ದೆಹಲಿ: ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ದೆಹಲಿಯಲ್ಲಿ ಹೇಳಿಕೆ ನೀಡಿದ ಅವರು, ನಾನು ನ್ಯಾಯಾಲಯಕ್ಕೆ ಗೌರವ ಕೊಟ್ಟು ವಿಚಾರಣೆಗೆ ಹಾಜರಾಗುತ್ತಿದ್ದೇನೆ. ಸೆಪ್ಟೆಂಬರ್ 23ಕ್ಕೆ ಇಡಿ ವಿಚಾರಣೆ ಬರುವಂತೆ ಸಮನ್ಸ್ ನೀಡಿತ್ತು. ಆದರೆ ನಾವು ಭಾರತ್ ಜೋಡೋ ಯಾತ್ರೆಯಲ್ಲಿ ಇದ್ದೆವು. ಹೀಗಾಗಿ ಸಮಯಾವಕಾಶ ಕೇಳಿದ್ದೆವು. ಆದರೆ ಅಧಿಕಾರಿಗಳು ನಿರಾಕರಿಸಿದ ಹಿನ್ನೆಲೆ ನಾನು ವಿಚಾರಣೆಗೆ ಬಂದಿದ್ದೇನೆ. ನಾವು ಕಾನೂನಿಗೆ ಗೌರವ ಕೊಡಬೇಕು ಎಂದು ನಮ್ಮ ನಾಯಕರ ಜೊತೆ ಮಾತನಾಡಿ ನಾನು ಮತ್ತು ನನ್ನ ಸಹೋದರ ಡಿ.ಕೆ.ಸುರೇಶ್ ದೆಹಲಿಗೆ ಬಂದಿದ್ದೇವೆ ಎಂದರು.
ಹೊಸ ಪ್ರಕರಣವೊಂದರಲ್ಲಿ ಇಡಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರನಿಗೆ ಸಮನ್ಸ್ ಜಾರಿ ಮಾಡಿದೆ. ಇಂದು ಬೆಳಗ್ಗೆ 10-30ಕ್ಕೆ ಹಾಜರಾಗಲಿರುವ ಡಿಕೆ ಶಿವಕುಮಾರ್ ಮತ್ತು ಸಂಸದ ಡಿ.ಕೆ ಸುರೇಶ್ ಅವರಿಗೆ ಬುಲಾವ್ ನೀಡಲಾಗಿತ್ತು. ಅದರಂತೆ ಗುರುವಾರ ತಡರಾತ್ರಿ ದೆಹಲಿಯ ವಿದ್ಯುತ್ ಲೇನ್ನಲ್ಲಿರುವ ಇಡಿ ಕಚೇರಿಗೆ ವಿಚಾರಣೆಗಾಗಿ ಹಾಜರಾಗಲು ದೆಹಲಿಗೆ ಆಗಮಿಸಿದ್ದಾರೆ. ಹಾಜರಾಗಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆ ಇರಬಹುದು ಎಂದು ಡಿಕೆ ಸಹೋದರರು ಅಂದುಕೊಂಡಿದ್ದಾರೆ. ಆದರೆ ಸ್ಪಷ್ಟವಾಗಿ ಯಾವ ಪ್ರಕರಣದ ವಿಚಾರಣೆ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಈಗಾಗಲೇ ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಎಂಟು ಹತ್ತು ದಿನಗಳ ಹಿಂದೆ ನನಗೆ ಮತ್ತು ನನ್ನ ಸಹೋದರನಿಗೆ ಇಡಿ ಸಮಸ್ಸ್ ಬಂದಿತ್ತು. ಕುಲದೀಪ್ಸಿಂಗ್ ಅಧಿಕಾರಿಯಿಂದ ಈ ಸಮನ್ಸ್ ಜಾರಿಯಾಗಿದ್ದು, ಯಾವ ವಿಚಾರಕ್ಕೆ ವಿಚಾರಣೆಗೆ ಕರೆದಿದ್ದಾರೆ ಎಂದು ಬರೆದಿಲ್ಲ. ನಮಗೆ ಸಮಯ ಕೊಡಿ ಅಂತ ಕೇಳಿದ್ದೆ, ಆದರೆ ಕೊಟ್ಟಿಲ್ಲ. ನಮಗೆ ಮೇಲ್ ಮೂಲಕ ನೀವು ಇವತ್ತೆ ಬರಬೇಕು ಅಂತ ಹೇಳಿದ್ದಾರೆ. ಆದರೆ ನಾವು ಭಾರತ್ ಜೋಡೋ ಯಾತ್ರೆಯಲ್ಲಿ ಇದ್ದೆವು. ಆದರೆ ನಾವು ಕಾನೂನಿಗೆ ಗೌರವ ಕೊಡಬೇಕು ಎಂದು ನಮ್ಮ ನಾಯಕರ ಹತ್ತಿರ ಮಾತಾನಾಡಿ ಬಂದೆವು ಎಂದರು.
