ಬಿಪಿಎಲ್ ಕಾರ್ಡ್​ಗೆ ಫುಲ್​ ಡಿಮ್ಯಾಂಡ್: ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳ ಲಾಭ​ ಪಡೆಯಲು ಮುಂದಾದ ಜನ

|

Updated on: May 26, 2023 | 2:43 PM

ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಬಿಪಿಎಲ್ ಕಾರ್ಡ್​ಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಪ್ರತಿದಿನ 500ಕ್ಕೂ ಜನ ಹೆಚ್ಚು ಅರ್ಜಿಗಳು ಸಲ್ಲಿಕೆ ಮಾಡಲಾಗುತ್ತಿದೆ.

ಬಿಪಿಎಲ್ ಕಾರ್ಡ್​ಗೆ ಫುಲ್​ ಡಿಮ್ಯಾಂಡ್: ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳ ಲಾಭ​ ಪಡೆಯಲು ಮುಂದಾದ ಜನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಜನರು ಸೈಬರ್​ ಸೆಂಟರ್​​ಗಳತ್ತ ಮುಖ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಬಿಪಿಎಲ್ ಕಾರ್ಡ್ (BPL card) ​ಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಪ್ರತಿದಿನ 500ಕ್ಕೂ ಜನ ಹೆಚ್ಚು ಅರ್ಜಿಗಳು ಸಲ್ಲಿಕೆ ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ  ಸರ್ಕಾರದ ಹಲವು ಭಾಗ್ಯ, ಗ್ಯಾರಂಟಿ ಘೋಷಣೆ ಹಿನ್ನೆಲೆ ಬಿಪಿಎಲ್ ಕಾರ್ಡ್ ಹೊಂದಿರಬೇಕು ಎಂಬ ಮಾನದಂಡ‌ ಕಾರನ ಇದೀಗ ಸರ್ಕಾರದ ಉಚಿತ ಸ್ಕೀಂ ಪಡೆಯಲು ಮುಗಿಬಿದ್ದ ಬಡ, ಮಧ್ಯಮ ವರ್ಗದ ಜನತೆ ಮುಂದಾಗಿದ್ದಾರೆ.

4 ಕೋಟಿ ಜನರಿಗೆ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹಂಚಿಕೆ

ಕಳೆದೆರಡು ವರ್ಷದಿಂದ ಇಲ್ಲಿಯವರೆಗೆ 2.87 ಲಕ್ಷ ಬಿಪಿಎಲ್ ಕಾರ್ಡ್, 46,576 ಎಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಲಾಗಿದೆ. ಇಲ್ಲಿಯವರೆಗೆ 4 ಕೋಟಿ ಜನರಿಗೆ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹಂಚಿಕೆ ಮಾಡಲಾಗಿದೆ. ಸದ್ಯ ರಾಷ್ಟ್ರೀಯ ಆಹಾರ ಹಕ್ಕು ಕಾಯಿದೆ ಮಿತಿ ತಲುಪಿರುವ ಕರ್ನಾಟಕ‌ ರಾಜ್ಯ, ಇನ್ಮುಂದೆ BPL ಕಾರ್ಡ್ ನೀಡಲು ಹಣಕಾಸು ಇಲಾಖೆ ಅನುಮತಿ ಅಗತ್ಯವಾಗಿದೆ.

ಇದನ್ನೂ ಓದಿ: ಗ್ಯಾರಂಟಿ ಕಾರ್ಡ್​ ಹೆಸರಲ್ಲಿ ಕಾಂಗ್ರೆಸ್​ನಿಂದ ಕುತಂತ್ರ ರಾಜಕಾರಣ; ಹೆಚ್​ ಡಿ ಕುಮಾರಸ್ವಾಮಿ

ಅತಿ ಹೆಚ್ಚು ಬಿಪಿಎಲ್ ಕಾರ್ಡ್​ಗಳಿಗೆ ಅರ್ಜಿ ಸಲ್ಲಿಸಿದ ಜಿಲ್ಲೆಗಳು 

  • ಬೆಳಗಾವಿ 27,411,
  • ವಿಜಯಪುರ 17,228,
  • ಬೆಂಗಳೂರು 12,765,
  • ಬೀದರ್ 12, 498.

ಹೊಸ ಕಾರ್ಡ್​ಗಳಿಗೆ ರಾಜ್ಯ ಸರ್ಕಾರದಿಂದ ಒಪ್ಪಿಗೆ ಅಗತ್ಯ: ಜ್ಞಾನೇಂದ್ರ ಕುಮಾರ್

ಆಹಾರ ಇಲಾಖೆ ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರ ಕುಮಾರ್​ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಬಿಪಿಎಲ್​​ ಕಾರ್ಡ್​​ಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ. ಆದರೆ ಈಗಿನ BPL ಕಾರ್ಡ್​​​ಗಳಿಗೆ ಒಪ್ಪಿಗೆ ಕೊಡಲು ಆಗುವುದಿಲ್ಲ. ಹೊಸ ಕಾರ್ಡ್​ಗಳಿಗೆ ರಾಜ್ಯ ಸರ್ಕಾರದಿಂದ ಒಪ್ಪಿಗೆ ಪಡೆಯಬೇಕು. ಹೀಗಾಗಿ ಈಗ ಯಾವುದೇ ಹೊಸ ಕಾರ್ಡ್​​ಗಳನ್ನು ಮಾಡುತ್ತಿಲ್ಲ.

ಇದನ್ನೂ ಓದಿ; Congress 5 Guarantee: ಐದು ಗ್ಯಾರಂಟಿ ಜಾರಿಗೆಗೆ ಸದ್ದಿಲ್ಲದೆ ನಡೆದಿದೆ ಮಾಹಿತಿ ಸಂಗ್ರಹ

ಜೂನ್ ಅಥವಾ ಜುಲೈ ತಿಂಗಳಿನಿಂದ ಅರ್ಜಿ ಸ್ವೀಕರಿಸಲಾಗುತ್ತದೆ. ಹೀಗಾಗಿ ಆಹಾರ ಇಲಾಖೆ ವೆಬ್​​ಸೈಟ್ ಸಹ ಕ್ಲೋಸ್ ಮಾಡಿದ್ದೇವೆ. 2017 – 2 ಲಕ್ಷ, 2018 – 5 ಲಕ್ಷ , 2019 – 3 ಲಕ್ಷ ಮತ್ತು 2020ರಿಂದ 2023ರವರೆಗೂ 8 ಲಕ್ಷದಷ್ಟು ಅರ್ಜಿಗಳು ಬಂದಿವೆ.

3 ತಿಂಗಳ ಹಿಂದೆ ಒಂದೂವರೆ ಲಕ್ಷದಷ್ಟು BPL ಕಾರ್ಡ್​​​ ನೀಡಿದ್ದೇವೆ. ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳಿಗೆ BPL ಕಾರ್ಡ್ ಅವಶ್ಯಕತೆಯಿದೆ. ಹಾಗಾಗಿ ಕಳೆದ 15 ದಿನಗಳಿಂದ ಹೆಚ್ಚು ಅರ್ಜಿ ಸಲ್ಲಿಸುತ್ತಿದ್ದಾರೆ. ಜೊತೆಗೆ ನಮ್ಮ ಕಂಟ್ರೋಲ್ ರೂಮ್​ಗೂ ಪ್ರತಿದಿನ ಕರೆ ಬರುತ್ತಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.