ತುಮಕೂರು: 14 ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಹೆಚ್ಚಳ ಮಾಡಿದೆ. ಆದರೆ ಕೊಬ್ಬರಿ ಬೆಳೆ ಪಾತಾಳಕ್ಕೆ ಇಳಿಯುತ್ತಿದೆ. ಕೂಡಲೇ ನಫೇಡ್ ಮಧ್ಯ ಪ್ರವೇಶಿಸಿ ಬೆಂಬಲ ಬೆಲೆ ಘೋಷಿಸಬೇಕು ಎಂದು ಮಾಜಿ ಸಂಸದ ಮುದ್ದಹನುಮೇಗೌಡ (S. P. Muddahanumegowda) ಆಗ್ರಹಿಸಿದರು. ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 18 ಸಾವಿರದಿಂದ 8 ಸಾವಿರ ಬೆಲೆಗೆ ಇಳಿದಿದೆ. ಕೊಬ್ಬರಿ ಇಳುವರಿ ಹಾಗೂ ಬೆಲೆ ಎರಡು ಕುಸಿದಿದೆ. ಕೊಬ್ಬರಿಗೆ ಬೆಂಬಲ ಬೆಲೆ 11.720 ರೂಪಾಯಿಯನ್ನು ಘೋಷಣೆ ಮಾಡಲಾಗಿದೆ. 16,300 ರೂಪಾಯಿನಷ್ಟು ಬೆಂಬಲ ಬೆಲೆಯನ್ನು ನೀಡಬೇಕೆಂದು ಕೃಷಿ ಇಲಾಖೆ ಹೇಳಿದೆ ಎಂದರು.
ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ಕೂಡ ಕೇಂದ್ರಕ್ಕೆ ಬೆಂಬಲ ಬೆಲೆ ನೀಡುವಂತೆ ಮನವಿ ಮಾಡಿದ್ದಾರೆ. ಬೆಲೆ ಕಡಿಮೆ ಪರಿಣಾಮ ಉತ್ಪಾದನೆ ಕೂಡ ಕಡಿಮೆಯಾಗುತ್ತಿದೆ. ಬೆಲೆ ಕುಸಿತದ ಹಿಂದಿನ ಕಾರಣ ಕಂಡುಹಿಡಿಯ ಬೇಕು. ಇಲ್ಲದಿದ್ದರೆ ಜಿಲ್ಲೆಯಲ್ಲಿ ತೆಂಗು ಬೆಳೆ ಕಡಿಮೆಯಾಗಲಿದೆ. ಬೆಂಬಲ ಬೆಲೆ ಘೋಷಿಸುವಂತೆ ಪ್ರಧಾನಿಗೆ ಪತ್ರ ಬರೆಯುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: MSP List: ಕೇಂದ್ರದಿಂದ ಎಂಎಸ್ಪಿ ಹೆಚ್ಚಳ; ರಾಗಿ, ಭತ್ತ ಸೇರಿ ಯಾವ್ಯಾವ ಬೆಳೆಗೆ ಕನಿಷ್ಠ ಬೆಲೆ ಎಷ್ಟಿದೆ? ಇಲ್ಲಿದೆ ಪಟ್ಟಿ
ಕೇಂದ್ರ ಸರ್ಕಾರ ಜೂನ್ 7ರಂದು 14 ಮುಂಗಾರು ಬೆಳೆಗಳಿಗೆ ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಿದೆ. ಭತ್ತ, ರಾಗಿ, ಜೋಳ, ಹೆಸರುಕಾಳು ಇತ್ಯಾದಿ ಬೆಳೆಗಳಿವೆ. ಭತ್ತಕ್ಕೆ ಎಂಎಸ್ಪಿಯನ್ನು ಕ್ವಿಂಟಾಲ್ಗೆ 143 ರೂನಷ್ಟು ಏರಿಸಲಾಗಿದೆ.
ಹೆಸರುಕಾಳಿಗೆ ಬೆಂಬಲ ಬೆಲೆ ಬರೋಬ್ಬರಿ 803 ರೂನಷ್ಟು ಹೆಚ್ಚಳವಾಗಿದೆ. ಕ್ವಿಂಟಾಲ್ ರಾಗಿಗೆ 268 ರೂಗಳಷ್ಟು ಎಂಎಸ್ಪಿ ಹೆಚ್ಚಿಸಲಾಗಿದೆ. ಈ ವರ್ಷದ ಹಿಂಗಾರು ಬೆಳೆಗಳಿಗೆ ಸರ್ಕಾರ 2022ರ ನವೆಂಬರ್ನಲ್ಲಿ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:11 pm, Thu, 8 June 23