ಯಾರೂ ಹೆಚ್ಚಾದ ಕರೆಂಟ್ ಬಿಲ್​ನ್ನು ಪಾವತಿ ಮಾಡಬೇಡಿ: ಸಾರ್ವಜನಿಕರಲ್ಲಿ ವಿನಂತಿಸಿದ ಶಾಸಕ ಯತ್ನಾಳ್​

|

Updated on: Jun 10, 2023 | 6:23 PM

ಯಾವ ಷರತ್ತಿಲ್ಲದೆ ಎಲ್ಲರಿಗೂ ಉಚಿತ, ಖಚಿತ, ನಿಶ್ಚಿತ ಎಂದಿದ್ದರು. ಆದರೆ ಈಗ ಷರತ್ತು ವಿಧಿಸಿ ಕರ್ನಾಟಕದ ಜನತೆಗೆ ಮೋಸ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ಯಾರೂ ಹೆಚ್ಚಾದ ಕರೆಂಟ್ ಬಿಲ್​ನ್ನು ಪಾವತಿ ಮಾಡಬೇಡಿ: ಸಾರ್ವಜನಿಕರಲ್ಲಿ ವಿನಂತಿಸಿದ ಶಾಸಕ ಯತ್ನಾಳ್​
ಬಸನಗೌಡ ಪಾಟೀಲ್ ಯತ್ನಾಳ್
Follow us on

ವಿಜಯಪುರ: ಯಾವ ಷರತ್ತಿಲ್ಲದೆ ಎಲ್ಲರಿಗೂ ಉಚಿತ, ಖಚಿತ, ನಿಶ್ಚಿತ ಎಂದಿದ್ದರು. ಆದರೆ ಈಗ ಷರತ್ತು ವಿಧಿಸಿ ಕರ್ನಾಟಕದ ಜನತೆಗೆ ಮೋಸ ಮಾಡಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಷರತ್ತು ವಿಧಿಸಿರುವ ವಿಚಾರವಾಗಿ BJP ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ (Basangouda Patil Yatnal)
ಕಿಡಿ ಕಾರಿದ್ದಾರೆ. 200 ಯೂನಿಟ್ ಒಳಗೆ ಬಳಸುವವರು ಬಿಲ್ ವಾಪಸ್ ಕಳಿಸಿ. 200 ಯೂನಿಟ್ ಒಳಗೆ ಬಳಸುವವರು ಕರೆಂಟ್ ಬಿಲ್ ನೀಡುವವರನ್ನು ವಿನಮ್ರತೆಯಿಂದ ವಾಪಸ್​ ಕಳುಹಿಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಮಹಿಳೆಯರು ಎಲ್ಲಾ ಬಸ್‌ಗಳಲ್ಲೂ ಟಿಕೆಟ್ ತೆಗೆದುಕೊಳ್ಳಬೇಡಿ. ಕೊಟ್ಟ ಮಾತನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಬೇಕು. ಮಹದೇವಪ್ಪನಿಗೂ ಕೊಡಬೇಕು, ಕಾಕಾ ಪಾಟೀಲನಿಗೂ ಕೊಡಬೇಕು. ಎಲ್ಲರಿಗೂ ಕೊಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಶಾಸಕ ಯತ್ನಾಳ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: CM Siddaramaiah: ಮೈಸೂರು ಭಾಗದಲ್ಲಿ ಡಾ ಯತೀಂದ್ರ ತನಗಿಂತ ಹೆಚ್ಚು ಜನಪ್ರಿಯ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಗೀಕರಿಸುತ್ತಾರೆ!

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಟ್ವೀಟ್​ನಲ್ಲಿ ಏನಿದೆ?

ಸಾರ್ವಜನಿಕರಲ್ಲಿ ವಿನಂತಿ

ಯಾವುದೇ ಷರತ್ತಿನಬಗ್ಗೆ ಹೇಳದೆ ಎಲ್ಲಾ ಉಚಿತ, ಖಚಿತ ಹಾಗು ನಿಶ್ಚಿತ ಎಂದು ಘೋಷಣೆ ಮಾಡಿದ್ದ ಕಾಂಗ್ರೆಸ್ ಸರ್ಕಾರ ಈಗ ಷರತ್ತುಗಳನ್ನು ವಿಧಿಸಿ ಕರ್ನಾಟಕದ ಮಹಾಜನತೆಗೆ ಮೋಸ ಮಾಡಿದೆ.

  • ಯಾರು ಹೆಚ್ಚಾದ ಕರೆಂಟ್ ಬಿಲ್ ಪಾವತಿ ಮಾಡಬೇಡಿ, 200 ಯೂನಿಟ್ ಒಳಗೆ ಬಳಸುವವರು ಕರೆಂಟ್ ಬಿಲ್ ನೀಡುವವರನ್ನು ವಾಪಸ್ ವಿನಮ್ರತೆಯಿಂದ ಕಳುಹಿಸಿ.
  • ಮಹಿಳೆಯರು ಎಲ್ಲ ಬಸ್ಸುಗಳಲ್ಲೂ ಟಿಕೆಟ್ ತೆಗೆದುಕೊಳ್ಳಬೇಡಿ, ಕಂಡೆಕ್ಟರ್ ಹಾಗು ಸಿಬ್ಬಂದಿಗೆ ಸಿದ್ದರಾಮಯ್ಯರನ್ನು ಕೇಳಿ ಎಂದು ಹೇಳಿ.
  • ನೀರಿನ ಬಿಲ್ ಹೆಚ್ಚಾದರೆ ವಾಪಸ್ ಕಳುಹಿಸಿ.
  • 2000 ರೂ ಪಡೆಯಲು ಎಲ್ಲ ಮಹಿಳೆಯರು ನೋಂದಾಯಿಸಿ.

ಸರ್ಕಾರದ ವಿರುದ್ಧ ಜನಾಂದೋಲನ ಆಗಬೇಕಿದೆ, ಕೊಟ್ಟ ಮಾತನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಬೇಕು. ಮಹದೇವಪ್ಪನಿಗೂ ಕೊಡಬೇಕು, ಕಾಕಪಾಟಿಲನಿಗೂ ಕೊಡಬೇಕು, ಎಲ್ಲರಿಗೂ ಕೊಡಬೇಕು ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.