updated on: Aug 21, 2022 | 6:36 PM

ಅಬಕಾರಿ ನೀತಿ ಹಗರಣದ ಬೇರುಗಳು ಭ್ರಷ್ಟ ಕೇಜ್ರಿವಾಲ್‌ನ ಮನೆ ಬಾಗಿಲವರೆಗೆ ಕರೆದೊಯ್ದಿದೆ. ಯಾರೂ ಕಾನೂನಿಗಿಂತ ಮೇಲಲ್ಲ ಮತ್ತು ಯಾವುದೇ ಭ್ರಷ್ಟರನ್ನು  ಬಿಡುವುದಿಲ್ಲ ಎಂದ ಬಿಜೆಪಿ

ದೆಹಲಿ ಅಬಕಾರಿ ನೀತಿ ಹಗರಣದ ಕಿಂಗ್​​ಪಿನ್ ಅರವಿಂದ ಕೇಜ್ರಿವಾಲ್: ಬಿಜೆಪಿ
ಅರವಿಂದ ಕೇಜ್ರಿವಾಲ್
Follow us on

ದೆಹಲಿ: ಭಾನುವಾರ ದೆಹಲಿಯಲ್ಲಿ (Delhi) ಸುದ್ದಿಗೋಷ್ಠಿ ನಡೆಸಿದ ಬಿಜೆಪಿ (BJP) ಪಕ್ಷದ ವಕ್ತಾರ ಗೌರವ್ ಭಾಟಿಯ, ದೆಹಲಿ ಮದ್ಯ ನೀತಿ ಹಗರಣದ ಕಿಂಗ್​​ಪಿನ್  ಅರವಿಂದ ಕೇಜ್ರಿವಾಲ್ (Arvind Kejriwal). ಅವರ ಭ್ರಷ್ಟಾಚಾರಗಳು ಒಂದೊಂದೇ ಹೊರಬರುತ್ತಿದಂತೆ ಬಂಧನವೂ ಸಮೀಪಿಸುತ್ತಿದೆ ಎಂದು ಹೇಳಿದ್ದಾರೆ. ಕೋವಿಡ್ -19 ನಿಂದ ಬಳಲುತ್ತಿರುವ ಜನರಿಗೆ ಅವರ ಸಹಾಯ ಬೇಕಾದಾಗ ಕೇಜ್ರಿವಾಲ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಭಾಟಿಯಾ ಆರೋಪಿಸಿದ್ದಾರೆ. ಅಬಕಾರಿ ನೀತಿ ಹಗರಣದ ಬೇರುಗಳು ಭ್ರಷ್ಟ ಕೇಜ್ರಿವಾಲ್‌ನ ಮನೆ ಬಾಗಿಲವರೆಗೆ ಕರೆದೊಯ್ದಿದೆ. ಯಾರೂ ಕಾನೂನಿಗಿಂತ ಮೇಲಲ್ಲ ಮತ್ತು ಯಾವುದೇ ಭ್ರಷ್ಟರನ್ನು  ಬಿಡುವುದಿಲ್ಲ. 2024 ರ ಲೋಕಸಭೆ ಚುನಾವಣೆ ಕೇಜ್ರಿವಾಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ನಡೆಯಲಿದೆ ಎಂಬ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರರು, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಗೋವಾ ಚುನಾವಣೆಗಳಲ್ಲಿ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಸಾರ್ವಜನಿಕರು ಎಎಪಿಗೆ ಉತ್ತರ ನೀಡುತ್ತಾರೆ ಎಂದಿದ್ದಾರೆ. ದೆಲಿ ಬಿಜೆಪಿ ಮುಖ್ಯಸ್ಥ ಅದೇಶ್ ಗುಪ್ತಾ ಕೂಡಾ ಭಾಟಿಯಾ ಹೇಳಿಕೆಯನ್ನು ಪುನರುಚ್ಛರಿಸಿದ್ದು. ಕೇಜ್ರಿವಾಲ್ ಅವರೇ ಈ ಹಗರಣದ ಕಿಂಗ್ ಪಿನ್ ಎಂದಿದ್ದಾರೆ. ಬಿಜೆಪಿ ನಾಯಕ ಅಮಿತ್ ಮಾಳವಿಯಾ ಕೂಡ ಟ್ವೀಟ್ ಮಾಡಿ, ಕೇಜ್ರಿವಾಲ್ ಅವರದ್ದೇ ಪಾಳಯದಲ್ಲಿ ಕಪಟ ಮಾಡುತ್ತಾರೆ ಎಂದು ಹೇಳಿದ್ದಾರೆ.

ಏನಿದು ಮದ್ಯ ನೀತಿ ಹಗರಣ?

ಪ್ರಕರಣದಲ್ಲಿ ಆರೋಪಿಯಾಗಿರುವ ಮನೀಶ್ ಸಿಸೋಡಿಯಾ ಮತ್ತು ಇತರ ಸಾರ್ವಜನಿಕ ಸೇವಕರು 2021-22 ರ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರದ ಅನುಮೋದನೆಯಿಲ್ಲದೆ “ಟೆಂಡರ್ ನಂತರದ ಪರವಾನಗಿದಾರರಿಗೆ ಅನಗತ್ಯ ಅನುಕೂಲಗಳನ್ನು ನೀಡುವ ಉದ್ದೇಶದಿಂದ” ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಪ್ರಕರಣದಲ್ಲಿ ಸಿಬಿಐನ ಎಫ್‌ಐಆರ್ ಹೇಳುತ್ತದೆ.

ಎಫ್‌ಐಆರ್‌ನ ಪ್ರಕಾರ, ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಅಕ್ರಮಗಳಲ್ಲಿ ತೊಡಗಿರುವ ಮದ್ಯದ ವ್ಯಾಪಾರಿಗಳಲ್ಲಿ ಒಬ್ಬರಾದ ಇಂಡೋಸ್ಪಿರಿಟ್ ಮಾಲೀಕ ಸಮೀರ್ ಮಹೇಂದ್ರು ಅವರು ಸಿಸೋಡಿಯಾ ಅವರ “ಆಪ್ತ ಸಹಚರರಿಗೆ” ಕನಿಷ್ಠ ಎರಡು ಕೋಟಿಗಳ ಪಾವತಿಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

 

Published On - 6:26 pm, Sun, 21 August 22