ರಾಜಧಾನಿಯಲ್ಲಿ ಕುಳಿತು ಹಣ ಮಾಡುವವರಿಗೆ ಮತ ಹಾಕಬೇಡಿ: ಪರಿಷತ್ ಸಭಾಪತಿ ಹೊರಟ್ಟಿ ಕರೆ

|

Updated on: Mar 30, 2023 | 11:42 AM

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ನಿನ್ನೆಯಷ್ಟೇ ದಿನಾಂಕ ನಿಗದಿಯಾಗಿದೆ. ಈ ಹಿನ್ನಲೆ ‘ಯಾವ ವ್ಯಕ್ತಿ ಕೆಲಸ ಮಾಡುತ್ತಾನೆ, ಜನರ ಸಂಪರ್ಕದಲ್ಲಿರುತ್ತಾನೆ, ಜನರ ತೊಂದರೆಗೆ ಸ್ಪಂದಿಸುವ ವ್ಯಕ್ತಿಗೆ ಮತ ಹಾಕಬೇಕೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ರಾಜಧಾನಿಯಲ್ಲಿ ಕುಳಿತು ಹಣ ಮಾಡುವವರಿಗೆ ಮತ ಹಾಕಬೇಡಿ: ಪರಿಷತ್ ಸಭಾಪತಿ ಹೊರಟ್ಟಿ ಕರೆ
ವಿಧಾನ ಪರಿಷತ್​ ಸಭಾಪತಿ ಬಸವರಾಜ್​ ಹೊರಟ್ಟಿ
Follow us on

ವಿಜಯಪುರ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Election) ನಿನ್ನೆಯಷ್ಟೇ ದಿನಾಂಕ ನಿಗದಿಯಾಗಿದೆ. ಈ ಹಿನ್ನಲೆ ‘ಯಾವ ವ್ಯಕ್ತಿ ಕೆಲಸ ಮಾಡುತ್ತಾನೆ, ಜನರ ಸಂಪರ್ಕದಲ್ಲಿರುತ್ತಾನೆ, ಜನರ ತೊಂದರೆಗೆ ಸ್ಪಂದಿಸುತ್ತಾನೆ ಅಂತಹ ವ್ಯಕ್ತಿಗೆ ಮತ ಹಾಕಿ, ರಾಜಧಾನಿಯಲ್ಲಿ ಕುಳಿತು ಹಣ ಮಾಡುವವರಿಗೆ ಮತ ಹಾಕಬೇಡಿ, ನಾಡಿನ ಕಾಳಜಿ ಇರುವ ವ್ಯಕ್ತಿಗೆ ಮತ ಹಾಕಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತದಾರರಿಗೆ ಮನವಿ ಮಾಡಿದ್ದಾರೆ.

ಇಂದು ವಿಜಯಪುರ ನಗರದ ಜ್ಞಾನ ಯೋಗಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮತದಾರರನ್ನು ಸೆಳೆಯಲು ವಿವಿಧ ಕಾಣಿಕೆ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು ‘ಕಾಣಿಕೆ ವಿಚಾರದಲ್ಲಿ ಜನರು ಕೆಟ್ಟಾಗಲೇ ರಾಜಕಾರಣಿಗಳು ಕೆಟ್ಟಿದ್ದಾರೆ. ರಾಜಕಾರಿಣಿಗಳು ನೀಡುವ ಕಾಣಿಕೆಯ ಮೇಲೆ ಜನರು ಜೀವನ ಮಾಡುತ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ನಾವೇನು ಶಂಖ ಹೊಡೆದರು ಬದಲಾವಣೆ ಆಗಲ್ಲ. ಮತದಾರ ಜನರು ಮನಸ್ಸು ಮಾಡಿದರೆ 30 ರಿಂದ 40% ಪ್ರಮಾಣದಲ್ಲಿ ಬದಲಾವಣೆ ಆಗಬಹುದು. ಅದಕ್ಕಾಗಿ ಗಿಫ್ಟ್ ಹಂಚಿಕೆ ಘಟನೆಗಳು ಆಗಬಾರದು. ಹಣ ಹಾಗೂ ಇತರೆ ಕಾಣಿಕೆ ನೀಡಿ ಆಯ್ಕೆಯಾದವ ಏನು ಆಗುತ್ತಾನೆ? ಹಣಕೊಟ್ಟು ಆಯ್ಕೆಯಾದ ಬಳಿಕ ನೀವು ಪುಗಸಟ್ಟೆ ಮತ ಹಾಕಿಲ್ಲ ಎಂದು ಮತದಾರರಿಗೆ ಹೇಳುತ್ತಾನೆ ಎಂದಿದ್ದಾರೆ. ಮತದಾರರು ಒಳ್ಳೆಯ ವ್ಯಕ್ತಿಗೆ ಮತ ಹಾಕಿದರೆ ರಾಜ್ಯ ಸುಧಾರಣೆಯಾಗುತ್ತದೆ. ಓರ್ವ ಸಭಾಪತಿಯಾಗಿ ನಾನು ಈ ಮಾತು ಹೇಳುತ್ತೇನೆ ಎಂದರು.

