Maharashtra Political Crisis ನೀವು ರಾಜೀನಾಮೆ ನೀಡಿ ಎಂದು ಹೇಳಿದರೆ ಸಿಎಂ ಸ್ಥಾನ ತ್ಯಜಿಸಲು ಸಿದ್ಧ: ಉದ್ಧವ್ ಠಾಕ್ರೆ

ನಾನು ಯಾಕೆ ಜನರನ್ನು ಭೇಟಿಯಾಗುವುದಿಲ್ಲ ಎಂದು ಕೆಲವರು ಹೇಳುತ್ತಾರೆ, ಕೆಲವರು ನಮ್ಮ ಹಿಂದುತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಶಿವಸೇನಾ ಮತ್ತು ಹಿಂದುತ್ವ ಒಂದೇ ನಾಣ್ಯದ ಎರಡು ಮುಖಗಳು...

Maharashtra Political Crisis ನೀವು ರಾಜೀನಾಮೆ ನೀಡಿ ಎಂದು ಹೇಳಿದರೆ ಸಿಎಂ ಸ್ಥಾನ ತ್ಯಜಿಸಲು ಸಿದ್ಧ: ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Follow us
| Updated By: ರಶ್ಮಿ ಕಲ್ಲಕಟ್ಟ

Updated on:Jun 22, 2022 | 6:44 PM

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು(Maharashtra Political Crisis)  ಮುಂದುವರಿಯುತ್ತಿದ್ದಂತೆ ಬುಧವಾರ ಸಂಜೆ ಫೇಸ್​​ಬುಕ್ ಲೈ ವ್ ಮೂಲಕ ರಾಜ್ಯವನ್ನುದ್ದೇಶಿಸಿ ಮಾತನಾಡಿದ ಶಿವಸೇನಾ ಮುಖ್ಯಸ್ಥ, ಮಹಾ ಸಿಎಂ ಉದ್ಧವ್ ಠಾಕ್ರೆ (Uddhav Thackeray),ನಾನು ಬೆಳಿಗ್ಗೆ ಕೊವಿಡ್-19 ಗೆ ಧನಾತ್ಮಕ ಪರೀಕ್ಷೆ ಮಾಡಿದ್ದೇನೆ. ನಾನು ಕೊವಿಡ್ ಪಾಸಿಟಿವ್ ಆಗಿರುವುದರಿಂದ, ನಾನು ಬಿಳುಚಿಕೊಂಡು ಮತ್ತು ದುರ್ಬಲವಾಗಿ ಕಾಣುತ್ತಿದ್ದೆ. ಬೆಳವಣಿಗೆಗಳು ನನ್ನ ಮೇಲೆ ಪರಿಣಾಮ ಬೀರಿಲ್ಲ.ನಾನು ನಿಮ್ಮೊಂದಿಗೆ ಕೆಲವು ವಿಷಯಗಳ ಬಗ್ಗೆ ಮಾತನಾಡಲು ಬಯಸುತ್ತೇನೆ. ನಾನು ಯಾಕೆ ಜನರನ್ನು ಭೇಟಿಯಾಗುವುದಿಲ್ಲ ಎಂದು ಕೆಲವರು ಹೇಳುತ್ತಾರೆ, ಕೆಲವರು ನಮ್ಮ ಹಿಂದುತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಶಿವಸೇನಾ (Shiv Sena) ಮತ್ತು ಹಿಂದುತ್ವ ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಿದ್ದಾರೆ. ಆದಿತ್ಯ ಠಾಕ್ರೆ ಮತ್ತು ಏಕನಾಥ್ ಶಿಂಧೆ ಮತ್ತು ನಮ್ಮ ಕೆಲವು ನಾಯಕರು ಇತ್ತೀಚೆಗೆ ಅಯೋಧ್ಯೆಗೆ ಭೇಟಿ ನೀಡಿದ್ದರು. ಇದು ಬಾಳಾಸಾಹೇಬ್ ಠಾಕ್ರೆಯವರ ಶಿವಸೇನಾ ಆಗಿ ಉಳಿದಿಲ್ಲ ಎಂದು ಕೆಲವರು ಆರೋಪಿಸುತ್ತಾರೆ. ಬಾಳಾಸಾಹೇಬರ ವಿಚಾರಗಳನ್ನೇ ನಾವು ಕಾಪಾಡುತ್ತಿದ್ದೇವೆ. ಹಿಂದುತ್ವಕ್ಕಾಗಿ ಶಿವಸೇನೆ ಸಾಕಷ್ಟು ಮಾಡಿದೆ. ನಾವು ಅದೇ ವಿಚಾರಗಳನ್ನು ಮುಂದೆ ತೆಗೆದುಕೊಂಡು ಹೋಗುತ್ತಿದ್ದೇವೆ. ನಾನು ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷ, ಶಿವಸೇನಾದ ಸಚಿವರೂ ಅಷ್ಟೇ ವರ್ಷ ಇಲ್ಲಿದ್ದಾರೆ. ಎಂಎಲ್‌ಸಿಗೂ ಮುನ್ನ ಹೋಟೆಲ್‌ನಲ್ಲಿ ನಮ್ಮ ಶಾಸಕರನ್ನು ಭೇಟಿ ಮಾಡಿದ್ದೆ. ನಾವು ನಮ್ಮ ಗುಂಪನ್ನು ಒಟ್ಟಿಗೆ ಇಡಬೇಕಾಗಿತ್ತು. ಅಂತಹ ಪ್ರಜಾಪ್ರಭುತ್ವ ನನಗೆ ಇಷ್ಟವಿಲ್ಲಎಂದು ಹೇಳಿದ್ದಾರೆ.

