ಹಾಸನ ಜೆಡಿಎಸ್ ಟಿಕೆಟ್ ಫೈಟ್: ಕೊನೆಗೂ ಗೊಂದಲ ನಿವಾರಣೆಗೆ ಮಧ್ಯಪ್ರವೇಶಿಸಿದ ದಳಪತಿ

Karnataka Election 2023: ಜೆಡಿಎಸ್ ಭದ್ರಕೋಟೆ, ದಳಪತಿಗಳ ಕರ್ಮಭೂಮಿ ಹಾಸನದಲ್ಲಿ ಈ ಬಾರಿ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರ ದೊಡ್ದ ಸದ್ದು ಮಾಡುತ್ತಿದೆ. ಹಾಸನದ ಜಿಲ್ಲಾ ಕೇಂದ್ರದಿಂದ ಯಾರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎನ್ನುವ ಕುತೂಹಲ ಹೆಚ್ಚಿಸಿದೆ.

ಹಾಸನ ಜೆಡಿಎಸ್ ಟಿಕೆಟ್ ಫೈಟ್: ಕೊನೆಗೂ ಗೊಂದಲ ನಿವಾರಣೆಗೆ ಮಧ್ಯಪ್ರವೇಶಿಸಿದ ದಳಪತಿ
ಹೆಚ್​.ಡಿ.ದೇವೇಗೌಡ (ಎಡ ಚಿತ್ರ)
Follow us
Rakesh Nayak Manchi
|

Updated on: Feb 25, 2023 | 8:33 PM

ಹಾಸನ: ಕ್ಷೇತ್ರದ ಜೆಡಿಎಸ್‌ ಪಕ್ಷದ ಟಿಕೆಟ್‌ಗಾಗಿ ದಳಪತಿ ಕುಟುಂಬದಲ್ಲೇ ಗುದ್ದಾಟ (Hassan JDS Ticket Fight) ನಡೆಯುತ್ತಿದ್ದು, ಹಾಸನದ ಜಿಲ್ಲಾ ಕೇಂದ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ (Hassan JDS Candidate) ಯಾರು ಕಣಕ್ಕಿಳಿಯುತ್ತಾರೆ ಎನ್ನುವ ಕುತೂಹಲ ಹೆಚ್ಚಿಸಿದೆ. ಹಾಸನ ಕ್ಷೇತ್ರದ ಟಿಕೆಟ್​ಗಾಗಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ (HD Revanna) ಪತ್ನಿ ಭವಾನಿ (Bhavani Revanna) ಅವರು ಕಣಕ್ಕಿಳಿಯಲು ಮುಂದಾಗಿದ್ದು, ಟಿಕೆಟ್​ಗಾಗಿ ಪಟ್ಟು ಹಿಡಿದು ಕ್ಷೇತ್ರ ಪರಿಯಟನೆ ನಡೆಸುತ್ತಿದ್ದಾರೆ. ಮುಂದುವರಿದ ರಾಜಕೀಯ ಬೆಳವಣಿಗೆಯಲ್ಲಿ ರೇವಣ್ಣ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಮುಂದಾಗಿದ್ದರು. ಹೀಗೆ ಕುಟುಂಬದೊಳಗೆ ಟಿಕೆಟ್​ಗಾಗಿ ತೀವ್ರ ಪೈಪೋಟಿ ನಡೆಯುತ್ತಿದ್ದಾಗಲೂ ಮೌನವಾಗಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ (H.D.Deve Gowda) ಅವರು ಕೊನೆಗೂ ಗೊಂದಲ ನಿವಾರಣೆಗೆ ಮಧ್ಯಪ್ರವೇಶಿಸಿದ್ದಾರೆ.

ನಾಳೆ (ಫೆಬ್ರವರಿ 26) ನಿಗದಿಯಾಗಿದ್ದ ಸಭೆಯನ್ನೇ ದೇವೇಗೌಡ ಅವರು ರದ್ದುಗೊಳಿಸಿದ್ದಾರೆ ಎಂದು ಟಿವಿ9ಗೆ ಜೆಡಿಎಸ್‌ ಪಕ್ಷದ ಉನ್ನತ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಮಾಜಿ ಮುಖ್ಯಮಂತ್ರಿಯೂ ಆಗಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್​.ಡಿ.ಕುಮಾರಸ್ವಾಮಿ ಅವರು ಹಾಸನ ಕ್ಷೇತ್ರದ ಸುಮಾರು 300 ಪ್ರಮುಖ ಮುಖಂಡರ ಸಭೆಯನ್ನು ನಾಳೆ ಸಂಜೆ 4-30ಕ್ಕೆ ಬೆಂಗಳೂರಿನ ಜೆಪಿ ಭವನದಲ್ಲಿ ಆಯೋಜಿಸಿದ್ದರು. ಇಂದು ಬೆಳಿಗ್ಗೆ ಕೂಡ ಸಭೆ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಸಭೆ ನಡೆದರೆ ಹಾಸನ ಜಿಲ್ಲೆಯಲ್ಲಿ ರಾಜಕೀಯ ಗೊಂದಲ ಸೃಷ್ಟಿಯಾಗುವ ಆರೋಪ ಹಿನ್ನಲೆ ಯಾವುದೇ ಸಭೆ ನಡೆಸದಂತೆ ದೇವೇಗೌಡ ಅವರು ಸಭೆಯನ್ನೇ ರದ್ದುಮಾಡಿದ್ದಾರೆ.

