ಕೋಲಾರ: ‘ಬಿಜೆಪಿಯಲ್ಲಿ ಇರುವವರು ಅಂಧ ಭಕ್ತರು, ಡೋಂಗಿಗಳು ಎಂದು ಅವರಿಗೆ ಗೊತ್ತಾಗಿದೆ. ಬಿಜೆಪಿಯಲ್ಲಿ ಕುದುರೆ ವ್ಯಾಪಾರದಲ್ಲಿ ಖರೀದಿಯಾಗಿರುವವರಿಗೆ ಬೆಲೆ, ಜಗದೀಶ್ ಶೆಟ್ಟರ್(Jagadish Shettar) ಒಬ್ಬ ಪ್ರಾಮಾಣಿಕ ವ್ಯಕ್ತಿ, ಜೊತೆಗೆ ಸಿಎಂ ಆಗಿದ್ದವರು. ಜಗದೀಶ್ ಶೆಟ್ಟರ್ರಂತಹ ನಾಯಕರು ರಾಜಕಾರಣದಲ್ಲಿ ಇರಬೇಕು. ಶೆಟ್ಟರ್ ನಮ್ಮ ಪಕ್ಷಕ್ಕೆ ಬಂದರೆ ಶಕ್ತಿ ಬರುತ್ತೆ ಎಂದು ವಿಪಕ್ಷ ನಾಯಕ ಹರಿಪ್ರಸಾದ್(Hariprasad)ಹೇಳಿದ್ದಾರೆ.
ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಿದ್ದು ಕೋಲಾರ ಸ್ಪರ್ಧೆಗೆ ಕೊಕ್ಕೆ ವಿಚಾರವಾಗಿ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ‘ಕೋಲಾರ ಟಿಕೆಟ್ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು, ಸಿದ್ದರಾಮಯ್ಯ ಅವರು ಈಗಾಗಲೇ ವರುಣಾದಲ್ಲಿ ನಿಲ್ಲುವ ತೀರ್ಮಾನ ಮಾಡಿದ್ದಾರೆ. ಅದೆಲ್ಲಾ ಸಿದ್ದರಾಮಯ್ಯ ವಿವೇಚನೆಗೆ ಬಿಟ್ಟಿದ್ದು. ಅಖಂಡ ಟಿಕೆಟ್ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ರಾಜಕೀಯ, ಸಾಮಾಜಿಕವಾಗಿ ಬ್ಯಾಲೆನ್ಸ್ ಮಾಡಬೇಕು. ಹೀಗಾಗಿ ಕೆಲವರಿಗೆ ಟಿಕೆಟ್ ಹೋಲ್ಡ್ ಆಗಿದೆ. ಬಿಜೆಪಿ ಓಟ್ ಬ್ಯಾಂಕ್ ಬಗ್ಗೆ ಮಾತಾಡೋದು ನಿಲ್ಲಿಸಿದ್ರೆ ಒಳ್ಳೆಯದು. ಚುನಾವಣೆ ಟೈಮಲ್ಲಿ ಮೊಸಳೆ ಕಣ್ಣೀರು ಹಾಕೋದು ಬೇಡ ಎನ್ನುವ ಮೂಲಕ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
ಇದನ್ನೂ ಓದಿ:ಒಂದು ಪಕ್ಷ ಚುನಾವಣೆ ಟಿಕೆಟ್ ಆಫರ್ ಮಾಡಿತ್ತು, ಆದರೆ ಪ್ರಸ್ತುತ ರಾಜಕೀಯ ಭೀಕರ: ನಾಗತಿಹಳ್ಳಿ ಚಂದ್ರಶೇಖರ್
ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ರಾಜ್ಯದಾದ್ಯಂತ ಆಕಾಂಕ್ಷಿಗಳ ಬಂಡಾಯ ಜೋರಾಗಿದೆ. ಬಿಜೆಪಿಯ ಪ್ರಬಲ ನಾಯಕರುಗಳು ಪಕ್ಷ ತೊರೆದು ಹೋಗುತ್ತಿದ್ದಾರೆ. ಅದರಂತೆ ಇಂದು(ಏ.16) ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:44 am, Sun, 16 April 23