ಭಾರತ್ ಜೋಡೋ ಯಾತ್ರೆಯಲ್ಲಿ ಬರುವವರು, ಹೋಗುವವರು, ಬಾವುಟ ಹಾಕುವುದು ಊಟ, ತಿಂಡಿ, ನೀರು, ಕಸ ಗುಡಿಸುವುದು ಎಲ್ಲ ನೋಡಬೇಕು. ಆದರೆ ಇಡಿ ಸಮನ್ಸ್ ಜಾರಿ ಮಾಡಿದ ಹಿನ್ನೆಲೆ ಕಾನೂನಿಗೆ ಗೌರವ ಕೊಟ್ಟು ಆಗಮಿಸಿದ್ದೇವೆ. ಅಧಿಕಾರಿಗಳು ಯಾವ ವಿಚಾರಕ್ಕೆ ಕರೆದಿದ್ದಾರೆ ಎಂದು ತಿಳಿದಿಲ್ಲ. ಇಲಾಖೆಯ ದಾಖಲೆಗಳೆಲ್ಲಾ ನಿಮ್ಮ ಹತ್ತಿರನೇ ಇದೆ. ನಾನು ಏನಾದರು ತಪ್ಪು ಮಾಡಿದ್ದರೆ ಸಿಬಿಐಗೆ ಕೊಡಿ. ನಿಮ್ಮ ಹತ್ತಿರ ಏನೆಲ್ಲ ದಾಖಲೆ ಇದೆ ಸಿಬಿಐಗೆ ಕೊಡಿ. ನಾನು ಎಷ್ಟು ಪ್ರಮಾಣಿಕ ಅಂತ ನನಿಗೆ ಗೊತ್ತಿದೆ. ನಾನು ಏನಾದರು ಸುಳ್ಳು ಹೇಳಿದರೆ, ತಪ್ಪು ಮಾಡಿದರೆ ಗಲ್ಲಿಗೆ ಬೇಕಿದ್ದರೆ ಹಾಕಲಿ. ಅವರು ಎಷ್ಟು ಅಧಿಕಾರ, ಹಣವನ್ನು ದುರುಪಯೋಗ ಪಡಿಸಿದ್ದಾರೆ ಗೊತ್ತಿದೆ ಎಂದರು.
ಸೊಲರ್ ಪಾರ್ಕ್ ಬಗ್ಗೆ ಕೇಂದ್ರ ಸರ್ಕಾರ ಪ್ರಶಂಸಿಸಿದೆ, ಪ್ರಧಾನಿಯವರೇ ಪತ್ರ ಕೊಟ್ಟಿದ್ದಾರೆ. ಕರ್ನಾಟಕದ ಸೋಲರ್ ಪಾರ್ಕ್ ಬಗ್ಗೆ ಅವರೇ ಬೇರೆ ರಾಜ್ಯಗಳಿಗೆ ಹೇಳಿದ್ದಾರೆ. ಇದೊಂದು ಮಾಡೆಲ್ ಅಂತ ಅವರೇ ಪತ್ರ ಬರೆದಿದ್ದಾರೆ. ಆ ಎಲ್ಲಾ ದಾಖಲೆಗಳು ಇದಾವೆ, ನಾನು ಬಿಡುಗಡೆ ಮಾಡುತ್ತೇನೆ. ನೀವು ಯಾಕೆ ತಡ ಮಾಡುತ್ತಿದ್ದೀರಾ ಎಸಿಬಿ ಅಥವಾ ಸಿಬಿಐಗೆ ಕೊಡಿ. ಕೇಂದ್ರೆ ಸರ್ಕಾರ ಜಾಹಿರಾತು ಕೊಡುತ್ತಿರಲಿಲ್ಲ. ಯಾಕೆಂದರೆ ನಾನು ಇಂಧನ ಸಚಿವ ಆಗಿದ್ದೆ. ನನ್ನ ಹೆಸರು, ಕರ್ನಾಟಕ ಸರ್ಕಾರದ ಹೆಸರು ಬರುತ್ತದೆ ಅಂತ ಜಾಹಿರಾತು ನೀಡಿರಲಿಲ್ಲ. ಇಡೀ ಜಗತ್ತಿನಲ್ಲಿಯೇ ಯಾರು ಈ ರೀತಿ ಮಾಡಿಲ್ಲ. ನಾವು ಯಾವ ರೈತರ ಒಂದು ಇಂಚು ಜಾಮಿನನ್ನು ಖರೀದಿ ಮಾಡಿಲ್ಲ, ಭೂಮಿಯನ್ನ ರೆಂಟ್ಗೆ ಪಡೆದು ಸೊಲರ್ ಯೋಜನೆ ಮಾಡಿದ್ದೇವೆ ಎಂದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:43 pm, Fri, 7 October 22