ದೆಹಲಿ: ಕಾಂಗ್ರೆಸ್ ಅಧ್ಯಕ್ಷರ ತೀವ್ರ ಸ್ಪರ್ಧೆ ನಡೆಯುತ್ತಿದ್ದು ಅಶೋಕ್ ಗೆಹ್ಲೋಟ್ ಮತ್ತು ಶಶಿ ತರೂರ್ ಅವರೊಂದಿಗೆ ಸ್ಪರ್ಧೆಗೆ ಸೇರುವ ಸುಳಿವು ನೀಡುವ ಮೂಲಕ ದಿಗ್ವಿಜಯ ಸಿಂಗ್ ಇಂದು ಕಾಂಗ್ರೆಸ್ ಅಧ್ಯಕ್ಷ (Congress president) ಸ್ಥಾನದ ಪೈಪೋಟಿಗೆ ಹೊಸ ಟ್ವಿಸ್ಟ್ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮುಂಚೂಣಿಯಲ್ಲಿರುವ ಅಶೋಕ್ ಗೆಹ್ಲೋಟ್ ಅವರು ಅಧಿಕಾರ ವಹಿಸಿಕೊಂಡರೆ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನದಿಂದ ನಿಸ್ಸಂಶಯವಾಗಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ರಾಜಸ್ಥಾನದ ಉದಯಪುರದಲ್ಲಿ ನಡೆದ ನಾಯಕತ್ವ ಸಭೆಯಲ್ಲಿ ಕಾಂಗ್ರೆಸ್ ಒಬ್ಬ ವ್ಯಕ್ತಿ, ಒಂದು ಹುದ್ದೆ ಹೊಂದಿರಬೇಕು ಎಂದು ನಿರ್ಧಾರವಾಗಿದೆ. ಆದರೆ ಗೆಹ್ಲೋಟ್ ಅವರು ಇಂದು ಒಂದಲ್ಲ ಮೂರು ಹುದ್ದೆಯನ್ನು ಹೊಂದಬಹುದು ಎಂದು ಹೇಳಿದರು, ಅವರು ತಮ್ಮ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಿಲ್ಲ ಎಂದು ಹೇಳಲಾಗಿದೆ.
ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎರಡು ಹುದ್ದೆಯನ್ನು ಹೊಂದಬಹುದೇ ಎಂಬ ಬಗ್ಗೆ, ದಿಗ್ವಿಜಯ ಸಿಂಗ್ ಉದಯಪುರ ನಿರ್ಣಯವನ್ನು ಉಲ್ಲೇಖಿಸಿದರು. ಹಾಗಾಗಿ ಗೆಹ್ಲೋಟ್ ರಾಜೀನಾಮೆ ನೀಡಬೇಕೇ ಎಂದು ಕೇಳಿದಾಗ ಸಿಂಗ್ ಹೌದು ಎಂದು ಹೇಳಿದರು. ಎಲ್ಲರಿಗೂ ಸ್ಪರ್ಧಿಸುವ ಹಕ್ಕಿದೆ ಸೆ.30ರ ಸಂಜೆ (ನಾಮನಿರ್ದೇಶನಗಳ ಕೊನೆಯ ದಿನ) ಉತ್ತರ ನಿಮಗೆ ತಿಳಿಯುತ್ತದೆ ಎಂದು ಶ್ರೀ ಸಿಂಗ್ ಹೇಳಿದರು.ಈ ಸ್ಪರ್ಧೆಯಲ್ಲಿ ಗಾಂಧಿ ಕುಟುಂಬ ಇಲ್ಲ ಎಂಬುದಕ್ಕೆ ಯಾವುದೇ ಬೇಸರ ಇಲ್ಲ ಎಂದು ಅವರು ಎನ್‌ಡಿಟಿವಿಗೆ ತಿಳಿಸಿದರು.
ಯಾರು ಸ್ಪರ್ಧಿಸಲು ಬಯಸುತ್ತಾರೋ ಅವರು ಸ್ಪರ್ಧಿಸುವ ಹಕ್ಕು ಹೊಂದಿದ್ದಾರೆ. ಇಲ್ಲಿ ಒಬ್ಬರು ಸ್ಪರ್ಧಿಸುವುದಿಲ್ಲ ಎಂದಾಗ ಅವರನ್ನು ಬಲವಂತವಾಗಿ ಸ್ಪರ್ಧಿಸಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ ರಾಜೀನಾಮೆ ನೀಡಿದ ಸ್ಥಾನಕ್ಕೆ ಮತ್ತೆ ಬರಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ. ರಾಹುಲ್ ಗಾಂಧಿ ಅವರನ್ನು ಕರೆತರಲು ಸಾಧ್ಯವಾಗದಿದ್ದರೆ ಮಾತ್ರ ಸ್ಪರ್ಧಿಸುವುದಾಗಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಗಾಂಧಿಯೇತರರನ್ನು ಉನ್ನತ ಸ್ಥಾನದಲ್ಲಿಟ್ಟುಕೊಂಡು ಕೆಲಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು. ನರಸಿಂಹರಾವ್ ಇದ್ದಾಗ ನಾವು ಕಾರ್ಯ ನಿರ್ವಹಿಸಲಿಲ್ಲವೇ?, ಈ ಹಿಂದೆ ಸೀತಾರಾಮ್ ಕೇಸರಿ ಇದ್ದಾಗ ಕೆಲಸ ಮಾಡಿರಲಿಲ್ಲವೇ ಎಂದು ಅವರು ಹೇಳಿದರು. ರಾಹುಲ್ ಗಾಂಧಿ ಕಾಂಗ್ರೆಸ್‌ನ ಮುಖವಾಗಿ ಉಳಿದಿದ್ದಾರೆ ಎಂದು ಸೂಚಿಸಿದಾಗ, ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸುತ್ತಿರುವ 119 ಯಾತ್ರಿಗಳಲ್ಲಿ ಒಬ್ಬರು ಎಂದು ವ್ಯಂಗ್ಯವಾಡಿದರು.
Published On - 5:15 pm, Wed, 21 September 22