AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI MPC Meet: ಆರ್​ಬಿಐ ಎಂಪಿಸಿ ಸಭೆ ಇಂದು ಮುಕ್ತಾಯ; ರೆಪೋ ದರ ಹೆಚ್ಚಳವಾಗುತ್ತಾ? ಏನಿದೆ ನಿರೀಕ್ಷೆ?; ಇಂದು ಆಗಲಿದೆ ಘೋಷಣೆ

Expectations On RBI MPC Meet: ಎಲ್ಲರ ಗಮನವು ರೆಪೋ ದರದ ಬಗ್ಗೆ ಆರ್​ಬಿಐ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನೆಟ್ಟಿದೆ. ವರದಿಗಳ ಪ್ರಕಾರ ಶೇ. 6.50ರಷ್ಟಿರುವ ರೆಪೋ ದರದಲ್ಲಿ ಈ ಬಾರಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

RBI MPC Meet: ಆರ್​ಬಿಐ ಎಂಪಿಸಿ ಸಭೆ ಇಂದು ಮುಕ್ತಾಯ; ರೆಪೋ ದರ ಹೆಚ್ಚಳವಾಗುತ್ತಾ? ಏನಿದೆ ನಿರೀಕ್ಷೆ?; ಇಂದು ಆಗಲಿದೆ ಘೋಷಣೆ
ಆರ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:Jun 08, 2023 | 9:43 AM

Share

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿಯ (RBI Monetary Policy Committee) 3 ದಿನಗಳ ಸಭೆ ಇಂದು ಮುಕ್ತಾಯಗೊಳ್ಳುತ್ತಿದೆ. ಜೂನ್ 6ರಂದು ಆರಂಭವಾದ ಈ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ನೇತೃತ್ವದಲ್ಲಿ ಎಂಪಿಸಿಯ ಐವರು ಸದಸ್ಯರು ಆರ್ಥಿಕ ಮತ್ತು ಹಣಕಾಸು ಪರಿಸ್ಥಿತಿ ಬಗ್ಗೆ ಗಹನವಾಗಿ ಚರ್ಚಿಸಿದ್ದಾರೆ. ಹಣಕಾಸು ಹರಿವು, ಹಣದುಬ್ಬರ ನಿಯಂತ್ರಣ, ಫೋರೆಕ್ಸ್ ನಿಧಿ ಹೆಚ್ಚಳ ಇತ್ಯಾದಿ ಬಗ್ಗೆ ಚರ್ಚೆಗಳಾಗಿವೆ. ಇದೆಲ್ಲದರ ನಡುವೆ ಎಲ್ಲರ ಗಮನವು ರೆಪೋ ದರದ ಬಗ್ಗೆ ಆರ್​ಬಿಐ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನೆಟ್ಟಿದೆ. ವರದಿಗಳ ಪ್ರಕಾರ ಶೇ. 6.50ರಷ್ಟಿರುವ ರೆಪೋ ದರದಲ್ಲಿ (Repo Rate) ಈ ಬಾರಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಹಣದುಬ್ಬರ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ರೆಪೋ ದರ ಹೆಚ್ಚಿಸುವ ಗೋಜಿಗೆ ಹೋಗದಿರಬಹುದು.

ಮಳೆಗಾಲದ ಮಹಿಮೆ ನೋಡಿದ ಬಳಿಕ ರೆಪೋ ದರ ಪರಿಷ್ಕರಣೆ ಸಾಧ್ಯತೆ

ರೆಪೋ ದರ ಎಂಬುದು ಆರ್​ಬಿಐನಂತಹ ಸೆಂಟ್ರಲ್ ಬ್ಯಾಂಕುಗಳಿಗೆ ಇರುವ ಪ್ರಮುಖ ಅಸ್ತ್ರವಾಗಿದೆ. ಇದನ್ನು ಸುಖಾಸುಮ್ಮನೆ ಬಳಸುವುದಿಲ್ಲ. ರೆಪೋ ದರ ಏರಿದರೆ ಹಣಕಾಸು ಮಾರುಕಟ್ಟೆಯಲ್ಲಿ ಬೇರೆ ರೀತಿಯ ಪರಿಣಾಮ ಬೀರುತ್ತದೆ. ರೆಪೋ ದರ ಕಡಿಮೆ ಆದರೆ ಇನ್ನೊಂದು ರೀತಿಯ ಪರಿಣಾಮ ಬೀರುತ್ತದೆ. ಶೇ. 7ಕ್ಕಿಂತ ಮೇಲ್ಮಟ್ಟದಲ್ಲಿದ್ದ ಹಣದುಬ್ಬರವನ್ನು ಶೇ. 4.7ಕ್ಕೆ ತರಲು ಆರ್​ಬಿಐ ಉಪಯೋಗಿಸಿದ್ದು ಇದೇ ರೆಪೋ ದರ ಏರಿಕೆಯ ಅಸ್ತ್ರವನ್ನೇ. ಶೇ. 4.7 ಎಂಬುದು ಅರ್​ಬಿಐ ಇಟ್ಟುಕೊಂಡಿದ್ದ ಗುರಿಯ ವ್ಯಾಪ್ತಿಯಲ್ಲಿಯೆ ಇದೆ. ಹೀಗಾಗಿ, ರೆಪೋ ದರದ ಸತತ ಏರಿಕೆಗೆ ಆರ್​ಬಿಐ ಸದ್ಯಕ್ಕೆ ಅಲ್ಪವಿರಾಮ ಇಡಲು ಮುಂದಾಗಬಹುದು.

