ಶ್ರೀರಾಮುಲುಗೆ ಮತ್ತೊಂದು ನಿರಾಸೆ, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಗುಟ್ಟು ಬಿಟ್ಟುಕೊಟ್ಟ ಮಾಜಿ ಸಚಿವ

ಕರ್ನಾಟಕ ಬಿಜೆಪಿ ಅಧ್ಯಕ್ಷ ಹುದ್ದೆ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಸಿಟಿ ರವಿ, ವಿ ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್, ಬಿವೈ ವಿಜಯೇಂದ್ರ ಸೇರಿದಂತೆ ಇನ್ನೂ ಕೆಲ ನಾಯಕರು ಅಧ್ಯಕ್ಷ ಹುದ್ದೆ ರೇಸ್​​ನಲ್ಲಿದ್ದಾರೆ ಎನ್ನುವುದು ಜಗಜ್ಜಾಹೀರಾದೆ. ಆದ್ರೆ, ಶ್ರೀರಾಮುಲು ಸಹ ಅಧ್ಯಕ್ಷ ಪಟ್ಟಕ್ಕಾಗಿ ಕಸರತ್ತು ನಡೆಸಿರುವುದು ಇದೀಗ ಬೆಳಕಿಗೆ ಬಂದಿದೆ.

ಶ್ರೀರಾಮುಲುಗೆ ಮತ್ತೊಂದು ನಿರಾಸೆ, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಗುಟ್ಟು ಬಿಟ್ಟುಕೊಟ್ಟ ಮಾಜಿ ಸಚಿವ
ಶ್ರೀರಾಮುಲು
Follow us
| Updated By: ರಮೇಶ್ ಬಿ. ಜವಳಗೇರಾ

Updated on: Nov 04, 2023 | 1:07 PM

ಗದಗ, (ನವೆಂಬರ್ 04): ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ(Karnataka BJP President) ಭಾರೀ ಪೈಪೋಟಿ ನಡೆದಿದೆ. ಹೀಗಾಗಿ ಯಾರಿಗೆ ನೀಡಬೇಕೆಂದು ಹೈಕಮಾಂಡ್ ಚಿಂತನೆ ನಡೆಸಿದೆ. ಇದರ ಮಧ್ಯೆ ಈ ಹುದ್ದೆಗೆ ಮಾಜಿ ಸಚಿವ ಶ್ರೀರಾಮುಲು (Sriramulu) ಸಹ ಆಕಾಂಕ್ಷಿಯಾಗಿದ್ದರು. ಅಲ್ಲದೇ ರಾಜ್ಯಾಧ್ಯಕ್ಷರಾಗಲು ತೀವ್ರ ಪೈಪೋಟಿ ನಡೆಸಿದ್ದರು. ಆದ್ರೆ, ಅದು ಸಿಗುವುದು ಸಾಧ್ಯವಿಲ್ಲ ಎನ್ನುವುದು ಅರಿತುಕೊಂಡು ರೇಸ್​ನಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಸ್ವತಃ ಶ್ರೀರಾಮುಲು ಅವರೇ ಮಾಧ್ಯಮಗ ಹೇಳಿಕೊಂಡು ಹತಾಶೆ ವ್ಯಕ್ತಪಡಿಸಿದ್ದಾರೆ.

ಗದಗನಲ್ಲಿಂದು ಸುದ್ದಿಗಾರದೊಂದಿಗೆ ಮಾತನಾಡಿದ ಶ್ರೀರಾಮುಲು, ನಾನೂ ಸಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿವಾಗಿದ್ದೆ. ಪ್ರಯತ್ನ ಮಾಡಿದ್ದೇ. ಆದರೆ ನನ್ನ ಪ್ರಯತ್ನ ಫಲಿಸಿಲ್ಲ. ಅದು ಆಗಲ್ಲ ಅಂತಾ ಗೊತ್ತಾಯಿತು. ಹೀಗಾಗಿ ಪ್ರಯತ್ನ ಕೈಬಿಟ್ಟೆ ಎಂದು ಪರೋಕ್ಷವಾಗಿ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

ಅಸೆಂಬ್ಲಿ ಎಲೆಕ್ಷನ್ ನಲ್ಲಿ ಸೋತ್ತಿದ್ದೇನೆ. ಹೀಗಾಗಿ ಪಾರ್ಟಿಯ ಕೆಲಸ ಮಾಡಿಕೊಂಡು ಹೋದ್ರೆ ಆಯಿತು ಅಂತ ಮಾಡಿದ್ದೆ. ಖಾಲಿ ಇದೇನಲ್ಲ ಅದಕ್ಕೆ ಪಕ್ಷದ ಕಾರ್ಯಕರ್ತರನಾಗಿ ದುಡಿಯುತ್ತೇನೆ. ಈಗ ಎಲೆಕ್ಷನ್ ಸಮಯ ಇದೆ. ಹೀಗಾಗಿ ಪಕ್ಷದ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಯತ್ನದ ಗುಟ್ಟು ಬಿಟ್ಟ ಕೊಟ್ಟರು.

ಶ್ರಿರಾಮುಲು ಅವರು ಅವರು ಸಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪಯತ್ನ ಪಟ್ಟಿದ್ದರು ಎಂದು ಅವರೇ ಹೇಳಿಕೊಂಡಿದ್ದಾರೆ. ಆದ್ರೆ, ಅದು ಸಿಗಲ್ಲ ಎಂದು ಗೊತ್ತಾದ ಬಳಿಕ ಅಧ್ಯಕ್ಷ ಆಸೆಯನ್ನು ಕೈಬಿಟ್ಟಿದ್ದಾರೆ. ಈ ಹಿಂದೆ ಸಹ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಸ್ವತಃ ಹೈಕಮಾಂಡ್ ಹೇಳಿತ್ತು. ಹೀಗಾಗಿ ಶ್ರಿರಾಮುಲು ಸಹ ಡಿಸಿಎಂ ಆಗುತ್ತೇನೆ ಎಂಬ ಆಸೆ ಇಟ್ಟುಕೊಂಡಿದ್ದರು. ಆದ್ರೆ, ಶ್ರೀರಾಮುಲು ಕನಸು ನನಸಾಗಲಿಲ್ಲ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಲ್ಲೂ ಸಹ ಅದೇ ಆಗಿದೆ.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