ಇದನ್ನೂ ಓದಿ: Assembly polls: ಹಾಸನ ಕ್ಷೇತ್ರದ ಟಿಕೆಟ್ ತನಗೆ ಮಾತ್ರ ಅನ್ನೋದು ಭವಾನಿ ರೇವಣ್ಣಗೆ  ಖಾತರಿಯಾದಂತಿದೆ!  

ಸ್ವರೂಪ್ ಪರವಾಗಿ ಬ್ಯಾಟ್ ಬೀಸುತ್ತಾ ಕುಮಾರಸ್ವಾಮಿ ಸಭೆ ಕರೆದ ಹಿನ್ನಲೆಯಲ್ಲಿ ಮತ್ತೊಂದು ಗುಂಪಿನಲ್ಲಿ ಆತಂಕ ಸೃಷ್ಟಿಯಾಗಿತ್ತು. ಹಾಗಾಗಿಯೇ ಎಲ್ಲಾ ಗೊಂದಲಕ್ಕೆ ತೆರೆ ಎಳೆಯರು ಎಂಟ್ರಿಯಾದ ದೇವೇಗೌಡರು, ಸಭೆಯನ್ನ ರದ್ದುಮಾಡಿ ಟಿಕೇಟ್ ಗೊಂದಲ ನಿವಾರಣೆ ಅಖಾಡಕ್ಕೆ ಇಳಿದಿದ್ದಾರೆ. ಒಂದು ವಾರದ ಬಳಿಕ ತಾವೇ ಹಾಸನಕ್ಕೆ ಬಂದು ಟಿಕೇಟ್ ಗೊಂದಲಕ್ಕೆ ತೆರೆ ಎಳೆಯುವುದಾಗಿ ದೇವೇಗೌಡರು ಹೇಳಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಹಾಸನ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಎಚ್.ಎಸ್ ಪ್ರಕಾಶ್ ಕಳೆದ 2018ರ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಂಗೌಡ ವಿರುದ್ದ ಸೋಲುಂಡಿದ್ದರು. ಸೋಲಿನ ಬಳಿಕ ಮೃತಪಡುವ ಮುನ್ನ ಕುಮಾರಸ್ವಾಮಿ ಅವರನ್ನ ಪ್ರಕಾಶ್ ಕೊನೆಯಬಾರಿ ಭೇಟಿಯಾದಾಗ ನಿನ್ನ ಮಗನ ರಾಜಕೀಯ ಭವಿಷ್ಯ ನನಗೆ ಬಿಟ್ಟುಬಿಡು ಎಂದು ಮಾತು ಕೊಟ್ಟಿದ್ದರು. ಇದೇ ಮಾತಿಕೆ ಕಟ್ಟುಬಿದ್ದಿರೋ ಕುಮಾರಸ್ವಾಮಿ, ನಾಲ್ಕು ತಿಂಗಳ ಹಿಂದೆ ಎಚ್.ಎಸ್ ಪ್ರಕಾಶ್ ಸ್ಮರಣೆ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ಸ್ವರೂಪ್ ಹಾಸನದ ಜೆಡಿಎಸ್ ಅಭ್ಯರ್ಥಿ ಎಂದು ಪರೋಕ್ಷವಾಗಿ ಹೇಳಿದ್ರು. ಆದ್ರೆ ಸ್ವರೂಪ್ ಬದಲು ತಾನೇ ಅಭ್ಯರ್ಥಿ ಎಂದು ಭವಾನಿ ರೇವಣ್ಣ ಸ್ವಯಂ ಘೋಷಣೆ ಮಾಡಿಕೊಂಡಾಗ ಇಕ್ಕಟ್ಟಿಗೆ ಸಿಲುಕಿದ್ದ ಕುಮಾರಸ್ವಾಮಿ ಹಾಸನಕ್ಕೆ ನಮಗೆ ಸೂಕ್ತ ಅಭ್ಯರ್ಥಿ ಇದ್ದಾರೆ ಭವಾನಿಯವರು ಸದ್ಯಕ್ಕೆ ಅವಶ್ಯಕತೆ ಇಲ್ಲಾ ಎನ್ನೋ ಸಂದೇಶ ಕೊಟ್ಟಿದ್ದರು.

