ಹೆಚ್​ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ ಕಳ್ಳಮಳ್ಳ ಇದ್ದಹಾಗೆ: ಸಚಿವ ಆರ್‌.ಅಶೋಕ್‌ ವಾಗ್ದಾಳಿ

|

Updated on: Mar 04, 2023 | 8:03 PM

ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಕಳ್ಳಮಳ್ಳ ಇದ್ದ ಹಾಗೆ. ಇದೀಗ ಜೋಡೆತ್ತು ಹೋಗಿ ಕುಂಟೆತ್ತು ಆಗಿದೆ ಎಂದು ಸಚಿವ ಆರ್‌.ಅಶೋಕ್‌ ವಾಗ್ದಾಳಿ ಮಾಡಿದರು.

ಹೆಚ್​ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ ಕಳ್ಳಮಳ್ಳ ಇದ್ದಹಾಗೆ: ಸಚಿವ ಆರ್‌.ಅಶೋಕ್‌ ವಾಗ್ದಾಳಿ
ಸಚಿವ ಆರ್‌.ಅಶೋಕ್‌
Image Credit source: prajavani.net
Follow us on

ರಾಮನಗರ: ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಕಳ್ಳಮಳ್ಳ ಇದ್ದ ಹಾಗೆ. ಇದೀಗ ಜೋಡೆತ್ತು ಹೋಗಿ ಕುಂಟೆತ್ತು ಆಗಿದೆ ಎಂದು ಸಚಿವ ಆರ್‌.ಅಶೋಕ್‌ (R. Ashok) ವಾಗ್ದಾಳಿ ಮಾಡಿದರು. ತಾಲೂಕಿನ ಬಿಡದಿಯಲ್ಲಿ ನಡೆದ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ನಿಮ್ಮ ಆಯ್ಕೆ ಲಾಟರಿ‌ ಸಿಎಂ ಕಡೆ ಹೋಗಬಾರದು. ಸುಭದ್ರ ಸರ್ಕಾರ ಬೇಕು. ಬಾಂಬೆ ಕಡೆ ಓಡುವ ಸರ್ಕಾರ ಏಕೆ ಬೇಕು. ಇಷ್ಟು ವರ್ಷ ರಾಮನಗರ ಜನರು ಕಾಂಗ್ರೆಸ್‌, JDSಗೆ ಮತ ನೀಡಿದ್ದೀರಿ. ಆದರೆ ಜಿಲ್ಲೆಯಲ್ಲಿ ಯಾವ ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಬೆಂಗಳೂರು-ಮೈಸೂರು ಹೈವೇ ನಿರ್ಮಾಣದಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಪರಿಶ್ರಮವಿದೆ. ಆದರೆ ಸ್ಥಳೀಯ ಸಂಸದ ಹಾಗೂ ಶಾಸಕ ಏನು ಮಾಡಿದ್ದಾರೆೆಂದು ಕಿಡಿಕಾರಿದರು.

ಬರೀ ಜಗಳ ಮಾಡುವುದನ್ನ ಬಿಟ್ಟು ಬೇರೆ‌ ಏನೂ ಮಾಡಿಲ್ಲ. ಹೆಚ್‌.ಡಿ.ಕುಮಾರಸ್ವಾಮಿ ಸಿಎಂ ಆದರು. ಡಿಕೆ ಶಿವಕುಮಾರ ಪವರ್ ಮಿನಿಸ್ಟರ್​ ಆದರು. ಒಟ್ಟಿಗೆ ಬಂದು ನಾವು ಜೋಡೆತ್ತು ಅಂದ್ರು. ಆದರೆ ಅಭಿವೃದ್ಧಿ ಮಾಡಿದ್ರಾ. ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಹತ್ತು ತಿಂಗಳಿಗೆ ನೆಗೆದು ಬಿತ್ತು. ಹಲವರು ಓಡಿ ಹೋದರು. ಸರ್ಕಾರ ನಡೆಸಲು ಯೋಗ್ಯತೆ ಇಲ್ಲ. ಜೆಡಿಎಸ್ ಪಕ್ಷಕ್ಕೆ 130 ಸ್ಥಾನ ಬರಲು ಸಾಧ್ಯವೇ. ನಮಗೆ ಬರುವುದು ಬರೀ 20 ಸ್ಥಾನ ಅಂತಾ HDK ನನ್ನ ಬಳಿ ಹೇಳಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಶಿವಾಜಿ ಪ್ರತಿಮೆ ಕ್ರೆಡಿಟ್ ಪಾಲಿಟಿಕ್ಸ್​​​: ನಾಳೆ ಮತ್ತೊಮ್ಮೆ ಪ್ರತಿಮೆ ಉದ್ಘಾಟಿಸಲು ಲಕ್ಷ್ಮೀ ಹೆಬ್ಬಾಳ್ಕರ್​ ತಯಾರಿ​

ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಕಮಲ ಅರಳುತ್ತೆ: ಕಟೀಲು 

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ,​ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆದ್ದು ಬಿಜೆಪಿ ಅಧಿಕಾರ ಹಿಡಿಯಲಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಕಮಲ ಅರಳುತ್ತೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಿರುದ್ಯೋಗಿಗಳಾಗ್ತಾರೆ. ತಾಕತ್ತಿದ್ದರೆ ನಮ್ಮ ಅಶ್ವಮೇಧ ಯಾಗ ತಡೆಯಿರಿ. ಈ ಬಾರಿ ಜೆಡಿಎಸ್ ಪಕ್ಷ ಅರಬ್ಬೀ ಸಮುದ್ರದ ಒಳಗೆ ಸೇರುತ್ತದೆ. ಮುಂದಿನ ದಿನಗಳಲ್ಲಿ ರಾಮನಗರ, ಚನ್ನಪಟ್ಟಣ, ಮಾಗಡಿ ನಿಮ್ಮದಲ್ಲ, ಕಮಲದ ಪಾಲಾಗುತ್ತದೆ ಎಂದು ಹರಿಹಾಯ್ದರು.

ದೇವೇಗೌಡ, ಹೆಚ್​ಡಿಕೆ ಅವರೇ ಪರಿವರ್ತನೆ ಕಾಲ ಆರಂಭವಾಗಿದೆ. ಮನಮೋಹನ್ ಸಿಂಗ್ ಇದ್ದಿದ್ರೆ ಲಸಿಕೆ ಕಂಡು ಹಿಡಿಯುತ್ತಿರಲಿಲ್ಲ. ಕಂಡು ಹಿಡಿದ್ರಿದ್ರೂ ಸೋನಿಯಾ, ರಾಹುಲ್​​ಗೆ ಮೊದಲು ಕೊಡುತ್ತಿದ್ರು. ಆದರೆ ಮೋದಿ ವೈದ್ಯರು, ನರ್ಸ್​​ಗಳಿಗೆ ಮೊದಲು ಲಸಿಕೆ ಕೊಟ್ಟರು. ಮಾ.12ರಂದು ಹೈವೇ ಉದ್ಘಾಟನೆಗೆ ಪ್ರಧಾನಿ ಮೋದಿ ಬರುತ್ತಾರೆ. ಬಿಜೆಪಿಗೆ ಮತ ಹಾಕಿ ರಾಮನಗರ ಅಭಿವೃದ್ಧಿಗೆ ಅವಕಾಶ ಕೊಡಿ ಎಂದರು.

ಇದನ್ನೂ ಓದಿ: ಹಗರಣ ಮುಚ್ಚಿಹಾಕಲೆಂದೇ ಲೋಕಾಯುಕ್ತ ಮುಚ್ಚಿಸಿದ್ದ ಸಿದ್ದರಾಮಯ್ಯ; ಸಿಎಂ ಬೊಮ್ಮಾಯಿ ವಾಗ್ದಾಳಿ

ಕುಮಾರಸ್ವಾಮಿಗೂ ಚನ್ನಪಟ್ಟಣಕ್ಕೂ ಯಾವುದೇ ಸಂಬಂಧ ಇರಲಿಲ್ಲ: ಯೋಗೇಶ್ವರ್

ಎಂಎಲ್​ಸಿ ಯೋಗೇಶ್ವರ್​ ಮಾತನಾಡಿ, ಕುಮಾರಸ್ವಾಮಿಗೂ ಚನ್ನಪಟ್ಟಣಕ್ಕೂ ಯಾವುದೇ ಸಂಬಂಧ ಇರಲಿಲ್ಲ. ಹೆಚ್​​.ಡಿ.ಕುಮಾರಸ್ವಾಮಿ ಆಡಳಿತ ವೈಫಲ್ಯ ಬಗ್ಗೆ ಜನರಿಗೆ ತಿಳಿಸ್ತಿದ್ದೇವೆ. ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಹೆಚ್​.ಡಿ.ಕುಮಾರಸ್ವಾಮಿ ಸಾಧನೆ ಕೇವಲ ಕಣ್ಣೀರು ಇದೆ. ಚನ್ನಪಟ್ಟಣ ಕಾರ್ಯಕರ್ತರಿಗೆ ಕುಮಾರಸ್ವಾಮಿ ಏನು ಮಾಡಿದರು. ಜೆಡಿಎಸ್ ಬೆಂಬಲಿಸುವ ಒಕ್ಕಲಿಗರಿಗೆ ಹೆಚ್​ಡಿಕೆ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.