ಕಮಲ್ ನಾಥ್ ಮತ್ತು ಶರದ್ ಪವಾರ್ ಇಬ್ಬರೂ ನನಗೆ ಕರೆ ಮಾಡಿ ನನ್ನ ಮೇಲೆ ವಿಶ್ವಾಸ ವ್ಯಕ್ತಪಡಿಸಿದರು. ಆದರೆ ನನ್ನ ಸ್ವಂತ ಜನರು ನನ್ನನ್ನು ಬಯಸದಿರಬಹುದು. ನನ್ನ ಯಾವ ಶಾಸಕರೂ ಅದನ್ನು ನನ್ನ ಮುಂದೆ ಹೇಳಿಲ್ಲ. ಯಾರಾದರೂ ನನ್ನ ಬಳಿಗೆ ಬಂದರೆ ನಾನು ರಾಜೀನಾಮೆ ನೀಡುತ್ತೇನೆ. ರಾಜೀನಾಮೆ ಪತ್ರವನ್ನು ರೆಡಿ ಇಟ್ಟುಕೊಂಡಿದ್ದೇನೆ, ನಾಪತ್ತೆಯಾಗಿರುವ ಶಾಸಕರು ಬಂದು ಆ ಪತ್ರವನ್ನು ತೆಗೆದುಕೊಂಡು ಹೋಗಿ ರಾಜ್ಯಪಾಲರಿಗೆ ಸಲ್ಲಿಸಬೇಕು.

ನಾನು ಕೊವಿಡ್-19 ಪಾಸಿಟಿವ್ ಆಗಿರುವುದರಿಂದ ಹೋಗಲು ಸಾಧ್ಯವಿಲ್ಲ. ನಾನು ಶಿವಸೇನಾ ಮುಖ್ಯಸ್ಥ ಸ್ಥಾನವನ್ನು ಕೂಡಾ ತ್ಯಜಿಸಲು ಸಿದ್ಧನಿದ್ದೇನೆ. ಆದರೆ ಇದನ್ನು ಟ್ವಿಟರ್‌ನಲ್ಲಿ ಮತ್ತು ನನ್ನನ್ನು ಟ್ರೋಲ್ ಮಾಡುವ ಮೂಲಕ ನನಗೆ ಹೇಳಬೇಡಿ. ಇದನ್ನು ನನ್ನ ಶಿವಸೈನಿಕರು ಹೇಳಬೇಕು. ನಾನು ಎರಡೂ ಹುದ್ದೆಗಳನ್ನು ತ್ಯಜಿಸುತ್ತೇನೆ. ಆದರೆ ನನ್ನ ಮುಂದೆ ಬಂದು ಹೇಳಿ. ಶಿವಸೈನಿಕರೊಬ್ಬರು ಸಿಎಂ ಆಗಿರುವವರೆಗೂ ನನಗೆ ತುಂಬಾ ಖುಷಿಯಾಗಿದೆ. ನೀವು ಬಂದು ನನ್ನೊಂದಿಗೆ ನೇರಾನೇರ ಮಾತನಾಡಿ ಅಥವಾ ನನಗೆ ಕರೆ ಮಾಡಿ ನನ್ನೊಂದಿಗೆ ಮಾತನಾಡಿ. ನೀವು ಇದನ್ನು ಲೈವ್ ಆಗಿ ನೋಡಿದ ನಂತರ ನಿಮಗೆ ಬೇಕಾದುದನ್ನು ನನಗೆ ತಿಳಿಸಿ. ನೀವು ನನ್ನಲ್ಲಿ ಕೇಳಿದರೆ ನಾನು ತ್ಯಜಿಸುತ್ತೇನೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

ಇದನ್ನೂ ಓದಿ
Image
Maharashtra Political Crisis: ಅಧಿಕಾರ ಹೋದರೆ ಮತ್ತೆ ಬರುತ್ತದೆ ಎಂದ ಸಂಜಯ್ ರಾವತ್
Image
Political Crisis: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಕಮಲ್ ನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಸಭೆ
Image
Political Crisis:ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಸಂಪುಟ ಸಭೆ ಕರೆದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ
Image
Maharashtra Political Crisis: ಬಂಡಾಯ ಶಾಸಕರು ಗುಜರಾತ್​ನಿಂದ ಅಸ್ಸಾಂಗೆ ಶಿಫ್ಟ್, 40 ಶಾಸಕರ ಬೆಂಬಲವಿದೆ ಎಂದ ಏಕನಾಥ್ ಶಿಂಧೆ

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 6:00 pm, Wed, 22 June 22

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು