AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ್​ ಯಾತ್ರೆ ಮಾಡಿ ಅದೇನೋ ಕಡೀತಿನಿ ಅಂತೀರಾ!? ಬಿಜೆಪಿ ಕಾರ್ಯಕಾರಿಣಿಯಲ್ಲಿ ಕಾಂಗ್ರೆಸ್​ ವಿರುದ್ಧ ಯಡಿಯೂರಪ್ಪ ವಾಗ್ದಾಳಿ

BS Yediyurappa: ನಮ್ಮ ನಡೆ ವಿಜಯದ ಕಡೆಗೆ. 140 ಸೀಟ್ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಬೂಟಾಟಿಕೆ ಕಾರ್ಯಕ್ರಮ ಯಾರಿಗೂ ತಲುಪೋದಿಲ್ಲ. ಕಾಂಗ್ರೆಸ್ ಅಡ್ರೆಸ್ಸಿಗೇ ಇಲ್ಲ. ಇಂದು ಇಲ್ಲಿ ಯಾತ್ರೆ ಮಾಡಿ ಅದೇನೋ ಕಡೀತಿನಿ ಅಂತೀರಾ!? ಇದು ಹಾಸ್ಯಾಸ್ಪದ ಎಂದು ಯಡಿಯೂರಪ್ಪ ಅವರು ಕಾಂಗ್ರೆಸ್ ಯಾತ್ರೆ ಬಗ್ಗೆ ನೇರವಾಗಿ ವಾಗ್ದಾಳಿ ನಡೆಸಿದರು.

ಭಾರತ್​ ಯಾತ್ರೆ ಮಾಡಿ ಅದೇನೋ ಕಡೀತಿನಿ ಅಂತೀರಾ!? ಬಿಜೆಪಿ ಕಾರ್ಯಕಾರಿಣಿಯಲ್ಲಿ ಕಾಂಗ್ರೆಸ್​ ವಿರುದ್ಧ ಯಡಿಯೂರಪ್ಪ ವಾಗ್ದಾಳಿ
ಭಾರತ್​ ಯಾತ್ರೆ ಮಾಡಿ ಅದೇನೋ ಕಡೀತಿನಿ ಅಂತೀರಾ!? ಬಿಜೆಪಿ ಕಾರ್ಯಕಾರಿಣಿಯಲ್ಲಿ ಕಾಂಗ್ರೆಸ್​ ವಿರುದ್ಧ ಯಡಿಯೂರಪ್ಪ ವಾಗ್ದಾಳಿ
TV9 Web
| Edited By: |

Updated on: Oct 07, 2022 | 12:51 PM

Share

ಬೆಂಗಳೂರು: ನಮ್ಮ‌ ಮುಂದಿನ ಯಾತ್ರೆ ವಿಜಯ ಯಾತ್ರೆ. ನಮ್ಮನ್ನ ಕಟ್ಟಿ ಹಾಕುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ 140ಕ್ಕೂ ಹೆಚ್ಚು ಸ್ಥಾನಗಳ್ನ ಗೆಲ್ಲುವುದು ನಿಶ್ಚಿತ. ನಾನು ನಿಮಗೆ ಮನವಿ ಮಾಡ್ತೇನೆ- ನಮ್ಮ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಾಧನೆಯನ್ನ ಕಾರ್ಯಕ್ರಮ ವನ್ನ ಮನೆ ಮನೆಗೆ ಮುಟ್ಟಿಸಿ. ಪರಿಶಿಷ್ಟ ರ ಕಲ್ಯಾಣಕ್ಕೆ ನಾವು ಕೆಲಸ ಮಾಡಿದ್ದೇವೆ. ಅನೇಕ ಮನೆಗಳಿಗೆ ವಿದ್ಯುತ್ ಇರಲಿಲ್ಲ. ಆ ಮನೆಗಳಿಗೆ ವಿದ್ಯುತ್ ಕೊಡುವ ಕೆಲಸ ಮಾಡಿದ್ದೇವೆ. ನಮ್ಮ‌ಕಾರ್ಯಕರ್ತರು ನಮ್ಮ ಯೋಜನೆ ಮನದಟ್ಟು ಮಾಡಿಕೊಂಡು ಮನೆ ಮನೆಗೆ ತಲುಪಿಸಬೇಕು. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಜನರಿಗೆ ತಲುಪಿದೆ. 43 ಲಕ್ಷಕ್ಕೂ ಹೆಚ್ಚು ರೈತರಿಗೆ ಡಿಬಿಟಿ ಮೂಲಕ ಹಣ ತಲುಪಿಸಿದ್ದೇವೆ. ಹಿಂದೆ ಸವಲತ್ತಿಗೆ ಮುಖಂಡರ ಮನೆ ಸುತ್ತಿ ಕೈ ಬಿಸಿ ಮಾಡಬೇಕಿತ್ತು. ಆದರೆ ಪಿಎಂ ಮೋದಿ ರೈತರಿಗೆ ನೇರವಾಗಿ ತಲುಪಿಸಲು ಯಶಸ್ವಿ ಆಗಿದ್ದಾರೆ. ರಾಜ್ಯದ ಪ್ರತಿ ಮನೆಗೆ ಶುದ್ದವಾದ ಕುಡಿಯೋ ನೀರು ಕೊಡುವ ಮೂಲಕ ಮಧ್ಯಮ ವರ್ಗದವರಿಗೆ ಗ್ಯಾಸ್- ಪಡಿತರ ತಲುಪಿಸುವ ಮೂಲಕ ಕೆಲಸ ಮಾಡಿದ್ದೇವೆ ಎಂದು ಎಂದು ಬಿಜೆಪಿ ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಹೇಳಿದರು.

