ಬೆಂಗಳೂರು: ಕರ್ನಾಟಕದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ 16ನೇ ದಿನಕ್ಕೆ ಕಾಲಿಟ್ಟಿದೆ. ರಾಹುಲ್ ಯಾತ್ರೆ ಸಾವಿರ ಕಿಲೋ ಮೀಟರ್ ಪೊರೈಸಿದ ಬೆನ್ನಲ್ಲೆ ಬಳ್ಳಾರಿಯಲ್ಲಿ ನಿನ್ನೆ(ಅಕ್ಟೋಬರ್ 15) ಕಾಂಗ್ರೆಸ್ ಬೃಹತ್ ಸಮಾವೇಶ ಮಾಡಿದೆ. ಈ ಮೂಲಕ ಬಳ್ಳಾರಿಯಲ್ಲಿ ಕಾಂಗ್ರೆಸ್ ಮುಂದಿನ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದೆ. ಇನ್ನು ಸಮಾವೇಶಕ್ಕೆ ಜನಸಾಗರವೇ ಹರಿದುಬಂದಿದ್ದು, ಸಮಾವೇಶದಲ್ಲಿ ಭಾಗಿಯಾಗಿದ್ದ ಜನಸಂಖ್ಯೆಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಪರ-ವಿರೋಧದ ಚರ್ಚೆ ಶುರುವಾಗಿದೆ.
ಸಿದ್ದರಾಮಯ್ಯನವರ ಸವಾಲ್ ಸ್ವೀಕರಿಸಿ, ಪ್ರತಿಸವಾಲು ಹಾಕಿದ ಶ್ರೀರಾಮುಲು
ಹೌದು….ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಪಕ್ಕಾ. ಇದಕ್ಕೆ ಬಳ್ಳಾರಿ ಸಮಾವೇಶದಲ್ಲಿ ಸೇರಿದ ಜನಸಂಖ್ಯೆಯೇ ಸಾಕ್ಷಿ ಎಂದು ಆ ಫೋಟೋವನ್ನು ಕಾಂಗ್ರೆಸ್ ಕಾರ್ಯಕರ್ತರು ಸಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುತ್ತಿದ್ದಾರೆ. ಆದ್ರೆ, ಇದಕ್ಕೆ ಬಿಜೆಪಿ ಕಾರ್ಯಕರ್ತರು ಇದು ಫೇಕ್. ಈ ಫೋಟೋ ಬಳ್ಳಾರಿ ಸಮಾವೇಶದಲ್ಲ ಎಂದು ಕಮೆಂಟ್ ಹಾಕುತ್ತಿದ್ದಾರೆ.
ಹಾಗಾದ್ರೆ, ಈ ಫೋಟೋ ಬಳ್ಳಾರಿ ಸಮಾವೇಶದ್ದಾ? ಭಾರತ್ ಜೋಡೋ ಯಾತ್ರೆಗೆ ಇಷ್ಟೊಂದು ಜನಸಂಖ್ಯೆ ಹರಿದುಬಂದಿತ್ತಾ? ಅಲ್ಲವಾದರೆ ಮತ್ತೆ ಆ ಫೋಟೋ ಎಲ್ಲಿಯದ್ದು? ಎನ್ನುವ ಸತ್ಯಾಸತ್ಯತೆ ಈ ಕೆಳಗಿನಂತಿದೆ ನೋಡಿ…
ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಂಚಿಕೊಂಡಿರುವ ಫೋಟೋವನ್ನು ಫಾಕ್ಟ್ ಚೆಕ್ ಮಾಡಿದಾಗ ಬಳ್ಳಾರಿ ಕಾಂಗ್ರೆಸ್ ಸಮಾವೇಶದ ಫೋಟೋ ಅಲ್ಲ. ಇದು ನೈಜೀರಿಯಾದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಫೋಟೋ ಆಗಿದೆ. ಬೃಹತ್ ಸಂಖ್ಯೆಯಲ್ಲಿ ಸೇರಿದ ಫೋಟೋವನ್ನು Eagles Arusha ಎಂಬುವರ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ Eagles Arusha ಎನ್ನುವರು 2020 ಮಾರ್ಚ್ನಲ್ಲಿ ತಮ್ಮ ಫೇಸ್ಬುಕ್ ಪ್ರೊಫೈಲ್ ಫೋಟೋಗೆ ಹಾಕಿಕೊಂಡಿದ್ದಾರೆ.