ಇದನ್ನೂ ಓದಿ:ರಾಜಕೀಯ ಹಾಗೂ ಧರ್ಮ ಬೇರ್ಪಟ್ಟಾಗ ದ್ವೇಷಪೂರಿತ ಭಾಷಣಗಳು ನಿಲ್ಲುತ್ತವೆ: ಸುಪ್ರೀಂಕೋರ್ಟ್​

ಚುನಾವಣೆ ಘೋಷಣೆಯಾದ ಬಳಿಕ ನೀತಿ ಸಹಿತೆ ಹೆಸರಲ್ಲಿ ಸರ್ಕಾರಿ ಸರ್ಕ್ಯೂಟ್ ಹೌಸ್​ಗಳನ್ನ ಬಂದ್ ಹಾಗೂ ಪೊಲೀಸ್ ಭದ್ರೆತೆ ವಾಪಸ್ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು ಸರ್ಕಾರದ ಐಬಿ ಹಾಗೂ ಸರ್ಕ್ಯೂಟ್ ಹೌಸ್​ಗಳನ್ನ ನೀತಿ ಸಂಹಿತೆ ಸಮಯದಲ್ಲಿ ಬಂದ್ ಮಾಡಬಾರದು. ಪೊಲೀಸ್ ಭದ್ರತೆ ನೀಡಬೇಕೆಂಬ ಕಾಯ್ದೆ ಇದೆ
ಇವು ದುರುಪಯೋಗ ಆಗಬಾರದು ಹಾಗೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಉಪಯೋಗ ಆಗಬಾರದು ಎಂಬ ಉದ್ದೇಶವಿದೆ. ಆದರೆ ಪೂರ್ಣ ಬಂದ್ ಮಾಡಬೇಕೆಂದು ಕಾನೂನು‌ ಇಲ್ಲ. ನೀತಿ ಸಂಹಿತೆಯ ಸಮಯದಲ್ಲೂ ಸರ್ಕ್ಯೂಟ್ ಹೌಸ್​ಗಳನ್ನ ಪಕ್ಷಾತೀತವಾಗಿ ಕೆಲಸ ಮಾಡುವ ರಾಜ್ಯಪಾಲರು ಸಭಾಪತಿಗಳು ಉಪಯೋಗ ಮಾಡಬಹುದು. ಆದರೆ ಎಲ್ಲೆಡೆ ಸರ್ಕ್ಯೂಟ್ ಹೌಸ್​ಗಳನ್ನ ಸಂಪೂರ್ಣ ಬಂದ್ ಮಾಡಿದ್ದು ಸರಿಯಲ್ಲ ಎಂದು ಹೇಳಿದರು.

ಇನ್ನು ಪೊಲೀಸ್ ಭದ್ರೆತೆ ನಿಲ್ಲಿಸಿದ್ದು ಈ ವಿಚಾರ ಕುರಿತು ನಾನು ಕೇಂದ್ರ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಹೇಳಿದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಯಾವ ಯಾವ ನಿಯಮಗಳಿವೆ ಏನೇನು ದುರುಪಯೋಗಗಳು ಆಗುತ್ತಿವೆ ಎಂಬುದರ ಕುರಿತು ಪತ್ರ ಬರೆಯುವೆ. ಚೀಫ್ ಸೆಕ್ರೆಟರಿ ಹಾಗೂ ಹೋಂ ಸೆಕ್ರೆಟರಿ ಅವರ ಗಮನಕ್ಕೂ ಈ ವಿಚಾರ ತರಲಾಗಿದೆ ಎಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:41 am, Thu, 30 March 23