ಬೆಂಗಳೂರು, ನವೆಂಬರ್ 04: ಸಚಿವರು, ಕಾಂಗ್ರೆಸ್ ಶಾಸಕರು ಬಹಿರಂಗ ಹೇಳಿಕೆ ನೀಡಿ ಭವಿಷ್ಯ ಹಾಳು ಮಾಡಿಕೊಳ್ಳೋದು ಬೇಡ. ಹಾಗೆಯೇ ಪಕ್ಷದ ಭವಿಷ್ಯ ಹಾಳು ಮಾಡುವುದು ಬೇಡ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಬ್ರೇಕ್ಫಾಸ್ಟ್ ಮೀಟಿಂಗ್ ಬಳಿಕ ಸಿಎಂ ಕಾವೇರಿ ನಿವಾಸದ ಬಳಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಬಹಿರಂಗ ಹೇಳಿಕೆ ನೀಡದಂತೆ ಎಲ್ಲರಿಗೂ ವಾರ್ನ್ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಉಸ್ತುವಾರಿ ಸಚಿವರಿಗೆ ಅವರವರ ಜವಾಬ್ದಾರಿಯನ್ನು ನೀಡಿದ್ದೇವೆ. ಲೋಕಸಭೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ನೀಡಲು ಸೂಚಿಸಿದ್ದೇವೆ. ಮೂರ್ನಾಲ್ಕು ದಿನದಲ್ಲಿ ವರದಿ ನೀಡಲು ವೀಕ್ಷಕರಿಗೆ ಸೂಚಿಸಿದ್ದೇವೆ. ಈ ಹಿಂದೆ ನಾವೆಲ್ಲ ಬರ ಪ್ರವಾಸ ಮಾಡಿ ಸರ್ಕಾರಕ್ಕೆ ವರದಿ ನೀಡಿದ್ದೆವು. ಬಿಜೆಪಿ ಬರ ಅಧ್ಯಯನ ಬದಲು ಕೇಂದ್ರದಿಂದ ಹಣ ಕೊಡಿಸಲಿ ಎಂದಿದ್ದಾರೆ.
ಇದನ್ನೂ ಓದಿ: ಸಿಎಂ ನಿವಾಸ ಕಾವೇರಿಯಲ್ಲಿ ಮೀಟಿಂಗ್ ಹಾಲ್ ಉದ್ಘಾಟನೆ, ಟೇಪ್ ಕತ್ತರಿಸಲು ಡಿಕೆ ಶಿವಕುಮಾರ್ಗೆ ಕತ್ತರಿ ಕೊಟ್ಟ ಸಿದ್ದರಾಮಯ್ಯ
ಐಟಿ, ಇಡಿ, ಸಿಬಿಐ ಕೇಸ್ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ನಾನು ಭಯಪಡುವುದಿಲ್ಲ. ನಾನು, ನನ್ನ ಹೆಂಡತಿ ಅಕೌಂಟ್ ಜನರ ಮುಂದಿದೆ, ಟ್ಯಾಕ್ಸ್ ಕಟ್ಟುತ್ತೇವೆ ಎಂದು ಹೇಳಿದ್ದಾರೆ. ಗೃಹ ಲಕ್ಷ್ಮಿ ಖಾತೆಗೆ 10% ಹಣ ಸರಿಯಾಗಿ ಪಾವತಿಯಾಗಿಲ್ಲ. ಅದನ್ನು ಸರಿಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಕಾಂತರಾಜ್ ಆಯೋಗದ ವರದಿ ಮರುಪರಿಶೀಲನೆಗೆ ಆಗ್ರಹ ವಿಚಾರವಾಗಿ ಮಾತನಾಡಿದ ಅವರು, ಒಕ್ಕಲಿಗ ಸಂಘದ ಸಭೆ, ಚರ್ಚೆ ಬಗ್ಗೆ ಶ್ರೀಗಳಿಗೆ ಡೌಟ್ ಇದೆ. ಇದನ್ನು ಬಗೆಹರಿಸುವ ಕೆಲಸ ಮಾಡಲಾಗುವುದು ಎಂದರು.
ಇದನ್ನೂ ಓದಿ: ವಿಧಾನ ಪರಿಷತ್: ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಿಲ್ಲ ಎಂದ ಕೆಎಸ್ ಈಶ್ವರಪ್ಪ
ಸಚಿವರಿಗೆ ಟಾಸ್ಕ್ ಕೊಟ್ಟ ವಿಚಾರವಾಗಿ ಮಾತನಾಡಿದ ಅವರು, 15 ಜನರನ್ನು ಆಮಂತ್ರಣ ಮಾಡಿದ್ದು, ಅವರವರ ಜಿಲ್ಲೆಯೇ ಅವರವರ ಜವಾಬ್ದಾರಿ. ಸಲೆಕ್ಷನ್ ವಿಚಾರದಲ್ಲಿ ಅದೇ ಜಿಲ್ಲೆಯನ್ನು ಉಸ್ತುವಾರಿ ಸಚಿವರಿಗೆ ಕೊಟ್ಟಿಲ್ಲ, ಬೇರೆ ಜಿಲ್ಲೆಗೆ ಕೊಟ್ಟಿದ್ದೇವೆ. ಜಾರ್ಜ್ ಎಲೆಕ್ಷನ್ ಕಮಿಟಿ ಮೆಂಬರ್ ಅವರಿಗೆ ರಿಲೀಫ್ ಕೊಟ್ಟಿದ್ದೇವೆ. ಮೂರ್ನಾಲ್ಕು ದಿನಗಳಲ್ಲಿ ವರದಿ ಕೊಡಲು ಹೇಳಿದ್ದೇನೆ. ಪ್ರತಿ ಕ್ಷೇತ್ರದಿಂದ ಮೂರು ಜನರ ಸಂಭಾವ್ಯ ಪಟ್ಟಿ ಕೊಡಲು ಹೇಳಿದ್ದಾರೆ. ನಾವು ಸಭೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಬಿಜೆಪಿ ಬರದ ಟೂರ್ ಹಮ್ಮಿಕೊಂಡ ವಿಚಾರವಾಗಿ ಮಾತನಾಡಿದ ಅವರು, ನಾವೆಲ್ಲ ಅಧ್ಯಯನ ಮಾಡಿ ಈಗಾಗಲೇ ರಿಪೋರ್ಟ್ ಕೊಟ್ಡಿದ್ದೇವೆ. ಬಿಜೆಪಿ ಅವರು ಮಾಡಲಿ, ಯಾರು ಬೇಡ ಅಂತ ಹೇಳಿದ್ದು? ಐದು ವರ್ಷ ನಮಗೆ ರಾಜ್ಯದ ಜನರು ಆಡಳಿತ ಮಾಡಲು ಅವಕಾಶ ಕೊಟ್ಟಿದ್ದಾರೆ. ಜನಸೇವೆ ನಾವು ಮಾಡಬೇಕು. ಗ್ಯಾರಂಟಿ ಸರಿಯಾಗಿ ನಡೆಯುತ್ತಿದೆಯಾ ಅಂತ ವಿಮರ್ಶೆ ಮಾಡಬೇಕು. ಲೋಕಸಭಾ ಚುನಾವಣೆ ನಮಗೆ ಇಂಪಾರ್ಟೆಂಟ್ ಆಗಿದೆ. ಸ್ವಲ್ಪ ಟೂರ್ ಮಾಡಲು ಸೂಚನೆ ಕೊಟ್ಟಿದ್ದೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.