MSP List: ಕೇಂದ್ರದಿಂದ ಎಂಎಸ್​ಪಿ ಹೆಚ್ಚಳ; ರಾಗಿ, ಭತ್ತ ಸೇರಿ ಯಾವ್ಯಾವ ಬೆಳೆಗೆ ಕನಿಷ್ಠ ಬೆಲೆ ಎಷ್ಟಿದೆ? ಇಲ್ಲಿದೆ ಪಟ್ಟಿ

2023-24, List Of New MSP For 20 Crops: ಬೇಸಿಗೆ ಬೆಳೆ ಅಥವಾ ಮುಂಗಾರು ಬೆಳೆಗಳಿಗೆ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದೆ. ಈ ಹಿಂದೆ ಹಿಂಗಾರು ಬೆಳೆಗಳಿಗೂ ಸರ್ಕಾರ ಎಂಎಸ್​ಪಿ ಹೆಚ್ಚಿಸಿತ್ತು. ಒಟ್ಟು 20 ಬೆಳೆಗಳ ಪರಿಷ್ಕೃತ ಬೆಂಬಲ ಬೆಲೆ ಇಲ್ಲಿದೆ...

MSP List: ಕೇಂದ್ರದಿಂದ ಎಂಎಸ್​ಪಿ ಹೆಚ್ಚಳ; ರಾಗಿ, ಭತ್ತ ಸೇರಿ ಯಾವ್ಯಾವ ಬೆಳೆಗೆ ಕನಿಷ್ಠ ಬೆಲೆ ಎಷ್ಟಿದೆ? ಇಲ್ಲಿದೆ ಪಟ್ಟಿ
ಕೃಷಿಕರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 07, 2023 | 4:25 PM

ನವದೆಹಲಿ: ಕೇಂದ್ರ ಸರ್ಕಾರ ಜೂನ್ 7ರಂದು 14 ಮುಂಗಾರು ಬೆಳೆಗಳಿಗೆ (Kharif Crops) ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಿದೆ. ಭತ್ತ, ರಾಗಿ, ಜೋಳ, ಹೆಸರುಕಾಳು ಇತ್ಯಾದಿ ಬೆಳೆಗಳಿವೆ. ಭತ್ತಕ್ಕೆ ಎಂಎಸ್​ಪಿಯನ್ನು ಕ್ವಿಂಟಾಲ್​ಗೆ 143 ರೂನಷ್ಟು ಏರಿಸಲಾಗಿದೆ. ಹೆಸರುಕಾಳಿಗೆ ಬೆಂಬಲ ಬೆಲೆ ಬರೋಬ್ಬರಿ 803 ರೂನಷ್ಟು ಹೆಚ್ಚಳವಾಗಿದೆ. ಕ್ವಿಂಟಾಲ್ ರಾಗಿಗೆ 268 ರೂಗಳಷ್ಟು ಎಂಎಸ್​ಪಿ ಹೆಚ್ಚಿಸಲಾಗಿದೆ. ಈ ವರ್ಷದ ಹಿಂಗಾರು ಬೆಳೆಗಳಿಗೆ (Rabi Crops) ಸರ್ಕಾರ 2022ರ ನವೆಂಬರ್​ನಲ್ಲಿ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿತ್ತು. ಯಾವ್ಯಾವ ಬೆಳೆಗಳಿಗೆ ಎಷ್ಟೆಷ್ಟು ಬೆಂಬಲ ಬೆಲೆ ಹೆಚ್ಚಿಸಲಾಗಿದೆ, ಈ ಪಟ್ಟಿಗಳು ಇಲ್ಲಿವೆ

2023-24ರಲ್ಲಿ ಮುಂಗಾರು ಬೆಳೆಗೆ ಸರ್ಕಾರ ಪರಿಷ್ಕರಿಸಿರುವ ಎಂಎಸ್​ಪಿ ದರ (ಕ್ವಿಂಟಾಲ್​ಗೆ):

  1. ಭತ್ತ ಸಾಮಾನ್ಯ: 2040 ರೂನಿಂದ 2183 ರೂಗೆ ಏರಿಕೆ
  2. ಭತ್ತ ಗ್ರೇಡ್ ಎ: 2060ರಿಂದ 2203 ರೂಗೆ ಏರಿಕೆ
  3. ಜೋಳ (ಹೈಬ್ರಿಡ್): 2970 ರೂನಿಂದ 3180 ರೂಗೆ ಏರಿಕೆ
  4. ಜೋಳ (ಮಾಳದಂಡಿ): 2990 ರೂನಿಂದ 3225 ರೂಗೆ ಏರಿಕೆ
  5. ಮೆಕ್ಕೆ ಜೋಳ: 1,962 ರೂನಿಂದ 2090 ರೂಗೆ ಏರಿಕೆ
  6. ಬಿಳಿ ಜೋಳ (ಬಾಜ್ರ): 2,350 ರೂನಿಂದ 2500 ರೂಗೆ ಏರಿಕೆ
  7. ರಾಗಿ: 3578 ರೂನಿಂದ 3846 ರೂಗೆ ಏರಿಕೆ
  8. ತೊಗರಿಬೇಳೆ: 6,600 ರೂನಿಂದ 7,000 ರೂಗೆ ಏರಿಕೆ
  9. ಹೆಸರುಕಾಳು: 7,755 ರೂನಿಂದ 8558 ರೂಗೆ ಏರಿಕೆ
  10. ಶೇಂಗಾ: 5,850 ರೂ
  11. ಉದ್ದಿನಬೇಳೆ: 6,600 ರೂನಿಂದ 6950 ರೂಗೆ ಏರಿಕೆ
  12. ಸೋಯಾಬೀನ್ (ಹಳದಿ): 4,300 ರೂನಿಂದ 4600 ರೂಗೆ ಏರಿಕೆ
  13. ಕಡಲೆಕಾಯಿ: 5850 ರೂನಿಂದ 6377 ರೂಗೆ ಏರಿಕೆ
  14. ಸೂರ್ಯಕಾಂತಿ ಬೀಜ: 6400 ರೂನಿಂದ 6760 ರೂಗೆ ಏರಿಕೆ
  15. ಬಿಳಿ ಎಳ್ಳು: 7830 ರೂನಿಂದ 8635 ರೂಗೆ ಏರಿಕೆ
  16. ಕಪ್ಪು ಎಳ್ಳು: 7287 ರೂನಿಂದ 7734 ರೂಗೆ ಏರಿಕೆ
  17. ಹತ್ತಿ (ಮಧ್ಯಮ): 6080ರೂನಿಂದ 6620 ರೂಗೆ ಏರಿಕೆ
  18. ಹತ್ತಿ (ಉದ್ದದ್ದು): 6380 ರೂನಿಂದ 7020 ರೂಗೆ ಏರಿಕೆ

ಇದನ್ನೂ ಓದಿKharif Crops: ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಂಪುಟ ಅನುಮೋದನೆ

ಹಿಂಗಾರು ಬೆಳೆಗಳಿಗೆ ಇರುವ ಎಂಎಸ್​ಪಿ ದರ (2023-24)

  1. ಗೋಧಿ: ಕ್ವಿಂಟಾಲ್​ಗೆ 2,125 ರೂ
  2. ಬಾರ್ಲಿ: 1,634 ರೂ
  3. ಸಾಸಿವೆ: 5,450 ರೂ
  4. ಅವರೆ: 6,000 ರೂ
  5. ಕಡಲೆ: 5,335 ರೂ
  6. ಕುಸುಮಬೀಜ (Safflower Seeds): 5,650 ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್