ಆದರೆ ಅಮ್ಮನ ಬೆನ್ನಿಗೆ ನಿಂತಿದ್ದ ವಿಧಾನಪರಿಷತ್ ಸದಸ್ಯ ಸೂರಜ್ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಟಿಕೆಟ್ ಯಾರಿಗೆ ಎಂದು ತೀರ್ಮಾನ ಮಾಡೋದು ಮಾಜಿ ಪ್ರಧಾನಿ ದೇವೇಗೌಡರು ಎನ್ನುವ ಮೂಲಕ ಚಿಕ್ಕಪ್ಪನಿಗೆ ಪರೋಕ್ಷವಾಗಿ ಸೆಡ್ಡು ಹೊಡೆದಿದ್ದರು. ಆದ್ರೆ ಪಟ್ಟು ಬಿಡದ ಕುಮಾರಸ್ವಾಮಿ ಪದೇ ಪದೇ ತಮ್ಮ ಅಭಿಪ್ರಾಯ ಹೇಳಿದಾಗ ಬೇರೆ ದಾರಿಯಿಲ್ಲದೆ ಹಾಸನದಿಂದ ಭವಾನಿ ರೇವಣ್ಣ ಸ್ಪರ್ಧೆ ಬೇಡ ಎಂದು ತೀರ್ಮಾನ ಮಾಡಿದ ರೇವಣ್ಣ ತಾವೇ ಹಾಸನದಿಂದ ಅಖಾಡಕ್ಕಿಳಿಯಲು ತೀರ್ಮಾನ ಮಾಡಿದ್ದರು.

ಇದನ್ನೂ ಓದಿ: ಹಾಸನ ಕ್ಷೇತ್ರವನ್ನು ನಾನು ಚಾಲೆಂಜ್​ ಆಗಿ ತೆಗೆದುಕೊಳ್ಳುತ್ತೇನೆ, ಹೆದರಿ ಓಡಿ ಹೋಗುವ ಪ್ರಶ್ನೆ ಇಲ್ಲ: ಹೆಚ್​.ಡಿ.ರೇವಣ್ಣ

ಹೊಳೆನರಸೀಪುರದಿಂದ ಭವಾನಿಯವರಿಗೆ ಟಿಕೆಟ್ ನೀಡಿ ಎನ್ನುವ ಒತ್ತಡ ಹೇರೋಕೆ ಶುರುಮಾಡಿದ್ರು ಆದ್ರೆ ಇದಕ್ಕೂ ಕುಮಾರಸ್ವಾಮಿ ಓಕೆ ಮಾಡದಿದ್ದಾಗ ಶಿವರಾತ್ರಿ ದಿನ ದೇವೇಗೌಡರ ಮನೆಯಲ್ಲಿ ಸಭೆ ಸೇರೋದು ಅಲ್ಲಿ ಹಾಸನದ ಟಿಕೆಟ್ ಬಗ್ಗೆ ಯಾರಿಗೆ ಎನ್ನೋದರ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಲಾಗಿತ್ತು, ಇದೀಗ ಜೆಡಿಎಸ್​ ವರಿಷ್ಠ ದೇವೇಗೌಡರು ಏನು ಹೇಳ್ತಾರೆ, ಭವಾನಿಗೆ ಹಾಸನದಿಂದ ಗ್ರೀನ್ ಸಿಗ್ನಲ್ ಸಿಗುತ್ತಾ, ಇಲ್ಲಾ ಹೊಳೆನರಸೀಪುರದಿಂದ ಸ್ಪರ್ಧೆಗೆ ಅಸ್ತು ಅಂತಾರಾ ಎನ್ನುವ ಕುತೂಹಲ ಮನೆ ಮಾಡಿದೆ.

ಒಟ್ಟಿನಲ್ಲಿ ದಳಪತಿಗಳ ತವರು ಹಾಸನ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರ ಕಗ್ಗಂಟಾಗಿ ಬದಲಾಗಿದ್ದು, ಕುಮಾರಸ್ವಾಮಿ ಇಚ್ಚೆಯಂತೆ ಸ್ವರೂಪ್ ಕಣಕ್ಕಿಳಿಯುತ್ತಾರಾ? ಅಥವಾ ಪ್ರೀತಂಗೌಡ ಅವರ ಸವಾಲು ಸ್ವೀಕಾರ ಮಾಡಿ ರೇವಣ್ಣ ಸ್ಪರ್ಧೆ ಮಾಡ್ತಾರಾ? ಇಲ್ಲಾ ತಮ್ಮ ಇಚ್ಚೆಯಂತೆ ಪಟ್ಟು ಬಿಡದೇ ಭವಾನಿಯೇ ಹಾಸನದಿಂಧ ಸ್ಪರ್ಧೆ ಮಾಡ್ತಾರಾ? ಈ ಎಲ್ಲಾ ಗೊಂದಲಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಯಾವ ರೀತಿ ತೆರೆ ಎಳೆಯುತ್ತಾರೆ ಎಂಬುದನ್ನು ತೆರೆ ಕಾದು ನೋಡಬೇಕಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