ಕಾಂಗ್ರೆಸ್ ಅನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಇಡಿ ಅಧಿಕಾರಿಗಳಿಗೆ ಗೊತ್ತಿದೆ: ರಾಹುಲ್ ಗಾಂಧಿ

| Updated By: ರಶ್ಮಿ ಕಲ್ಲಕಟ್ಟ

Updated on: Jun 22, 2022 | 3:24 PM

ಮಂಗಳವಾರ ಮತ್ತೊಂದು ಸುತ್ತಿನ ವಿಚಾರಣೆಗಾಗಿ ಗಾಂಧಿ ಅವರನ್ನು ಐದನೇ ಬಾರಿಗೆ ಕರೆಸಲಾಯಿತು. ಇಡಿ ಕಳೆದ ಸೋಮವಾರ ರಾಹುಲ್‌ಗೆ ಸಮನ್ಸ್‌ ಮಾಡಿ ಸತತ ಮೂರು ದಿನಗಳ ಕಾಲ ವಿಚಾರಣೆ ನಡೆಸಿತ್ತು. ಗಾಂಧಿ ಕುಟುಂಬವು ಯಂಗ್ ಇಂಡಿಯನ್...

ಕಾಂಗ್ರೆಸ್ ಅನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಇಡಿ ಅಧಿಕಾರಿಗಳಿಗೆ ಗೊತ್ತಿದೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us on

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (National Herald case) ಅವರ ಪಾತ್ರದ ಕುರಿತು ಇತ್ತೀಚೆಗೆ ಐದು ದಿನಗಳ ಕಾಲ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯವು ತನ್ನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬುಧವಾರ ಹೇಳಿದ್ದಾರೆ.”ಇಡಿ (ED) ಮತ್ತು ಅಂತಹ ಸಂಸ್ಥೆಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ, ನನ್ನನ್ನು ವಿಚಾರಣೆ ನಡೆಸಿದ ಅಧಿಕಾರಿಗಳು ಸಹ ಕಾಂಗ್ರೆಸ್ ಪಕ್ಷದ ನಾಯಕನನ್ನು ಹೆದರಿಸಲು ಮತ್ತು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಂಡರು ಎಂದು ಬುಧವಾರ ಮಧ್ಯಾಹ್ನ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ನಡೆಸಿದ ಸಂವಾದದಲ್ಲಿ ರಾಹುಲ್ ಹೇಳಿದ್ದಾರೆ. ಇಡಿ ವಿಚಾರಣೆ ವೇಳೆ ಬೆಂಬಲ ನೀಡಿದ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ ರಾಹುಲ್, ನಾನು ಒಬ್ಬಂಟಿ ಅಲ್ಲ, ನಾವೆಲ್ಲರೂ ಪ್ರಜಾಪ್ರಭುತ್ವಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಟೀಕಿಸಿ ಕಾಂಗ್ರೆಸ್ ನಾಯಕ ನಾವು ಸೇನಾಪಡೆಗಳನ್ನು ಬಲಪಡಿಸಬೇಕಿದೆ ಆದರೆ ಸರ್ಕಾರ ಅದನ್ನು ದುರ್ಬಲವನ್ನಾಗಿ ಮಾಡುತ್ತಿದೆ.ಯುದ್ಧದ ವೇಳೆ ಇದರ ಪರಿಣಾಮ ಗೊತ್ತಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮಂಗಳವಾರ ಮತ್ತೊಂದು ಸುತ್ತಿನ ವಿಚಾರಣೆಗಾಗಿ ಗಾಂಧಿ ಅವರನ್ನು ಐದನೇ ಬಾರಿಗೆ ಕರೆಸಲಾಯಿತು.
ಇಡಿ ಕಳೆದ ಸೋಮವಾರ ರಾಹುಲ್‌ಗೆ ಸಮನ್ಸ್‌ ಮಾಡಿ ಸತತ ಮೂರು ದಿನಗಳ ಕಾಲ ವಿಚಾರಣೆ ನಡೆಸಿತ್ತು. ಗಾಂಧಿ ಕುಟುಂಬವು ಯಂಗ್ ಇಂಡಿಯನ್ (YI) ಮಾಲೀಕತ್ವದ ಬಗ್ಗೆ ಮತ್ತು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ನಡೆಸುತ್ತಿರುವ ಅಸೋಸಿಯೇಟ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ನಲ್ಲಿ ಅದರ ಷೇರುದಾರರ ಬಗ್ಗೆ ರಾಹುಲ್ ಅವರನ್ನು ಪ್ರಶ್ನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ
ದೆಹಲಿಯಲ್ಲಿ ಸಿದ್ದರಾಮಯ್ಯನವರಂತೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ ಸಹ ಆತಂಕದಿಂದ ಎಐಸಿಸಿ ಕಚೇರಿ ಕಡೆ ಧಾವಿಸಿದರು!
ನಿಮ್ಮ ಪ್ರತಿಭಟನೆಗಳಿಂದ ನಮ್ಮ ಬದುಕನ್ನೇಕೆ ನರಕ ಮಾಡುತ್ತಿರುವಿರಿ ಅಂತ ದೆಹಲಿಯಲ್ಲಿ ಒಬ್ಬ ಮಹಿಳೆ ಸಿದ್ದರಾಮಯ್ಯನವರನ್ನು ಕೇಳಿದರು!
Viral Video: ಪ್ರತಿಭಟನೆ ವೇಳೆ ಪೊಲೀಸರ ಮುಖಕ್ಕೆ ಉಗುಳಿದ ಕಾಂಗ್ರೆಸ್ ನಾಯಕಿ; ನಿಮಗೆ ನಾಚಿಕೆಯೇ ಇಲ್ವಾ? ಎಂದ ಬಿಜೆಪಿ
ಈಡಿ ಮತ್ತು ಸರ್ಕಾರ ನೀಡುತ್ತಿರುವ ಕಿರುಕುಳ ತಾತ್ಕಾಲಿಕ, ಸತ್ಯಕ್ಕೆ ಜಯ ಸಿಗಲಿದೆ: ಡಿಕೆ ಶಿವಕುಮಾರ


ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಪಕ್ಷದ ನಾಯಕತ್ವವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. “ಅಧಿಕಾರದಲ್ಲಿರುವವರು ಭಿನ್ನಮತೀಯರನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಇದು ಸ್ಪಷ್ಟವಾಗಿ ರಾಜಕೀಯ ಪ್ರೇರಿತ ನಡೆ. ಇದು ಕೇವಲ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿಗೆ ಸಂಬಂಧಿಸಿದ್ದಲ್ಲ, ಆದರೆ ಇಡೀ ವಿರೋಧ ಪಕ್ಷಕ್ಕೆ ಸಂಬಂಧಿಸಿದೆ. ಬಿಜೆಪಿ ವಿರುದ್ಧ ದನಿಯೆತ್ತಿರುವುದರಿಂದ ಕಾಂಗ್ರೆಸ್ ನಾಯಕತ್ವವನ್ನು ಗುರಿಯಾಗಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 3:21 pm, Wed, 22 June 22