ಇದನ್ನೂ ಓದಿMSP List: ಕೇಂದ್ರದಿಂದ ಎಂಎಸ್​ಪಿ ಹೆಚ್ಚಳ; ರಾಗಿ, ಭತ್ತ ಸೇರಿ ಯಾವ್ಯಾವ ಬೆಳೆಗೆ ಕನಿಷ್ಠ ಬೆಲೆ ಎಷ್ಟಿದೆ? ಇಲ್ಲಿದೆ ಪಟ್ಟಿ

ಈಗ ಮಳೆಗಾಲ ಶುರುವಾಗುತ್ತಿರುವುದರಿಂದ ಆರ್​ಬಿಐ ಕಾದುನೋಡುವ ತಂತ್ರ ಅನುಸರಿಸುತ್ತಿದೆ. ಮಳೆ ಪ್ರಮಾಣ ಚೆನ್ನಾಗಿ ಬಂದರೆ ಹಣದುಬ್ಬರ ಇನ್ನಷ್ಟು ಇಳಿಯಬಹುದು. ಹಾಗೇನಾದರೂ ಆದಲ್ಲಿ ಇನ್ನೆರಡು ತಿಂಗಳಿಗೆ ನಡೆಯುವ ಮುಂದಿನ ಎಂಪಿಸಿ ಸಭೆಯಲ್ಲಿ ರೆಪೋ ದರವನ್ನು ಇಳಿಸುವ ಸಾಧ್ಯತೆಯೂ ಇರುತ್ತದೆ. ಒಂದು ವೇಳೆ ಮಳೆ ನಿರೀಕ್ಷಿತ ರೀತಿಯಲ್ಲಿ ಆಗದೇ ಕೃಷಿ ಉತ್ಪಾದನೆ ಕಡಿಮೆ ಆಗಿಬಿಟ್ಟರೆ ಅದರ ಪರಿಣಾಮವಾಗಿ ಹಣದುಬ್ಬರ ಶೇ 5ಕ್ಕಿಂತ ಹೆಚ್ಚಾಗಬಹುದು. ಆಗ ಆರ್​ಬಿಐ ಮುಂದಿನ ಸಭೆಯಲ್ಲಿ ರೆಪೋ ದರ ಹೆಚ್ಚಿಸುವ ಕ್ರಮ ಕೈಗೊಳ್ಳಬಹುದು.

ಗರಿಗೆದರಿದ ಷೇರುಮಾರುಕಟ್ಟೆಗಳು

ಇಂದು ಆರ್​ಬಿಐ ಎಂಪಿಸಿ ಸಭೆಯ ನಿರ್ಧಾರಗಳು ಪ್ರಕಟವಾಗಲಿದ್ದು, ಸಾಕಷ್ಟು ಪಾಸಿಟಿವ್ ನಿರೀಕ್ಷೆಗಳಿರುವ ಹಿನ್ನೆಲೆಯಲ್ಲಿ ಷೇರುಪೇಟೆ ಗರಿಗೆದರಿದೆ. ನಿನ್ನೆ ಜೂನ್ 6ರಂದು ಸೆನ್ಸೆಕ್ಸ್ ಸೂಚ್ಯಂಕ 63,000 ಅಂಕಗಳ ಮಟ್ಟಕ್ಕೆ ಹೋಗಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ ಸೆನ್ಸೆಕ್ಸ್ ಈ ಮಟ್ಟ ಮುಟ್ಟಿದ್ದು. ಇನ್ನು, ನಿಫ್ಟಿ50 ಸೂಚ್ಯಂಕ ಕಳೆದ ಬಾರಿಯ ಆರ್​ಬಿಐ ಎಂಪಿಸಿ ಸಭೆಯಲ್ಲಿದ್ದುದಕ್ಕಿಂತ ಈ ಬಾರಿ 1,000 ಅಂಕಗಳನ್ನು ಹೆಚ್ಚು ಮಾಡಿಕೊಂಡಿರುವುದು ವಿಶೇಷ.

ಇದೇ ಸಕಾರಾತ್ಮಕ ಪರಿಣಾಮಗಳು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಪತ್ರಿಕಾಗೋಷ್ಠಿ ಬಳಿಕವೂ ಮುಂದುವರಿಯುತ್ತದಾ ಕಾದುನೋಡಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:47 am, Thu, 8 June 23

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್