ರಾಷ್ಟ್ರೀಯ ಪಕ್ಷಗಳು ರಾಷ್ಟ್ರ ಧ್ವಜದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿವೆ: ಹೆಚ್​ ಡಿ ಕುಮಾರಸ್ವಾಮಿ

| Updated By: ವಿವೇಕ ಬಿರಾದಾರ

Updated on: Aug 14, 2022 | 7:57 PM

ರಾಷ್ಟ್ರೀಯ ಪಕ್ಷಗಳು ರಾಷ್ಟ್ರ ಧ್ವಜದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಪಕ್ಷಗಳು ರಾಷ್ಟ್ರ ಧ್ವಜದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿವೆ: ಹೆಚ್​ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ
Follow us on

ಬೆಂಗಳೂರು: ರಾಷ್ಟ್ರೀಯ ಪಕ್ಷಗಳು ರಾಷ್ಟ್ರ ಧ್ವಜದ (National Flag) ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ (Bengaluru) ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ (HD Kumarswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ಚೀಪ್ ಪಬ್ಲಿಸಿಟಿ‌ ಜನ ಒಪ್ಪಲ್ಲ, ಇದನ್ನು ಮೊದಲು ನಿಲ್ಲಿಸಿ. ಅಭಿವೃದ್ಧಿ ಬಗ್ಗೆ ಚರ್ಚಿಸಲು ರಾಷ್ಟ್ರೀಯ ಪಕ್ಷಗಳ ಬಳಿ ಸರಕು ಇಲ್ಲ. ಎಷ್ಟೋ ಜನರಿಗೆ ಮನೆ ಇಲ್ಲ, ಫ್ಲೈಓವರ್ ಕೆಳಗೆ ಮಲಗುತ್ತಿದ್ದಾರೆ. ಇಂತಹವರಿಗೆ ಮನೆ ಇಲ್ಲ, ಇನ್ನೆಲ್ಲಿ ರಾಷ್ಟ್ರ ಧ್ವಜ ಹಾರಿಸುತ್ತಾರೆ. ಮೊದಲು ಅವರಿಗೆ ಬದುಕು ಕೊಡಿ ಎಂದು ವಾಗ್ದಾಳಿ ಮಾಡಿದರು.

ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಂಕುಚಿತ ಭಾವನೆ ಎಷ್ಟಿದೆ ಅಂದರೆ ಮೊದಲ ಪ್ರಧಾನಿ ನೆಹರುರವರನ್ನೇ ರಾಜ್ಯ ಸರ್ಕಾರ ಕಡೆಗಣಿಸಿದೆ. ನೆಹರು ಕುಟುಂಬ ದೇಶಕ್ಕೆ ದೊಡ್ಡ ಮಟ್ಟದ ಕೊಡುಗೆ ಕೊಟ್ಟಿದೆ. ಇದು ಸಣ್ಣತನದ ರಾಜಕಾರಣವೆಂದು ಎಂದು ಅಸಮಧಾನ ವ್ಯಕ್ತಪಡಿಸದರು.

ದೇಶಪ್ರೇಮದ ಹೆಸರಿನಲ್ಲಿ ದೇಶವನ್ನು ಚಿದ್ರ ಮಾಡುತ್ತಿದ್ದಾರೆ. ಸಂವಿಧಾನ ವ್ಯವಸ್ಥೆಯ ಚಿತ್ರಣ ಬುಡಮೇಲು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮುಂದಾಲೋಚನೆ ಇಲ್ಲ ರಾಷ್ಟ್ರಧ್ವಜಕ್ಕೆ ಗೌರವ ಹೆಚ್ಚಿಸಲು ನಾಳೆ ಪಾದಯಾತ್ರೆ ಹಮ್ಮಿಕೊಂಡಿಲ್ಲ. ಸಿದ್ದರಾಮೋತ್ಸವಕ್ಕೆ ಟಕ್ಕರ್ ಕೊಡಲು ಅಂತ ಅವರೇ ಹೇಳಿಕೊಂಡಿದ್ದಾರೆ ಎಂದು ಹೇಳಿದರು.

ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್‌ ಫ್ಲೆಕ್ಸ್ ಹರಿದ ವಿಚಾರವಾಗಿ ಮಾತನಾಡಿದ ಅವರು ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಇದಕ್ಕೆ ಬೆಂಕಿ ಇಡೋ‌ ಕೆಲಸ ಮಾಡಬೇಡಿ ಎಂದು ಮಾತನಾಡಿದರು.

ಮತ್ತಷಟ್ಟು ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:57 pm, Sun, 14 August 22