ಕರ್ನಾಟಕದಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ರೈತರು ಸ್ವಾಭಿಮಾನದಿಂದ ಬದುಕಲು ಕೆಲಸ ಮಾಡಿದ್ದೇವೆ. ನಾವು ಮುಖಂಡರು ಪ್ರವಾಸ ಮಾಡಿದಾಗ, ಜನರಿಗೆ ಇದೆಲ್ಲವನ್ನ ತಿಳಿಸಬೇಕಿದೆ. ಇನ್ನೂ ಹತ್ತು ಹಲವು ಕಾರ್ಯಕ್ರಮ ನಿಶ್ಚಯ ಆಗಿದೆ. ನಾವು ನೀವೆಲ್ಲ ಒಟ್ಟಿಗೆ ಕೆಲಸ ಮಾಡಬೇಕಿದೆ. ನಮ್ಮ ನಡೆ ವಿಜಯದ ಕಡೆಗೆ. 140 ಸೀಟ್ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಬೂಟಾಟಿಕೆ ಕಾರ್ಯಕ್ರಮ ಯಾರಿಗೂ ತಲುಪೋದಿಲ್ಲ. ಕಾಂಗ್ರೆಸ್ ನಾಮಾವಶೇಶ ಆಗಿದೆ. ನಾನು ಇಲ್ಲಿ ಪ್ರವಾಸ ಮಾಡುವ ಕಾಂಗ್ರೆಸ್ ನಾಯಕರಿಗೆ ಕೇಳ್ತೇನೆ – ಕಾಂಗ್ರೆಸ್ ಅಡ್ರೆಸ್ಸಿಗೇ ಇಲ್ಲ. ಒಂದೆರಡು ಕಡೆ ಅಧಿಕಾರದಲ್ಲಿ ಇದೀರಾ. ಇಂದು ಇಲ್ಲಿ ಯಾತ್ರೆ ಮಾಡಿ ಅದೇನೋ ಕಡೀತಿನಿ ಅಂತೀರಾ! ಇದು ಹಾಸ್ಯಾಸ್ಪದ. ನಾನು ಅವರ ಹೆಸರನ್ನೂ ಹೇಳಲು ಬಯಸೋಲ್ಲ ಎಂದು ಯಡಿಯೂರಪ್ಪ ಅವರು ಕಾಂಗ್ರೆಸ್ ಯಾತ್ರೆ ಬಗ್ಗೆ ನೇರವಾಗಿ ವಾಗ್ದಾಳಿ ನಡೆಸಿದರು.

ಈ ಬಾರಿ ರಾಜ್ಯದಲ್ಲಿ ಕೆರೆ ಕಟ್ಟೆಗಳು ಜಲಾಶಯ ತುಂಬಿವೆ. ನೀರಾವರಿ ಯೋಜನಗೆ ಹೆಚ್ಚಿನ ಆದ್ಯತೆ ಕೊಡುವ ಕೆಲಸ ಸರ್ಕಾರ ಮಾಡಿದೆ. ಎತ್ತಿನ ಹೊಳೆ, ಕೃಷ್ಣ, ಮಹದಾಯಿ, ಮೇಕೆದಾಟು ಯೋಜನೆಗೆ ಸಾವಿರಾರು ಕೋಟಿ ರೂ ಅನುದಾನ ‌ನೀಡಲಾಗಿದೆ. ಈಗಾಗಲೇ ಮುಖ್ಯಮಂತ್ರಿಗಳು ರೈತ ವಿದ್ಯಾನಿಧಿಗೆ 440 ಕೋಟಿ‌ ರೂ ಅನುದಾನ ನೀಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಗೊಳಿಸಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಸರ್ಕಾರ ಶಾಲೆಯಲ್ಲಿ 8100 ಕೊಠಡಿ ನಿರ್ಮಾಣದ ಕೆಲಸ ಆರಂಭವಾಗಿದೆ. ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಉನ್ನತೀಕರಣ ಮಾಡಲಾಗಿದೆ.

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಚಾಲ್ತಿಯಲ್ಲಿದೆ. 7 ವಿಶ್ವವಿದ್ಯಾಲಯಗಳಿಗೆ ಚಾಲನೆ ನೀಡಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದೇವೆ. 100 ಪಿಎಸ್ ಸಿ ಉನ್ನತೀಕರಣ ನಡೆದಿದೆ. 80 ಕ್ಕೂ ಹೆಚ್ಚು ಪಿಎಸ್ ಸಿ ಆರಂಭಗೊಂಡಿದೆ. ನಮ್ಮ ಕ್ಲಿನಿಕ್ ಆಸ್ಪತ್ರೆಗಳು ಆರಂಭಗೊಂಡಿವೆ. ಅಂಬೇಡ್ಕರ್ ವಸತಿ ನಿಲಯ, ನೇಕಾರ ಸಮ್ಮಾನ ಯೋಜನೆ, ನೇಕಾರರಿಗೆ ಕಡಿಮೆ ಬಡ್ಡಿ ಯೋಜನೆ, ಬಿಸಿ ಊಟ ತಯಾರಕರಿಗೆ ಗೌರವ ಧನ ಹೆಚ್ಚಳ ಮಾಡಿದ್ದೇವೆ ಎಂದು ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಹೇಳಿದರು.

ಶಾಸಕರು ಒಟ್ಟಾಗಿ ಕೆಲಸ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಜಿಲ್ಲೆಗೆ ಮೀಸಲಾಗದೇ ಕೆಲಸ ಮಾಡಿ. ಯಾವುದೇ ಓಡಕಿನ ಮಾತಿಗೆ ಅವಕಾಶ ನೀಡದೇ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.