ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಂತೆಯೇ ಜೆಡಿಎಸ್ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ ಗುಬ್ಬಿ ಶ್ರೀನಿವಾಸ್
ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಗುಬ್ಬಿ ಶ್ರೀನಿವಾಸ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಜೆಡಿಎಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಬೆಂಗಳೂರು: ಮೊನ್ನೇ ಅಷ್ಟೇ ಜೆಡಿಎಸ್(JDS) ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಗುಬ್ಬಿ ಶ್ರೀನಿವಾಸ್( Gubbi SR Srinivas) ನಿರೀಕ್ಷೆಯಂತೆ ಇಂದು(ಮಾರ್ಚ್ 30) ಅಧಿಕೃತವಾಗಿ ಕಾಂಗ್ರೆಸ್(Congress) ಸೇರ್ಪಡೆಯಾದರು. ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಗುಬ್ಬಿ ಶ್ರೀನಿವಾಸ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಶ್ರೀನಿವಾಸ್, ಬಿಜೆಪಿಗೆ ಹೋಗಲು ಮನಸ್ಸಿರಲಿಲ್ಲ, ಹಾಗಾಗಿ ಕಾಂಗ್ರೆಸ್ ಸೇರಿದ್ದೇನೆ. ನನ್ನ ಸ್ವಂತ ಮನೆಗೆ ವಾಪಸ್ಸಾಗಿದ್ದಕ್ಕೆ ಸಂತಸವಾಗಿದೆ. ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕೆಲಸ ಮಾಡುತ್ತೇವೆ. ಜಿಲ್ಲೆಯ ಹಿರಿಯ ಮುಖಂಡರ ನೇತೃತ್ವದಲ್ಲಿ ಕೆಲಸ ಮಾಡೋಣ ಎಂದರು.
ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ಎಸ್.ಆರ್.ಶ್ರೀನಿವಾಸ್ ರಾಜೀನಾಮೆ
ನಾನು ಮೂಲತಃ ಕಾಂಗ್ರೆಸ್ ಸದಸ್ಯನೇ. ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ. ನಮ್ಮ ತಂದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಸಿದ್ದರಾಮಯ್ಯ ಜೆಡಿಎಸ್ ಗೆ ಕರೆದಿದ್ದರು. ಹಾಗಾಗಿ 2002ರಲ್ಲಿ ನಾನು ಜೆಡಿಎಸ್ಗೆ ಸೇರಿದ್ದೆ. 2004ರಲ್ಲಿ ನನಗೆ ಟಿಕೆಟ್ ಕೊಡಲಿಲ್ಲ. ಆಗ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದೆ. ನಾನು ಜೆಡಿಎಸ್ ಬಿಡಬೇಕೆಂದು ಬಿಡಲಿಲ್ಲ. ಇದ್ದ ಪಕ್ಷಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುವವನು. 1999ರಲ್ಲಿ ವೀರಣ್ಣ ಗೌಡರನ್ನ ಗೆಲ್ಲಿಸಿ ತಂದವನು ನಾನು. ನನಗೆ ನಾಟಕ, ಗಿಮಿಕ್ ಮಾಡುವುದಕ್ಕೆ ಬರಲ್ಲ ಎಂದು ಹೇಳಿದರು.
ಪಕ್ಷ ಸೇರ್ಪಡೆ ಕಾರ್ಯಕ್ರಮ, ಕೆಪಿಸಿಸಿ ಕಚೇರಿ https://t.co/5lU1Y7O7GY
— Karnataka Congress (@INCKarnataka) March 30, 2023
2021ರಲ್ಲಿ ಕುಮಾರಸ್ವಾಮಿ ನನ್ನ ಗುಬ್ಬಿ ಕ್ಷೇತ್ರದಲ್ಲಿಯೇ ಕಾರ್ಯಕ್ರಮ ಮಾಡಿದ್ದರು. ಆ ಕಾರ್ಯಕ್ರಮದಲ್ಲಿಕ್ಯಾಂಡಿಡೇಟ್ ಘೋಷಿಸಿದ್ದರು. 2007ರಲ್ಲಿ ಸಿದ್ದರಾಮಯ್ಯನವರನ್ನ ಹೀನಾಯವಾಗಿ ಆಚೆ ಹಾಕಿದ್ದರು. ಅದೇ ರೀತಿ ನನ್ನನ್ನೂ ಆಚೆ ಹಾಕಿದ್ರು. ಹೇಳಬಾರದ ಹೇಳಿಕೆ ಕೊಟ್ರೂ ಜಿಟಿ ದೇವೇಗೌಡ ಮನೆಗೆ ಹೋಗುತ್ತಾರೆ. ಪಕ್ಷದಲ್ಲಿ ಉಳಿಸಿಕೊಳ್ಳುತ್ತಾರೆ. ನನ್ನನ್ನ ಮರ್ಯಾದೆ ಕಳೆದು ಆಚೆ ಹಾಕುತ್ತಾರೆ. ನನ್ನ ಒಂದು ಹೇಳಿಕೆ ಇಟ್ಟುಕೊಂಡು ಹೊರಗೆ ಹಾಕಿದರು ಎಂದು ಜೆಡಿಎಸ್ ವಿರುದ್ಧ ಕಿಡಿಕಾರಿದರು.
ನನ್ನ ಮನಸ್ಸಿಗೆ ಅತ್ಯಂತ ನೋವು ತಂದಿದೆ. ನಾನು ದೇವೆಡಗೌಡರಿಗೆ ಹೆಚ್ಚಿನ ಮತ ಹಾಕಿಸಿದ್ದೆ. 58533ಮತಗಳನ್ನ ನಾನು ಹಾಕಿಸಿದ್ದೆ. ಆದರೂ ನನ್ನ ಮೇಲೆ ಆರೋಪ ಮಾಡಿದ್ರು. ನಾನು ಜೆಡಿಎಸ್ ಸುಲಭವಾಗಿ ಬಿಟ್ಟವನಲ್ಲ. ಕತ್ತು ಹಿಡಿದು ನನ್ನನ್ನ ದೂಡಿದ್ದಾರೆ. ಹಾಗಾಗಿ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ ಎಂದರು.
Published On - 1:09 pm, Thu, 30 March 23